

ಅರಕಲಗೂಡು: ಏಡ್ಸ್ ಮಾರಕ ರೋಗವಾಗಿದ್ದು ಸೋಂಕಿನ ಕುರಿತು ಅರಿವು ಮೂಡಿಸಿಕೊಂಡಾಗ ಮಾತ್ರ ಇದರ ನಿಯಂತ್ರಣ ಸಾಧ್ಯವಾಗುತ್ತದೆ ಎಂದು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ ಸ್ವಾಮಿಗೌಡ ತಿಳಿಸಿದರು.
ಆಸ್ಪತ್ರೆ ಆವರಣದಲ್ಲಿ ಬುಧವಾರ ಏಡ್ಸ್ ನಿಯಂತ್ರಣ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕಲಾ ತಂಡಗಳ ಮೂಲಕ ಏಡ್ಸ್ ರೋಗದ ಬಗ್ಗೆ ಅರಿವು ಮೂಡಿಸುವ ಕಾರ್ಯ ನಡೆಸಲಾಗುತ್ತಿದೆ. ಪಟ್ಟಣದ ಹೆಚ್ಚುಜನ ಸಂಚಾರದ ಪ್ರದೇಶಗಳಲ್ಲಿ ಕಲಾ ತಂಡಗಳು ಗಾಯನ ಮತ್ತು ಬೀದಿ ನಾಟಕ ಪ್ರದರ್ಶನ ನಡೆಸಿ ಅರಿವು ಮೂಡಿಸುವ ಕಾರ್ಯ ನಡೆಸಲಿವೆ. ಜನರು ಈ ರೋಗದ ಬಗ್ಗೆ ಅರಿವು ಪಡೆದು ಜಾಗೃತರಾಗಿರುವಂತೆ ಮನವಿ ಮಾಡಿದರು.
ಆರೋಗ್ಯ ಕಾರ್ಯಕರ್ತರು ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಿದರು. ಕಲಾತಂಡಗಳು ವಿವಿಧ ವೃತ್ತಗಳಲ್ಲಿ ಪ್ರದರ್ಶನದ ಮೂಲಕ ಅರಿವು ಮೂಡಿಸಿದರು.