ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಕಾಲಹರಣ ಮಾಡದಿರಿ

klr school
ಕೋಲಾರದ ಡಿಡಿಪಿಐ ಕಚೇರಿಯ ವಿಷಯ ಪರಿವೀಕ್ಷಕ ಶಂಕರೇಗೌಡ ತಾಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢ ಶಾಲೆಯಲ್ಲಿ ಎಸ್​ಎಸ್​ಎಲ್​ಸಿ ವಿದ್ಯಾರ್ಥಿಗಳಿಗೆ ಕನ್ನಡ ವಿಷಯ ಪರಿವೀಕ್ಷಕ ಶಂಕರೇಗೌಡ ಪರೀಾ ಮಾರ್ಗದರ್ಶನ ನೀಡಿದರು.
Published on

ಕೋಲಾರ: ಎಸ್​ಎಸ್​ಎಲ್​ಸಿ ಪರೀಕ್ಷೆಗೆ ಕೆಲವೇ ದಿನಗಳು ಬಾಕಿ ಇದ್ದು, ಪ್ರತಿ ಕ್ಷಣವೂ ವಿದ್ಯಾರ್ಥಿಗಳ ಪಾಲಿಗೆ ಅಮೂಲ್ಯವಾಗಿದ್ದು ವಿಷಯವಾರು ಗೊಂದಲಗಳಿದ್ದಲ್ಲಿ ಈಗಲೇ ನಿವಾರಿಸಿಕೊಂಡು ಸಿದ್ಧರಾಗಿ ಎಂದು ಕನ್ನಡ ವಿಷಯ ಪರಿವೀಕ್ಷಕ ಶಂಕರೇಗೌಡ ಹೇಳಿದರು.

ತಾಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಎಸ್​ಎಸ್​ಎಲ್​ಸಿ ಮಕ್ಕಳೊಂದಿಗೆ ಹಮ್ಮಿಕೊಂಡಿದ್ದ ಸಂವಾದದಲ್ಲಿ ಮಾತನಾಡಿ, ಕನ್ನಡದಲ್ಲಿ ಅನುತ್ತೀರ್ಣರಾದರೆ ಅದು ನಿಜಕ್ಕೂ ಬೇಸರದ ಸಂಗತಿ. ನೀವು ಓದುವುದರ ಜತೆಗೆ ಕ್ಲಿಷ್ಟಕರ ಪ್ರಶ್ನೆಗಳಿಗೆ ಉತ್ತರ ಬರೆದು ಅಭ್ಯಾಸ ಮಾಡಿದರೆ ಪರೀೆ ಎದುರಿಸುವುದು ಸುಲಭವಾಗುತ್ತದೆ ಎಂದರು. ವಿದ್ಯಾರ್ಥಿಗಳು ಪರೀಕ್ಷೆ ಕುರಿತು ಭಯಪಡುವ ಅಗತ್ಯವಿಲ್ಲ, ಚೆನ್ನಾಗಿ ಓದಿ ಸಿದ್ಧವಾದವರಿಗೆ ಭಯ ಏಕೆ?, ಪಠ್ಯಕ್ರಮ ಪೂರ್ಣಗೊಂಡಿರುವುದನ್ನು ಖಾತರಿ ಮಾಡಿಕೊಂಡು ನೈಜಗುರಿ ಸಾಧನೆಗೆ ಓದು ಮುಂದುವರೆಸಬೇಕು ಎಂದು ಸಲಹೆ ನೀಡಿದರು.

ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ಶಿಸ್ತು ಇರಬೇಕು. ಶಾಲೆ, ಮನೆಯಲ್ಲಿ ಕಾಲಹರಣ ಮಾಡಬಾರದು, ಎಸ್​ಎಸ್​ಎಲ್​ಸಿ ಜೀವನದ ಮೊದಲ ಪಬ್ಲಿಕ್​ ಪರೀಕ್ಷೆಯಾಗಿದೆ. ಇದರಿಂದ ನಿಮ್ಮಲ್ಲಿ ಭಯ ಸಹಜ ಆದರೆ, ನೀವು ಕಲಿಕೆಯಲ್ಲಿ ದೃಢತೆ ಸಾಧಿಸಿದರೆ ನೀವು ಹೆದರುವ ಅಗತ್ಯವೇ ಇಲ್ಲ ಎಂದು ಎಚ್ಚರಿಸಿದರು.

ಪಠ್ಯದಲ್ಲಿನ ಪ್ರತಿ ಪ್ರಶ್ನೆಗೂ ಉತ್ತರಿಸುವ ಶಕ್ತಿ ನಿಮಗೆ ಬಂದರೆ ಹೆದರಿಕೆ ನಿಮ್ಮಿಂದ ತಾನಾಗಿಯೇ ದೂರವಾಗುತ್ತದೆ. ನಿತ್ಯ ವೇಳಾಪಟ್ಟಿಹಾಕಿಕೊಂಡು ಅಭ್ಯಾಸ ಮಾಡಿ. ಮೊಬೈಲ್​ ನೋಡದಿರಿ, ಓದಲು ಆಸಕ್ತಿ ಹೆಚ್ಚಲು ಉತ್ತಮ ನಿದ್ದೆಯೂ ಅಗತ್ಯವಿದೆ. ಆರೋಗ್ಯದ ಕಡೆ ಗಮನ ಇರಬೇಕು ಎಂದರು.

ಪ್ರಶ್ನೆಪತ್ರಿಕೆ ಯಾವುದೇ ರೀತಿ ಕೊಟ್ಟರೂ ನೀವು ಉತ್ತರಿಸಲು ಸಿದ್ಧರಾಗಿರಬೇಕು. ಕ್ರೀಡೆ, ಆಟ, ಸಿನಿಮಾ ಎಲ್ಲವನ್ನು ಪರೀಕ್ಷೆ ಮುಗಿಯುವವರೆಗೂ ಮರೆತುಬಿಡಿ. ನಿಮ್ಮ ಗುರಿ ಏನಿದ್ದರೂ ಪರೀೆಯ ಕಡೆ ಇರಬೇಕು ಎಂದು ತಿಳಿಸಿದರು.

ಮುಖ್ಯಶಿಕ್ಷಕಿ ತಾಹೇರಾ ನುಸ್ರುತರ ಮಾತನಾಡಿ, ಈಗಾಗಲೇ ಪಠ್ಯಕ್ರಮ ಮುಗಿಸಿ ಪುನರ್ಮನನ ಹಾಗೂ ಗುಂಪು ಅಧ್ಯಯನಕ್ಕೆ ಆದ್ಯತೆ ನೀಡಲಾಗಿದೆ. ಪ್ರತಿ ವಿದ್ಯಾರ್ಥಿಯನ್ನು ಗಮನಿಸಲಾಗುತ್ತಿದೆ, ಕಲಿಕೆಯಲ್ಲಿ ಹಿಂದುಳಿದ ಮಕ್ಕಳು ಹೆಚ್ಚಿನ ಪರಿಶ್ರಮ ಹಾಕಬೇಕು ಎಂದರು.

ಸಂವಾದದಲ್ಲಿ ಶಿಕ್ಷಕರಾದ ಎಂ.ಆರ್​.ಗೋಪಾಲಕೃಷ್ಣ, ಭವಾನಿ, ವೆಂಕಟರೆಡ್ಡಿ, ಸುಗುಣಾ, ಶ್ವೇತಾ, ಲೀಲಾ, ರಮಾದೇವಿ, ಶ್ರೀನಿವಾಸಲು, ಚಂದ್ರಶೇಖರ್​ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net