ಏ.24ರಿಂದ ಹಿಮಾಲಯ ಸಾಹಸ ಯಾತ್ರೆ

Himalaya (FILEminimizer)
Published on

ನಗರದ ಗೋಕುಲಂನಲ್ಲಿರುವ ಟೈಗರ್ ಅಡ್ವೆಂಚರ್ ಫೌಂಡೇಷನ್ ವತಿಯಿಂದ ಏ.24ರಿಂದ ಮೇ 7ರವರೆಗೆ ಪೌರ ಕಾರ್ಮಿಕರ ಮಕ್ಕಳಿಗಾಗಿ ಹಿಮಾಲಯ ಸಾಹಸ ಯಾತ್ರೆ ಕಾರ್ಯಕ್ರಮ ಆಯೋಜಿಸಲಾಗಿದೆ. ಹೀಗಾಗಿ ನಗರದ ಪೌರ ಕಾರ್ಮಿಕರ ಮಕ್ಕಳು ಪ್ರಯೋಜನ ಪಡೆಯಬಹುದಾಗಿದೆ ಎಂದು ಅಧ್ಯಕ್ಷ ಸೋಲಂಕಿ ತಿಳಿಸಿದರು.

13 ರಿಂದ 20 ವರ್ಷ ವಯಸ್ಸಿನ ಮಕ್ಕಳು ಪಾಲ್ಗೊಳ್ಳಬಹುದಾಗಿದೆ. ಪ್ರತಿಯೊಬ್ಬರಿಗೂ ಸುಮಾರು 85 ಸಾವಿರ ರೂ. ವೆಚ್ಚವಾಗಲಿದ್ದು, ಸಂಸ್ಥೆಯೇ ಭರಿಸಲಿದೆ. ಪೌರ ಕಾರ್ಮಿಕರ ಮಕ್ಕಳಲ್ಲೂ ಸಾಹಸ, ಕ್ರಿಯಾಶೀಲತೆ ಮತ್ತು ನಾಯಕತ್ವ ಗುಣ ಬೆಳೆಸುವುದು ಈ ಕಾರ್ಯಕ್ರಮದ ಉದ್ದೇಶ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಒಟ್ಟು 10 ರಿಂದ 12 ಮಕ್ಕಳನ್ನು ಮಾತ್ರ ಆಯ್ಕೆ ಮಾಡಿ, ಅವರಿಗೆ ಚಾಮುಂಡಿಬೆಟ್ಟ, ಕುಂತಿಬೆಟ್ಟಗಳ ಚಾರಣವನ್ನು ವಾರಾಂತ್ಯದ ದಿನಗಳಲ್ಲಿ ಆಯೋಜಿಸಿ ತರಬೇತಿ ನೀಡಲಾಗುವುದು. ತಂಡ ಡೆಹ್ರಾಡೂನ್ ತಲುಪಿ, ಅಲ್ಲಿಂದ ಹರ್ಶಿಲ್ ಬೇಸ್ ಕ್ಯಾಂಪ್ ಸೇರಲಿದೆ. ಅಲ್ಲಿಂದ ಲಾಲ್ ದೇವ್ಟಾ, ಕ್ಯಾರ್‌ಕೋಟಿ ಮೆಡೋಸ್ ಮತ್ತು ಅಂತಿಮವಾಗಿ ಲ್ಯಾಂಬ್ ತಲ್ ತಲುಪಿ ಸುಮಾರು 14 ಸಾವಿರ ಅಡಿಗಳಷ್ಟು ಎತ್ತರದವರೆಗೂ ಚಾರಣ ನಡೆಯಲಿದೆ. ಇದಕ್ಕೂ ಮೊದಲು ದೈಹಿಕ ದೃಢತೆಯ ಪರೀಕ್ಷೆ ನಡೆಸಲಾಗುವುದು ಎಂದರು. ಹೆಚ್ಚಿನ ಮಾಹಿತಿಗೆ ಮೊ.9845116835 ಸಂಪರ್ಕಿಸಬಹುದು ಎಂದು ಮಾಹಿತಿ ನೀಡಿದರು.

ದಿಯಾ ಫೌಂಡೇಷನ್ ಟ್ರಸ್ಟಿ ನಮ್ರತಾ ಶೆಣೈ, ಅನಿಲ್ಕುಮಾರ್, ಸಂತೋಷ್, ಕೋಮಲ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net