ಎಸ್.ಎನ್.ಆರ್.ಆಸ್ಪತ್ರೆಯ ಆವರಣದಲ್ಲಿರುವ ಅಂಗಡಿ ಮಳಿಗೆಗಳಿಗೆ ಹೊಸ ದರ ನಿಗಧಿಪಡಿಸಲು ಮುಂದಾಗಿರುವ ಆಸ್ಪತ್ರೆಯ ಆಡಳಿತ ಮಂಡಳಿ / ಲೋಕೋಪಯೋಗಿ ಇಲಾಖೆಗೆ ಪತ್ರ / ಹಳೇ ಬಾಡಿಗೆಗೆ ಬೀಳಲಿದೆ ಬ್ರೇಕ್

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಎನ್.ಮುನಿವೆಂಕಟೇಗೌಡ

ನಗರದ ಎಸ್.ಎನ್.ಆರ್.ಆಸ್ಪತ್ರೆ ಆವರದಲ್ಲಿ ಇರುವ ಅಂಗಡಿ ಮಳಿಗೆಗಳನ್ನು ಕಡಿಮೆ ಬಾಡಿಗೆಗೆ ಪಡೆದು ಬೇರೊಬ್ಬರಿಗೆ ಸಾವಿರಾರು ರೂ.ಗಳಿಗೆ ಬಾಡಿಗೆ ನೀಡಿ, ಸರ್ಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗಿತ್ತು. ವಿಜಯವಾಣಿ ಅಧಿಕಾರಿಗಳ ಗಮನಕ್ಕೆ ತಂದಾಗ ಎಚ್ಚೆತ್ತುಕೊಂಡ ಅಧಿಕಾರಿಗಳು ಲೋಕೋಪಯೋಗಿ ಇಲಾಖೆಯ ನಿಯಮಾನುಸಾರ ಹೊಸ ದರ ನಿಗಧಿಪಡಿಸಲು ಮುಂದಾಗಿದ್ದಾರೆ.

ಆಸ್ಪತ್ರೆಯ ಆವರಣದಲ್ಲಿ ೧೦ ಚಿಲ್ಲರೆ ಅಂಗಡಿಗಳು ಮತ್ತು ೧ ನಂದಿನಿ ಪಾರ್ಲರ್ ಇದ್ದು, ಆಸ್ಪತ್ರೆಯಲ್ಲಿ ಕೆಲಸ ಮಾಡುವ ಕೆಲ ವ್ಯಕ್ತಿಗಳು ಮತ್ತು ಹೊರಗಿನವರ ಪ್ರಭಾವ ಬಳಸಿ ಆಸ್ಪತ್ರೆಯ ಆಡಳಿತ ಮಂಡಳಿಯಿAದ ಪ್ರತಿ ಅಂಗಡಿಗೆ ಮಾಸಿಕ ಕೇವಲ ೧೦೦ ರೂ.ಗಳಿಂದ ೩೫೦೦ ರೂ.ಗಳ ತನಕ ಬಾಡಿಗೆ ನಿಗಧಿಪಡಿಸಿಕೊಂಡು ಬೇರೊಬ್ಬರಿಗೆ ೩೦ ರಿಂದ ೩೫ ಸಾವಿರ ರೂ.ಗಳಂತೆ ಬಾಡಿಗೆ ವಸೂಲಿ ಮಾಡುತ್ತಿದ್ದರು.

ಇದನ್ನು ಬೆನ್ನಟ್ಟಿದ ವಿಜಯವಾಣಿ ಅಂಗಡಿಗಳ ಬಾಡಿಗೆ ಪಡೆಯುತ್ತಿರುವ ಬಗ್ಗೆ ಮಾಹಿತಿ ಕಲೆ ಹಾಕಲು ಮುಂದಾದಾಗ ಅಧಿಕಾರಿಗಳು ಮಾಹಿತಿ ನೀಡಲಿಲ್ಲ. ಜಿಲ್ಲಾ ಸರ್ಜನ್ ಜಗದೀಶ್ ನಾನು ಹೊಸದಾಗಿ ಬಂದಿರುವುದು, ಇನ್ನೂ ಇದರ ಬಗ್ಗೆ ಮಾಹಿತಿ ಪಡೆಯಬೇಕಾಗಿದೆ ಎಂದು ನುಣುಚಿಕೊಂಡರು.

