ಏಕಮುಖ ವಾಹನ ಸಂಚಾರಕ್ಕೆ ಆದೇಶ

HUN-OCT-7-3(GOKULA ROAD HUNSUR)
ಹುಣಸೂರು ನಗರದ ಗೋಕುಲ ರಸ್ತೆ.
Published on

ಹುಣಸೂರು:

ಇಲ್ಲಿನ ಗೋಕುಲ ರಸ್ತೆಯಲ್ಲಿ ಏಕಮುಖ ವಾಹನ ಸಂಚಾರಕ್ಕೆ ಜಿಲ್ಲಾಧಿಕಾರಿ ಆದೇಶಿಸಿದ್ದು, ಈ ಮೂಲಕ ನಾಗರಿಕರ ಹಲವು ವರ್ಷಗಳ ಬೇಡಿಕೆ ಈಡೇರಿದಂತಾಗಿದೆ.

ನಗರದ ಹಳೆದ ಬಿ.ಎಂ. ರಸ್ತೆಯ ನವನಗರ ಕೋ-ಆಪರೇಟಿವ್ ಬ್ಯಾಂಕ್‌ನಿಂದ ರಾಷ್ಟ್ರೀಯ ಹೆದ್ದಾರಿ 275ರವರೆಗಿನ ಗೋಕುಲ ರಸ್ತೆ ಸುಮಾರು 35 ಅಡಿ ವಿಸ್ತಾರವಾಗಿ ದಕ್ಷಿಣೋತ್ತರವಾಗಿದ್ದು, ಈ ರಸ್ತೆಯ ಎರಡೂ ಬದಿಗಳಲ್ಲಿ ರಸಗೊಬ್ಬರ ಮಾರಾಟ ಮಳಿಗೆಗಳು, ಆಗ್ರೋ ಕೇಂದ್ರಗಳು, ವಕೀಲರ ಕಚೇರಿ, ಗ್ಯಾರೇಜ್‌ಗಳು ಇವೆ. ಇದೇ ಮಾರ್ಗವಾಗಿ ಸಂತ ಜೋಸೆಫರ ಕಾಲೇಜು ಮತ್ತು ಶಾಸ್ತ್ರಿ ವಿದ್ಯಾಸಂಸ್ಥೆ ಇದೆ. ಹೀಗಾಗಿ ಹೆಚ್ಚಿನ ವಿದ್ಯಾರ್ಥಿಗಳು ಹಾಗೂ ಸಾರ್ವಜನಿರು ಓಡಾಡುತ್ತಿದ್ದರಿಂದ ಸಂಚಾರ ದಟ್ಟಣೆಯಿಂದಾಗಿ ಅಪಘಾತಗಳು ಸಂಭವಿಸುತ್ತಿದ್ದವು. ಈ ಕುರಿತು ಸಾರ್ವಜನಿಕರಿಂದ ದೂರುಗಳ ಬಂದ ಹಿನ್ನೆಲೆಯಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸಲು ಮತ್ತು ಅಪಘಾತಗಳನ್ನು ತಡೆಯಲು ಅನುಕೂಲವಾಗುವಂತೆ ಗೋಕುಲ ರಸ್ತೆಯ ದಕ್ಷಿಣೋತ್ತರವಾಗಿ ರಾಷ್ಟ್ರೀಯ ಹೆದ್ದಾರಿ 275ರವರೆಗೆ ಏಕಮುಖ ಸಂಚಾರ ವ್ಯವಸ್ಥೆ ಜಾರಿಗೊಳಿಸುವಂತೆ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಆದೇಶಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net