ಎಸ್.ರಘುನಾಥ್, ಆರ್.ಎಸ್.ಸತ್ಯನಾರಾಯಣ್ ಗೆಲುವಿಗೆ ಶ್ರಮಿಸಿ

vote
Published on

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷೀಯ ಚುನಾವಣೆಯಲ್ಲಿ ರಾಜ್ಯಾಧ್ಯಕ್ಷ ಸ್ಥಾನದ ಅಭ್ಯರ್ಥಿ ಎಸ್.ರಘುನಾಥ್ ಹಾಗೂ ಜಿಲ್ಲಾ ಪ್ರತಿನಿಧಿ ಅಧಿಕೃತ ಅಭ್ಯರ್ಥಿ ಆರ್.ಎಸ್.ಸತ್ಯನಾರಾಯಣ್ ಅವರನ್ನು ಬೆಂಬಲಿಸಬೇಕೆಂದು ವಿಪ್ರ ಮುಖಂಡ ಎನ್.ಎಂ.ನವೀನ್ ಕುಮಾರ್ ಮನವಿ ಮಾಡಿದರು.

ಅಖಿಲ ಭಾರತೀಯ ಬ್ರಾಹ್ಮಣ ಮಹಾಸಭಾ ರಾಜ್ಯಾಧ್ಯಕ್ಷರ ಸ್ಥಾನದ ಅಭ್ಯರ್ಥಿ ಆರ್.ರಘುನಾಥರನ್ನು ಬಹುಮತದಿಂದ ಗೆಲ್ಲಿಸಬೇಕು. ಹಾಗೆಯೇ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮದಲ್ಲಿ ಕೆಲವರನ್ನು ರಘುನಾಥ್ ಬೆಂಬಲಿತ ಅಭ್ಯರ್ಥಿಯೆಂದು ಅಪಪ್ರಚಾರ ಮಾಡುತ್ತಿದ್ದಾರೆ. ಅದಕ್ಕೆ ವಿಪ್ರ ಸಮುದಾಯದವರು ಕಿವಿಗೊಡದೆ ಮೈಸೂರಿನ ರಘುನಾಥ್ ಬೆಂಬಲಿತ ಅಧಿಕೃತ ಅಭ್ಯರ್ಥಿ ಆರ್.ಎಸ್.ಸತ್ಯನಾರಾಯಣ್ ಅವರನ್ನು ಬೆಂಬಲಿಸಬೇಕು ಹಾಗೂ ಇನ್ನೊಂದು ಪ್ರತಿನಿಧಿ ಸ್ಥಾನದ ಅಭ್ಯರ್ಥಿ ಭಾಗ್ಯಶ್ರೀ ಭಟ್ ಬೆಂಬಲಿಸಬೇಕೆಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಕೋರಿದರು.

ಜಿಲ್ಲಾ ಪ್ರತಿನಿಧಿ ಸ್ಥಾನದ ಅಭ್ಯರ್ಥಿಗಳಾದ ಆರ್.ಎಸ್.ಸತ್ಯನಾರಾಯಣ್, ಭಾಗ್ಯಶ್ರೀ ಭಟ್, ಹಿರಿಯ ವಿಪ್ರ ಮುಖಂಡರಾದ ಸಿ.ವಿ.ಪಾರ್ಥಸಾರಥಿ, ಎಸ್.ಬಿ.ವಾಸುದೇವ್ ಮೂರ್ತಿ, ನಾಗಚಂದ್ರ, ರಾಜಕುಮಾರ್, ಜಗದೀಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net