ಎಲ್ಲರೂ ಅವಕಾಶ ಸದುಪಯೋಗಪಡಿಸಿಕೊಳ್ಳಲಿ

18
Published on

ದೇವರು ಎಲ್ಲರಿಗೂ ಅವಕಾಶ ನೀಡಿರುತ್ತಾನೆ. ಆ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು, ಸಮರ್ಥವಾಗಿ ನಿಭಾಯಿಸಿದರೆ ನಮ್ಮೊಳಗಿನ ಪ್ರತಿಭೆಯನ್ನು ಅನಾವರಣ ಮಾಡಬಹುದು ಎಂದು ಸಾಹಿತಿ ಬಿ.ಆರ್.ನಾಗರತ್ನ ಹೇಳಿದರು.

ವಿಜಯನಗರದ ಕನ್ನಡ ಸಾಹಿತ್ಯ ಪರಿಷತ್ತು ಸಭಾಂಗಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಆಸಕ್ತಿ ಪ್ರಕಾಶನ ಮೈಸೂರು ಸೋಮವಾರ ಆಂೋಜಿಸಿದ್ದ ಉದಂೋನ್ಮುಖ ಕತೆಗಾರ್ತಿ ಜೆ. ಪದ್ಮಿನಿ ಆನಂದ್ ರಚನೆಯ ‘ಸ್ಛೂರ್ತಿಯ ಸೆಲೆ’ ಕಥಾ ಸಂಕಲನ ಬಿಡುಗಡೆ ಹಾಗೂ ರಾಜ್ಯ ಮಟ್ಟದ ಮುಂಗಾರು ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿದರು.

ಯಾವುದೇ ಸಾಹಿತ್ಯ ಪ್ರಕಾರ ಬರೆಯುವ ಮುಂಚೆ ಆಳವಾದ ಅಧ್ಯಯನ ಮುಖ್ಯ. ಇದರಿಂದ ಭವಿಷ್ಯದಲ್ಲಿ ಉತ್ತಮ ಬರಹಗಾರರಾಗಲೂ ಅನುಕೂಲವಾಗುತ್ತದೆ ಎಂದರು.

ಅಭಿರುಚಿ ಬಳಗದ ಅಧ್ಯಕ್ಷ ಎನ್.ವಿ.ರಮೇಶ್ ಮಾತನಾಡಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಮಡ್ಡಿಕೆರೆ ಗೋಪಾಲ್, ಕಾರ್ಯದರ್ಶಿ ಲತಾ ಮೋಹನ್, ಸಖಿ ೌಂಡೇಶನ್ ಅಧ್ಯಕ್ಷೆ ಗಾಯತ್ರಿ ಸುಂದರೇಶ್, ವೇದವಾಲಾ, ಹಿರಿಯ ಸಾಹಿತಿ ಎನ್. ಶಾಂತಕುವಾರಿ, ಸಾಹಿತಿ ಸುಮತಿ ಸುಬ್ರಹ್ಮಣ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net