ಎಸ್.ಎನ್.ಆರ್. ಆಸ್ಪತ್ರೆಯ ವಿರುದ್ಧ ಉಪ ಲೋಕಾಯುಕ್ತರು ಸುಮೋಟೋ ಅಡಿಯಲ್ಲಿ ಕೇಸು ದಾಖಲು / ಸ್ವಚ್ಛತೆ, ಅವಧಿ ಮುಗಿದ ಔಷಧಿಗಳು, ಹೆರಿಗೆಗೆ ಬಂದವರಿAದ ಹಣ ಪಡೆಯುವುದು ಇವು ಲೋಕಾಯುಕ್ತರ ಭೇಟಿ ಸಂದರ್ಭದಲ್ಲಿ ಕಂಡು ಬಂದ ನ್ಯೂನತೆಗಳು

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಜಿಲ್ಲಾಡಳಿತ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಹಾಗೂ ಜನಪ್ರತಿನಿಧಿಗಳ ವೈಫಲ್ಯದಿಂದಾಗಿ ಜಿಲ್ಲೆಯ ಎಲ್ಲಾ ಇಲಾಖೆಗಳಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದ್ದು, ಜಿಲ್ಲಾ ಆಡಳಿತ ಯಂತ್ರವನ್ನು ನಿಯಂತ್ರಣಕ್ಕೆ ತರಲು ಉಪಲೋಕಾಯುಕ್ತರು ಅಖಾಡಕ್ಕೆ ಇಳಿದಿದು,್ದ ಜಿಲ್ಲೆಯ ಎಲ್ಲಾ ಇಲಾಖೆಗಳಿಗೂ ಹಾಗೂ ತಾಲ್ಲೂಕುಗಳಿಗೆ ಭೇಟಿ ನೀಡಿ, ಇಲಾಖೆಗಳಲ್ಲಿರುವ ವೈಫಲ್ಯಗಳಿಗೆ ಬಿಸಿ ಮುಟ್ಟಿಸುವ ಕೆಲಸಕ್ಕೆ ಮುಂದಾಗಿದ್ದಾರೆ.

ಅದರ ಭಾಗವಾಗಿ ಕೋಲಾರ ಜಿಲ್ಲಾಸ್ಪತ್ರೆಯಲ್ಲಿನ ಅವ್ಯವಸ್ಥೆಗಳ ಬಗ್ಗೆ ಖುದ್ದು ಪರಿಶೀಲಿಸಿ ಇದೀಗ ಜಿಲ್ಲಾ ಶಸ್ತ್ರ ಚಿಕಿತ್ಸಕರಿಗೆ ನೋಟೀಸ್ ಜಾರಿ ಮಾಡಿದ್ದು ಉತ್ತರಿಸಲು ತಾಕೀತು ಮಾಡಿದ್ದಾರೆ, ಸಮರ್ಪಕ ಉತ್ತರ ನೀಡದಿದ್ದರೆ ಸುಮೋಟೋ ಕೇಸ್ ದಾಖಲಿಸಿಕೊಳ್ಳುವ ಎಚ್ಚರಿಕೆಯನ್ನು ನೀಡಿದ್ದು, ಉತ್ತರ ತಡವಾದ ಹಿನ್ನಲೆಯಲ್ಲಿ ಸುಮೋಟೋ ಅಡಿಯಲ್ಲಿ ಎಸ್.ಎನ್.ಆರ್. ಆಸ್ಪತ್ರೆ ಆಡಳಿತ ವಿರುದ್ಧ ಕೇಸು ದಾಖಲಾಗಿದೆ.

ಉಪಲೋಕಾಯುಕ್ತರಾದ ವೀರಪ್ಪನವರು ಕಳೆದ ತಿಂಗಳು ಮಾ.೧೦ ರಂದು ಎಸ್ ಎನ್ ಆರ್ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಆಸ್ಪತ್ರೆಯ ಆವರಣದಲ್ಲಿ ಸ್ವಚ್ಛತೆಯಿಲ್ಲದೆ ಎಲ್ಲಂದರಲ್ಲಿ ಬಿದ್ದಿದ್ದ ಕಸ, ಶೌಚಾಲಯಗಳಲ್ಲಿ ಸ್ವಚ್ಛತೆ ಇಲ್ಲದಿರುವುದು, ಆಸ್ಪತ್ರೆಯಲ್ಲಿ ಅವಧಿ ಮುಗಿದ ಮಾತ್ರೆ ಮತ್ತು ಚುಚ್ಚುಮದ್ದುಗಳನ್ನು ಇಟ್ಟಿಕೊಂಡಿರುವುದು ಪರಿಶೀಲಿಸಲಾಗಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಹೆರಿಗೆಗೆ ಬರುವವರ ಬಳಿ ಹಣ ವಸೂಲಿ ಮಾಡುವ ಬಗ್ಗೆ ದೂರುಗಳು ಬಂದ ಹಿನ್ನಲೆಯಲ್ಲಿ ನಿಮ್ಮ ಮೇಲೆ ಯಾಕೆ ಸುಮೋಟೋ ದೂರು ದಾಖಲಿಸಿಕೊಳ್ಳಬಾರದು ಎಂದು ಪ್ರಶ್ನಿಸಿ ಮಾರ್ಚ್ ೨೦ ರಂದು ಎಸ್.ಎನ್.ಆರ್. ಆಸ್ಪತ್ರೆಗೆ ನೊಟೀಸ್ ಜಾರಿ ಮಾಡಲಾಗಿತ್ತು.