ಮಾಧ್ಯಮಗಳಲ್ಲಿ ಸುದ್ದಿ ಪ್ರಚಾರವಾಗುತ್ತದೆ ಎಂದು ಎಚ್ಚೆತ್ತುಕೊಂಡ ಅಧಿಕಾರಿಗಳು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಆ.೧ ರಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸುಮಾರು ವರ್ಷಗಳ ಹಿಂದೆ ಅಂಗಡಿಗಳನ್ನು ಬಾಡಿಗೆ ಕರಾರು ಮಾಡಿಕೊಂಡು ಹಳೆಯ ದರದಲ್ಲಿಯೇ ಹಣ ಕಟ್ಟುತ್ತಿದ್ದಾರೆ ಎಂಬ ವಿಷಯವನ್ನು ಜಿಲ್ಲಾ ಸರ್ಜನ್ ಪ್ರಸ್ತಾಪಿಸಿದರು. ಲೋಕೋಪಯೋಗಿ ಇಲಾಖೆಯವರನ್ನು ಕರೆಸಿ ಅಂಗಡಿಗಳ ಅಳತೆಯ ಪ್ರಕಾರ ಈಗಿನ ಹೊಸ ದರವನ್ನು ನಿಗಧಿಪಡಿಸುವಂತೆ ಜಿಲ್ಲಾಧಿಕಾರಿ ಎಂ.ಆರ್.ರವಿ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಕೋಟ್

ಹೊಸ ದರ ನಿಗಧಿಪಡಿಸಲು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಲೋಕೋಪಯೋಗಿ ಇಲಾಖೆಗೆ ಪತ್ರ ಬರೆಯಲಾಗುವುದು. ಅಂಗಡಿಗಳ ಅಳತೆಗೆ ತಕ್ಕಂತೆ ಲೋಕೋಪಯೋಗಿ ಇಲಾಖೆಯವರು ದರ ನಿಗಧಿಪಡಿಸುತ್ತಾರೆ. ಈ ಹಿಂದೆ ಇದ್ದವರು ಯಾರು ಮಾಡಿದ್ದಾರೋ ಗೊತ್ತಿಲ್ಲ. ಈಗಿನ ಹೊಸ ದರವನ್ನು ನಿಗಧಿಪಡಿಸಲಾಗುವುದು.

-ಡಾ.ಜಗದೀಶ್, ಜಿಲ್ಲಾ ಸರ್ಜನ್, ಕೋಲಾರ.

ಕೋಟ್

ಎಸ್.ಎನ್.ಆರ್ ಜಿಲ್ಲಾಸ್ಪತ್ರೆಗೆ ಪ್ರತಿದಿನ ಸಾವಿರಾರು ಜನ ರೋಗಿಗಳು ಮತ್ತು ಸಂಬAಧಿಕರು ಬರುವುದರಿಂದ ಆಸ್ಪತ್ರೆಯ ಆವರಣದಲ್ಲಿರುವ ಅಂಗಡಿಗಳಲ್ಲಿ ಉತ್ತಮ ವ್ಯಾಪಾರ ವಹಿವಾಟು ನಡೆಯುತ್ತದೆ. ಆದರೆ ಆಸ್ಪತ್ರೆಯ ಆಡಳಿತ ಮಂಡಳಿ ಪ್ರತಿ ಅಂಗಡಿಗೆ ನೂರು ರೂ.ಬಾಡಿಗೆ ಪಡೆಯುತ್ತಿರುವುದು ದುರಾದೃಷ್ಟಕರ. ಕೂಡಲೇ ಆಸ್ಪತ್ರೆಯ ಅಧಿಕಾರಿಗಳು ಅಂಗಡಿಗಳನ್ನು ಬಹಿರಂಗ ಹರಾಜು ಹಾಕುವ ಮೂಲಕ ಯಾರು ಹೆಚ್ಚು ಬಾಡಿಗೆ ನೀಡಲು ಮುಂದಾಗುತ್ತಾರೋ ಅವರಿಗೆ ಬಾಡಿಗೆಗೆ ನೀಡುವ ಮೂಲಕ ಸರ್ಕಾರಕ್ಕೆ ಲಾಭ ಮಾಡಿಕೊಡಬೇಕಾಗುತ್ತದೆ. ಇಲ್ಲವಾದರೆ ಆಸ್ಪತ್ರೆಯ ವಿರುದ್ದ ಹೋರಾಟ ಮಾಡಲಾಗುವುದು.

