ಸಿದ್ದಾಪುರ : ಇತಿಹಾಸ ಪ್ರಸಿದ್ಧ ಕೊಂಡಂಗೇರಿ ಉರುಸ್ ಏ.18ರಿಂದ 22 ರವರಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಆಚರಿಸಲಾಗುತ್ತದೆ ಎಂದು ಕೊಂಡಂಗೇರಿ ಸುನ್ನೀ ಮುಸ್ಲಿಂ ಜಮಾಅತ್ ಅಧ್ಯಕ್ಷ ಕುಪ್ಪಂದರ ಕೆ. ಯೂಸುಫ್ ಹಾಜಿ ತಿಳಿಸಿದ್ದಾರೆ.
ಏ.18 ರಂದು ಮಧ್ಯಾಹ್ನ 2 ಗಂಟೆಗೆ ಮಖಾಂ ಅಲಂಕಾರ ಹಾಗೂ ದುಆಃ ನಂತರ ಸಾಮೂಹಿಕ ಪ್ರಾರ್ಥನೆ ನಡೆಯಲಿದೆ. ಏ.22 ರಂದು ಸರ್ವಧರ್ಮ ಸಮ್ಮೇಳನ ಹಾಗೂ ಅನ್ನದಾನ ನಡೆಯಲಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಉರುಸ್ ಸಮ್ಮೇಳನದಲ್ಲಿ ಜನಪ್ರತಿನಿಧಿಗಳು, ಧಾರ್ಮಿಕ ಪಂಡಿತರು, ಸಮಾಜಸೇವಕರು, ಗಣ್ಯರು, ಜಿಲ್ಲೆ ಹಾಗೂ ಹೊರ ಜಿಲ್ಲೆಯ ನಾನಾ ಭಾಗಗಳಿಂದ ಹೆಚ್ಚಿನ ಸಂಖ್ಯೆಯ ಭಕ್ತರು ಭಾಗವಹಿಸಲಿದ್ದು ಅಗತ್ಯ ಸಿದ್ಧತೆಗಳನ್ನು ಮಾಡಲಾಗುತ್ತಿದೆ ಎಂದರು.
ಸಮಿತಿಯ ಉಪಾಧ್ಯಕ್ಷ ಕನ್ನಡಿಯಂಡ ಎಂ. ಮೊಹಮ್ಮದ್, ಪ್ರಧಾನ ಕಾರ್ಯದರ್ಶಿ ಪುಡಿಯಂಡ ಈ ಶಾದುಲಿ, ಖಜಾಂಚಿ ಪೊಯಕಾರ ಇ. ಅಲಿ, ಸದಸ್ಯರಾದ ಜಲಂಬರ ಅಬ್ದುಲ್ ಖಾದರ್, ಪೇರಿಯಂಡ ಮಾಹಿನ್, ಮೀತಲೆಸಾದಲಿ, ಚೀರಂಡ ಎ. ಹ್ಯಾರಿಸ್, ತಕ್ಕ ಮುಖ್ಯಸ್ಥರಾದ ಪೇರಿಯಂಡ ಎ.ಕೆ.ಅಹಮದ್ ಮುಸ್ಲಿಯಾರ್, ಕುಪ್ಪಂದರೆ ಎಂ. ಯಾಹ್ಯ ಹಾಜಿ, ಎಂ.ಐ. ಇಕ್ಬಾಲ್ ಸೇರಿದಂತೆ ಮತ್ತಿತರರು ಹಾಜರಿದ್ದರು.