ಉಪಲೋಕಾಯುಕ್ತರ ನೋಟೀಸ್ ಜಾರಿಯ ಹಿನ್ನಲೆಯಲ್ಲಿ ಎಚ್ಚೆತ್ತುಕೊಂಡು ಎಸ್ ಎನ್ ಆರ್ ಆಸ್ಪತ್ರೆಯ ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ.ಜಗದೀಶ್ ರವರು ಇತ್ತೀಚೆಗೆ ಆಸ್ಪತ್ರೆಯ ಸಿಬ್ಬಂದಿಯ ಸಭೆ ನಡೆಸಿ, ಉಪಲೋಕಾಯುಕ್ತರ ನೋಟೀಸ್‌ಗೆ ಸಿಬ್ಬಂದಿಗಳೇ ಸೂಕ್ತ ಉತ್ತರ ನೀಡಬೇಕು. ಸಿಬ್ಬಂದಿಯ ನೀಡಿದ ಉತ್ತರವನ್ನೇ ಉಪಲೋಕಾಯುಕ್ತರಿಗೆ ನೀಡಲಾಗುವುದು. ಮುಂದಿನ ದಿನಗಳಲ್ಲಿ ಅವರು ಕೈಗೊಳ್ಳುವ ಕ್ರಮಕ್ಕೆ ನೀವೇ ಜವಾಬ್ದಾರರಾಗಿರಬೇಕಾಗುತ್ತದೆ ಎಂದು ಸಭೆಯಲ್ಲಿ ತಾಕೀತು ಮಾಡಲಾಗಿದ್ದು ಸಿಬ್ಬಂದಿ ಕೈ ಕೈ ಹಿಸುಕಿಕೊಳ್ಳುವ ಪರಿಸ್ಥಿತಿ ಎದುರಾಗಿದೆ.

ಉಪ ಲೋಕಾಯುಕ್ತರು ಭೇಟಿ ನೀಡಿದ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಕಂಡುಬAದ ನ್ಯೂನತೆಗಳ ಬಗ್ಗೆ ನೀಡಿದ್ದ ನೋಟಿಸ್ :

೧. ಆಸ್ಪತ್ರೆ ಆವರಣದ ಒಳಗೆ ಹಾಗೂ ಹೊರಗೆ ಕಸ ಕಂಡುಬAದಿದ್ದು, ತ್ಯಾಜ್ಯ ಸರಿಯಾಗಿ ವಿಲೇವಾರಿ ಮಾಡದೆ ಶುಚಿತ್ವವನ್ನು ಕಾಪಾಡಿಕೊಳ್ಳದೇ ಇರುವುದು.

೨. ಆಸ್ಪತ್ರೆಯಲ್ಲಿ ಪುರುಷ ಹಾಗೂ ಮಹಿಳೆಯರ ಶೌಚಾಲಯದಲ್ಲಿ ಸ್ವಚ್ಛತೆಯನ್ನು ಕಾಪಾಡದೇ ಇರುವುದು.

೩. ಸ್ತಿçÃಯರ ಶಸ್ತç ಚಿಕಿತ್ಸಾ ಘಟಕದಲ್ಲಿ ಪೆನಿರಾಮೈನ್ ಮೆಲೇಟ್ ಇಂಜಕ್ಷನ್ ಜನವರಿ ೨೦೨೫ಕ್ಕೆ ಅವಧಿ ಮುಕ್ತಾಯಗೊಂಡಿದ್ದರು. ಚುಚ್ಚುಮದ್ದುಗಳನ್ನು ನಾಶಪಡಿಸದೇ ಇಟ್ಟುಕೊಂಡಿರುವುದು.

