

ಮೈಸೂರು ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಜ್ಞಾನಧ್ವನಿ 90.8 ಎಫ್‌ಎಂ ಕೇಂದ್ರ ವತಿಯಿಂದ ಭಾನುವಾರ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಹಾಗೂ ಪಾಲಕರಿಗೆ ನೇರ ಫೋನ್ ಇನ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ 117 ಪ್ರಶ್ನೆಗಳ ಸಂದೇಹ ಸಮಸ್ಯೆಗಳನ್ನು ಪರಿ ಹರಿಸಲಾಯಿತು. ವಿಜ್ಞಾನ, ಗಣಿತ, ಸಮಾಜ ವಿಜ್ಞಾನ ವಿಷಯಗಳಿಗೆ ಸಂಬಂಧಿಸಿದ ಪ್ರಶ್ನೆಗಳು ಹೆಚ್ಚಾಗಿ ಕೇಳಿ ಬಂದವು. ಸಮಾಜ ವಿಜ್ಞಾನದಲ್ಲಿ ಭಾರತದ ನಕ್ಷೆಯಲ್ಲಿನ ಸ್ಥಳಗಳನ್ನು ಗುರುತಿಸುವ ಬಗ್ಗೆ, ಇತಿಹಾಸದಲ್ಲಿ ಯುದ್ಧ ಘಟನೆ ಮತ್ತಿತರ ಇಸವಿಗಳನ್ನು ನೆನಪು ಮಾಡಿಕೊಳ್ಳುವ ಬಗ್ಗೆ ಕಾರ್ಯಕ್ರಮದಲ್ಲಿ ಪಾಲಕರು ಹಾಗೂ ವಿದ್ಯಾರ್ಥಿಗಳಿಂದ ಪ್ರಶ್ನೆ ಕೇಳಿ ಬಂದವು. ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎನ್.ರಾಜು, ಕ್ಷೇತ್ರ ಸಮನ್ವಾಧಿಕಾರಿ ಶ್ರೀಕಂಠ ಸ್ವಾಮಿ, ಎಸ್‌ಎಸ್‌ಎಲ್‌ಸಿ ನೋಡಲ್ ಅಧಿಕಾರಿ ರಾಜೇಶ್, ಶಿಕ್ಷಕರಾದ ಸುಮಾ, ಶ್ವೇತಾ, ಶೋಭಾ ಇತರರಿದ್ದರು.