ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಳಕ್ಕೆ ಕ್ರಮ

2601Klb05
Published on

ಕಲಬುರಗಿ: ಸರ್ಕಾರಿ ಶಾಲೆಯ ೧೦ ಎಸ್ಸೆಸ್ಸೆಲ್ಸಿ ಕಲಿಕಾ ಆಸರೆ ಮಕ್ಕಳಿಗೆ ಪುಸ್ತಕ ವಿತರಿಸುವ ಮೂಲಕ ಗಣರಾಜ್ಯ ದಿನವನ್ನು ವಿದ್ಯಾರ್ಥಿಗಳಿಗೆ ಅರ್ಪಿಸಿರುವ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಡಾ.ಅಜಯಸಿಂಗ್, ಬರುವ ದಿನಗಳಲ್ಲಿ ಈ ಭಾಗದ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಹೆಚ್ಚಿಸುವ ಮಹತ್ವದ ಕ್ರಮ ಇದಾಗಿದೆ ಎಂದು ಹೇಳಿದರು.

ಮಂಡಳಿ ಕಲಬುರಗಿ ಕಚೇರಿಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕಲಿಕಾ ಆಸರೆ ಪುಸ್ತಕಗಳನ್ನು ಎಸ್ಸೆಸ್ಸೆಲ್ಸಿ 10 ಮಕ್ಕಳಿಗೆ ವಿತರಿಸುವ ಮೂಲಕ ಯೋಜನೆಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಕದ ಏಳು ಜಿ¯್ಲೆಗಳಲ್ಲಿನ ಶಾಲಾ ಮೂಲಸೌಲಭ್ಯ ಸುಧಾರಣೆಗೆ ಅಕ್ಷರ ಅವಿಷ್ಕಾರ ಯೋಜನೆ ಜಾರಿಗೆ ತರಲಾಗಿದೆ. ಕಲಿಕೆಯಲ್ಲಿ ಮಂದಗತಿಯಲ್ಲಿರುವ ಮಕ್ಕಳನ್ನು ಗುರುತಿಸಿ ಹೆಚ್ಚುವರಿ ಓದಿಗಾಗಿ ಈ ಪುಸ್ತಕ ನೀಡಲಾಗುತ್ತಿದೆ ಎಂದರು.

ಶಿಕ್ಷಣ ಇಲಾಖೆ ಸಹಯೋಗದಡಿ ಸಿ ಮತ್ತು ಪ್ಲಸ್ ಎಂಬ ಗ್ರೇಡ್‌ಗಳಲ್ಲಿರುವ ಕಲ್ಯಾಣದ ಏಳು ಜಿಲ್ಲೆಗಳ 3,23,080 ಮಕ್ಕಳಿಗೆ ಪುಸ್ತಕ ವಿತರಿಸಲಾಗುವುದು. ಹಳ್ಳಿಯಲ್ಲಿರುವ ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸುವ ಕ್ರಮ ಇದಾಗಿದೆ. 7 ಜಿಲ್ಲಾ ಸರ್ಕಾರಿ ಶಾಲೆಗಳಲ್ಲಿರುವ 1.05 ಲಕ್ಷ ಮಕ್ಕಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುತ್ತಿದ್ದಾರೆ. ನಮ್ಮ ಭಾಗದ ಜಿಲ್ಲೆಗಳು ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಕೆಳ ಹಂತದಲ್ಲೇ ಉಳಿಯುತ್ತಿವೆ. ಇದನ್ನು ಮೀರಿ ಟಾಪ್ ೨೦ರಲ್ಲಿ ಬರಬೇಕು ಎಂಬುದೇ ಈ ಯೋಜನೆ ಉದ್ದೇಶ ಎಂದು ವಿವರಿಸಿದರು.
ಮಂಡಳಿ ಕಾರ್ಯದರ್ಶಿ ಸುಂದರೇಶ ಬಾಬು, ಶಾಲಾ ಶಿಕ್ಷಣ ಇಲಾಖೆ ಅಪರ ಆಯುಕ್ತ ಡಾ.ಆಕಾಶ ಶಂಕರ, ಉಪ ಕಾರ್ಯದರ್ಶಿ ಪ್ರಮಿಳಾ ಪೆರ್ಲ, ಮಲ್ಲಿಕಾರ್ಜುನ ರೆಡ್ಡಿ, ಶಾಲಾ ಶಿಕ್ಷಣ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಚೆನ್ನಬಸಪ್ಪ ಮುಧೋಳ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net