೪. ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಫಿಡ್ಸ್ ರೋಗಿಗಳಿಗೆ ನೀಡುವ ಚುಚ್ಚುಮದ್ದು ಹಾಗೂ ಆಂಟಿಬಯೋಟಿಕ್ ಚುಚ್ಚುಮದ್ದುಗಳು ಆಗಸ್ಟ್ ೨೦೨೪ಕ್ಕೆ ಹಾಗೂ ಫೆಬ್ರವರಿ ೨೦೨೫ರಲ್ಲಿ ಅವಧಿ ಮುಗಿದಿದ್ದರೂ ಅವುಗಳನ್ನು ನಾಶಗೊಳಿಸದೇ ಇಟ್ಟುಕೊಂಡಿರುವುದು. ಕಂಡುಬAದಿತು.

೫. ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಗರ್ಭಿಣಿಯರ ಹೆರಿಗೆ ಮಾಡಲು ವೈದ್ಯರು, ನರ್ಸ್ಗಳು ಹಾಗೂ ಸಿಬ್ಬಂದಿಗಳು ಸಾರ್ವಜನಿಕರಿಂದ ಒತ್ತಾಯ ಮಾಡಿ ಹಣ ಪಡೆಯುತ್ತಿದ್ದಾರೆಂಬ ಸಾರ್ವಜನಿಕರು ಉಪಲೋಕಾಯುಕ್ತರು ಭೇಟಿ ನೀಡಿದ ಸಂದರ್ಭದಲ್ಲಿ ನೀಡಿದ ದೂರುಗಳು.

ಬಾಕ್ಸ್

ಜಿಲ್ಲಾಸ್ಪತ್ರೆಯ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು ಹೆರಿಗೆಗೆ ಬಂದಿದ್ದು, ಸಾಮಾನ್ಯ ಹೆರಿಗೆ ಮಾಡಿಸಲು ಅಲ್ಲಿನ ಸಿಬ್ಬಂದಿಯೊಬ್ಬರು ೮ ಸಾವಿರ ಹಣ ಪೀಕಿದ್ದು, ಈ ಬಗ್ಗೆ ಆಸ್ಪತ್ರೆಯ ಜಿಲ್ಲಾ ಶಸ್ತ್ರ ಚಿಕಿತ್ಸಕರಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಳ್ಳದೆ ಲಂಚ ತೆಗೆದುಕೊಂಡ ಸಿಬ್ಬಂದಿಯನ್ನು ರಕ್ಷಿಸುವ ಕೆಲಸಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ ಎಂದು ಆಸ್ಪತ್ರೆಗೆ ಭೇಟಿ ನೀಡಿದ್ದ ಉಪ ಲೋಕಾಯುಕ್ತರು ಸಾರ್ವಜನಿಕರೊಬ್ಬರು ದೂರು ನೀಡಿದ್ದರು.

ಕೋಟ್

ಈಗಾಗಲೇ ಆಸ್ಪತ್ರೆ ವಿರುದ್ಧ ಸುಮೋಟೋ ಅಡಿಯಲ್ಲಿ ಕೇಸು ದಾಖಲಿಸಿದ್ದಾರೆ. ಸೋಮವಾರ ಲೋಕಾಯುಕ್ತ ಕೋರ್ಟಿನ ದಿನಾಂಕ ಇರುವ ಕಾರಣ ಆಸ್ಪತ್ರೆ ಸ್ವಚ್ಛತೆ ಮತ್ತು ಅವ್ಯವಹಾರಗಳ ಬಗ್ಗೆ ಮಾಹಿತಿಯನ್ನು ಸಿಬ್ಬಂದಿಯಿAದ ಪಡೆಯಲಾಗಿದೆ. ಕೋರ್ಟಿಗೆ ಮಾಹಿತಿಯನ್ನು ನೀಡಲಾಗುವುದು.

-ಡಾ.ಜಗದೀಶ್, ಜಿಲ್ಲಾ ಸರ್ಜನ್, ಕೋಲಾರ.

ಚಿತ್ರ ೨೪ ಕೆ.ಎಲ್.ಆರ್. ೦೩ : ಎಸ್.ಎನ್.ಆರ್. ಆಸ್ಪತ್ರೆ

ಚಿತ್ರ ೨೪ ಕೆ.ಎಲ್.ಆರ್. ೦೩ಎ : ಡಾ.ಜಗದೀಶ್, ಜಿಲ್ಲಾ ಸರ್ಜನ್, ಕೋಲಾರ ರವರ ಭಾವಚಿತ್ರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net