ಎಸ್.ಜೆ.ಪ್ರಸನ್ನಕುಮಾರ್ ರವರಿಗೆ ಮುಖ್ಯಮಂತ್ರಿಗಳ ಚಿನ್ನದ ಪದಕ

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಕೋಲಾರದ ಸಿಇಎನ್ ಠಾಣೆಯಲ್ಲಿ ಸಿವಿಲ್ ಕಾನ್ಸ್ಟೆಬಲ್ ಆಗಿ ಕೆಲಸ ಮಾಡುತ್ತಿರುವ ಎಸ್.ಜೆ.ಪ್ರಸನ್ನಕುಮಾರ್ ರವರು ಮುಖ್ಯಮಂತ್ರಿ ಗಳ ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ.

ಮೂಲತಃ ಮುಳಬಾಗಲು ತಾಲ್ಲೂಕಿನವರಾಗಿರುವ ಪ್ರಸನ್ನಕುಮಾರ್ ಕೋಲಾರದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಸಿವಿಲ್ ಕಾನ್ಸ್ ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಸೈಬರ್ ಕ್ರೆöÊಂ ಹಾಗೂ ನಾರ್ಕೊ ಟಿಕ್ ವಿಭಾಗದಲ್ಲಿ ತರಬೇತಿ ಪಡೆದು ಪ್ರಕರಣಗಳ ತನಿಖೆ ಹಾಗೂ ಆರೋಪಿಗಳ ಪತ್ತೆ ಮಾಡುವಲ್ಲಿ ತನಿಖಾಧಿಕಾರಿಗಳಿಗೆ ಪ್ರಾಮಾಣಿಕವಾಗಿ ನೆರವಾಗುತ್ತಿದ್ದರು.

ಇವರು ವಿಶೇಷವಾಗಿ ನ್ಯಾಯಾಲಯಗಳಲ್ಲಿ ಪ್ರಕರಣಗಳ ಅಧಿವಿಚಾರಣೆ ಸಮಯದಲ್ಲಿ ಸಾಕ್ಷಿಗಳನ್ನು ಸಮಯಕ್ಕೆ ಸರಿಯಾಗಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಪ್ರಕರಣಗಳ ಶೀಘ್ರ ವಿಲೇವಾರಿ ಮಾಡುವಲ್ಲಿ ಇವರ ಪಾತ್ರ ಮಹತ್ವವಾಗಿದೆ. ಹಾಗೂ ಇವರು ನ್ಯಾಯಾಲಯ ಕರ್ತವ್ಯ ನಿರ್ವಹಿಸಿದ ಹಲವಾರು ಪ್ರಕರಣಗಳಲ್ಲಿ ಆರೋಪಿಗಳಿಗೆ ಶಿಕ್ಷೆಯೂ ಆಗಿದೆ.

ಇವರ ಕರ್ತವ್ಯದಲ್ಲಿನ ಕಾರ್ಯಧಕ್ಷತೆ, ಪ್ರಾಮಾಣಿಕತೆ ಗಮನಿಸಿದ ಸಿಇಎನ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಜಗದೀಶ್ ಅವರು ಮುಖ್ಯಮಂತ್ರಿ ಗಳ ಚಿನ್ನದ ಪದಕಕ್ಕೆ ಇಲಾಖೆಯ ಮೇಲಧಿಕಾರಿಗಳಿಗೆ ಶಿಫಾರಸ್ಸು ಮಾಡಿದ್ದರು. ಬುಧವಾರ ಬೆಂಗಳೂರಿನಲ್ಲಿ ನಡೆಯುವ ಪೊಲೀಸ್ ಧ್ವಜ ದಿನಾಚರಣೆಯಲ್ಲಿ ಪ್ರಸನ್ನಕುಮಾರ್ ಅವರು ಮುಖ್ಯಮಂತ್ರಿ ಗಳಿಂದ ಸ್ವರ್ಣಪದಕ ವನ್ನು ಸ್ವೀಕರಿಸಲಿದ್ದಾರೆ.

ಚಿತ್ರ ೦೧ ಕೆ.ಎಲ್.ಆರ್ ೦೫ : ಕೋಲಾರದ ಸಿಇಎನ್ ಠಾಣೆಯಲ್ಲಿ ಸಿವಿಲ್ ಕಾನ್ಸ್ಟೆಬಲ್ ಆಗಿ ಕೆಲಸ ಮಾಡುತ್ತಿರುವ ಎಸ್.ಜೆ.ಪ್ರಸನ್ನಕುಮಾರ್ ಮುಖ್ಯಮಂತ್ರಿ ಗಳ ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net