

ರಾಜ್ಯ ಸರ್ಕಾರಿ ಎಸ್‌ಸಿ, ಎಸ್‌ಟಿ ನೌಕರರ ಸಂಘದ ಜಿಲ್ಲಾ ಸಮಿತಿಯಿಂದ ನಗರದ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಭಾನುವಾರ ಕ್ರೀಡಾಕೂಟ ನಡೆಯಿತು.
ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ರಾಜ್ಯ, ಕೇಂದ್ರ ಸರ್ಕಾರದ ಎಸ್‌ಸಿ, ಎಸ್‌ಟಿ ನೌಕರರು ಮತ್ತು ಕುಟುಂಬ ಸದಸ್ಯರು ವಿವಿಧ ಆಟೋಟಗಳಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.
ಗಾಂಧಿನಗರದ ಉರಿಲಿಂಗಿ ಪೆದ್ದಿ ಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಉಪಸ್ಥಿತಿಯಲ್ಲಿ ಲೋಕೋಪಯೋಗಿ ಇಲಾಖೆ ಅಧೀಕ್ಷಕ ಅಭಿಯಂತರ ಆರ್.ವಿನಯ ಕುಮಾರ್ ಕ್ರೀಡಾಕೂಟವನ್ನು ಉದ್ಘಾಟಿಸಿದರು. ಸಂಘದ ಜಿಲ್ಲಾಧ್ಯಕ್ಷ ಡಾ.ಎಂ.ಡಿ.ಶಿವರಾಮಕೃಷ್ಣ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಂಘದ ರಾಜ್ಯಾಧ್ಯಕ್ಷ ಡಿ.ಚಂದ್ರಶೇಖರಯ್ಯ ಅಧ್ಯಕ್ಷತೆ ವಹಿಸಿದ್ದರು.
ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಜಂಟಿ ನಿರ್ದೇಶಕ ಡಾ.ಲಕ್ಷ್ಮಮ್ಮ, ಸಂಘದ ಗೌರವ ಸಲಹೆಗಾರ ಅಹಿಂದ ಜವರಪ್ಪ, ಚೆಲುವಾಂಬ ಆಸ್ಪತ್ರೆ ನಿವೃತ್ತ ವೈದ್ಯಕೀಯ ಅಧೀಕ್ಷಕ ಡಾ.ರಾಜೇಂದ್ರ ಕುಮಾರ್, ಎಚ್.ಡಿ.ಕೋಟೆ ತಾಲೂಕು ಉಪ ಮುಖ್ಯ ವೈದ್ಯಾಧಿಕಾರಿ ಡಾ.ಸೋಮಣ್ಣ ಭಾಗವಹಿಸಿದ್ದರು.
ಹಗ್ಗಜಗ್ಗಾಟ: ಶ್ರೀನಿವಾಸ್ ಮತ್ತು ತಂಡ(ಪ್ರ), ಗೋವಿಂದರಾಜು ಮತ್ತು ತಂಡ(ದ್ವಿ). ಮ್ಯೂಸಿಕಲ್ ಚೇರ್: ಮಹಿಳೆಯರ ವಿಭಾಗದಲ್ಲಿ ಬಿ.ಸೌಮ್ಯಾ(ಪ್ರ), ಅಶ್ವಿನಿ(ದ್ವಿ), ಎಚ್.ಪಿ.ರಶ್ಮಿ(ತೃ), 50 ವರ್ಷದ ವಿಭಾಗ: ಕೆ.ಭಾಮಾ(ಪ್ರ), ಎಚ್.ಸಿ.ಶೋಭಾ(ದ್ವಿ), ಸುವರ್ಣಾ ತೃ). ಮಡಿಕೆ ಹೊಡೆಯುವ: 20ರಿಂದ 30 ವರ್ಷದ ಪುರುಷರ ಮಡಿಕೆ ಹೊಡೆಯುವ ಸ್ಪರ್ಧೆಯಲ್ಲಿ ಧನರಾಜ್ (ಪ್ರ), ಠಾಕೂರ್ ನಾಯಕ್ (ದ್ವಿ), ಹರೀಶ್ (ತೃ). 20ರಿಂದ 30 ವರ್ಷದೊಳಗಿನ ಮಹಿಳೆಯರ ವಿಭಾಗದ ಓಟದಲ್ಲಿ ಸಿ.ಎಂ.ಲೋಕಿತಾ (ಪ್ರ), ಹಿಸಾ (ದ್ವಿ), ಬಿ.ಎಸ್.ಸ್ಫೂರ್ತಿ (ತೃ), 30ರಿಂದ 40 ವರ್ಷದೊಳಗಿನ ಮಹಿಳೆಯರ ನಡಿಗೆ ವಿಭಾಗದಲ್ಲಿ ವೇದಾವತಿ (ಪ್ರ), ಎಂ.ಪವಿತ್ರಾ (ದ್ವಿ), ಎಚ್.ಪಿ.ರಶ್ಮಿ (ತೃ). 15 ವರ್ಷ ಮೇಲ್ಪಟ್ಟವರ 100 ಮೀಟರ್ ಓಟದಲ್ಲಿ ಎಸ್.ಕುಮಾರ್ (ಪ್ರ), ಪಿ.ಭುವನ್ (ದ್ವಿ), ವೈ.ದಿಗಂತ್ (ತೃ), ಬಾಲಕಿಯರ ವಿಭಾಗದಲ್ಲಿ ಅರ್ಚನಾ (ಪ್ರ), ಪಿ.ಹೇಮಾ (ದ್ವಿ), ಹರ್ಷಿಣಿ (ತೃ), ಸ್ಪೋರ್ಟ್ಸ್ ಹಾಸ್ಟೆಲ್ ಬಾಲಕರ 100 ಓಟದಲ್ಲಿ ಮನೋಜ್ (ಪ್ರ), ಎಸ್.ಎಂ.ಪಾರ್ಥ (ದ್ವಿ), ಆಶೀರ್ವಾದ್ (ತೃ). 40ರಿಂದ 50 ವರ್ಷದೊಳಗಿನ ಮಹಿಳೆಯರ ನಡಿಗೆಯಲ್ಲಿ ಶಾರದಾ (ಪ್ರ), ಪದ್ಮಾ (ದ್ವಿ), ಎಂ.ನಾಗರತ್ನಮ್ಮ (ತೃ). ಪುರುಷರ ವಿಭಾಗದಲ್ಲಿ ಅರುಣ್ ಕುಮಾರ್ (ಪ್ರ), ಎಂ.ವಿ.ಸಾಗರ್ (ದ್ವಿ), ಎಚ್.ಎ.ರಂಗಸ್ವಾಮಿ (ತೃ) ಬಹುಮಾನ ಪಡೆದರು.