-ಸೋಮಣ್ಣ, ರಾಜ್ಯಾಧ್ಯಕ್ಷರು, ಕರವೇ ಸಮರಸೇನೆ.

ಕೋಟ್

ಆಸ್ಪತ್ರೆಯ ಆವರಣದಲ್ಲಿ ತೆರೆಯಲಾಗಿರುವ ಅಂಗಡಿಗಳಲ್ಲಿ ಖಾಸಗಿ ಆಂಬುಲೆನ್ಸ್ ಚಾಲಕರು, ಆಸ್ಪತ್ರೆಯಲ್ಲಿ ಮಧ್ಯವರ್ತಿಗಳು ಹೆಚ್ಚಾಗಿ ಅಲ್ಲಿಯೇ ಕುಳಿತು ಎಲ್ಲಾ ರೀತಿಯ ವ್ಯವಹಾರಗಳು ನಡೆಸುತ್ತಾರೆ. ಆದ್ದರಿಂದ ಅಲ್ಲಿ ನಡೆಸಲಾಗುತ್ತಿರುವ ಪ್ರಭಾವಿಗಳ ಅಂಗಡಿಗಳ ಮಾಲೀಕತ್ವ ಹಿಂಪಡೆದು ಬಡವರಿಗೆ ನೀಡಿದರೆ ಆಸ್ಪತ್ರೆಗೆ ಆದಾಯವೂ ಬರುತ್ತದೆ ಮತ್ತು ಆಸ್ಪತ್ರೆಯ ಆವರಣದಲ್ಲಿ ನಡೆಯುವ ಅಹಿತಕರ ಘಟನೆಗಳಿಗೆ ಕಡಿವಾಣ ಹಾಕಬಹುದು ಹಾಗೂ ಅಂಗಡಿಗಳವರು ತಮಗೆ ಇಷ್ಟ ಬಂದ ರೀತಿಯಲ್ಲಿ ವಸ್ತುಗಳ ಬೆಲೆಯನ್ನು ಏರಿಕೆ ಮಾಡಿದ್ದಾರೆ. ನಗು-ಮಗು ಆಸ್ಪತ್ರೆಯ ಮುಂಭಾಗವಿರುವ ಅಂಗಡಿಗಳವರAತೂ ಮಕ್ಕಳ ಉಡುಪುಗಳನ್ನು ಮಾರುಕಟ್ಟೆ ದರಕ್ಕಿಂತ ದುಪ್ಪಟ್ಟು ದುಬಾರಿ ದರದಲ್ಲಿ ಮಾರಾಟ ಮಾಡುತ್ತಿದ್ದಾರೆ ಅಧಿಕಾರಿಗಳು ಇದಕ್ಕೆ ಕಡಿವಾಣ ಹಾಕಬೇಕಾಗಿದೆ.

-ಹೆಸರು ಹೇಳಲು ಇಚ್ಛಿಸದ ಆಸ್ಪತ್ರೆಯ ಸಿಬ್ಬಂದಿ

ಚಿತ್ರ ೦೬ ಕೆ.ಎಲ್.ಆರ್. ೦೩ : ಎಸ್.ಎನ್.ಆರ್.ಆಸ್ಪತ್ರೆಯ ಆವರಣದಲ್ಲಿರುವ ಅಂಗಡಿ ಮಳಿಗೆಗಳು

ಚಿತ್ರ ೦೬ ಕೆ.ಎಲ್.ಆರ್. ೦೩ಎ : ಸೋಮಣ್ಣ, ರಾಜ್ಯಾಧ್ಯಕ್ಷರು, ಕರವೇ ಸಮರಸೇನೆ. ರವರ ಭಾವಚಿತ್ರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net