ಎಲ್ಲರಿಗೂ ಕರಾಟೆ ಕಲಿಕೆ ಅಗತ್ಯ

1
Published on

ಇಂದು ಪ್ರತಿಯೊಬ್ಬರಿಗೂ ಕರಾಟೆ ಅಗತ್ಯವಾಗಿದೆ. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಕರಾಟೆ ಪೂರಕವಾಗಿದೆ ಎಂದು ಶಾಸಕ ಕೆ.ಹರೀಶ್‌ಗೌಡ ಹೇಳಿದರು.

ವಡೊ ರಿಯು ಕರಾಟೆ ಅಸೋಷಿಯೇಷನ್ ವಿನಾಯಕನಗರದ ಲೀಲಾ ಚನ್ನಯ್ಯ ಛತ್ರದಲ್ಲಿ ಭಾನುವಾರ ಆಯೋಜಿಸಿದ್ದ 19ನೇ ಕರಾಟೆ ಚಾಂಪಿಯನ್‌ಷಿಪ್ ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲರೂ ಕರಾಟೆ ಕಲಿಯುವುದು ಅಗತ್ಯ ಎಂದರು.

ಪ್ರಸ್ತುತ ದಿನಗಳಲ್ಲಿ ಮಕ್ಕಳು ಮತ್ತು ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಕರಾಟೆ ಅಭ್ಯಾಸ ಮಾಡಿದ್ದರೆ ಇಂತಹ ಅಪಾಯಕಾರಿ ಸಂದರ್ಭದಲ್ಲಿ ವೈರಿಗಳ ವಿರುದ್ಧ ಸೆಣಸಾಡಲು ಅನುಕೂಲವಾಗುತ್ತದೆ. ಹಾಗಾಗಿ ಪ್ರತಿ ಯುವಕ-ಯುವತಿಯರು ವಿದ್ಯಾರ್ಥಿಯರು ಕರಾಟೆ ಅಭ್ಯಾಸ ಮಾಡಬೇಕು ಎಂದು ಹೇಳಿದರು.

ನ್ಯಾಯಾಧೀಶರಾದ ಎ.ಕೆ.ನವೀನ್‌ಕುಮಾರಿ, ಹನ್ಸಿ ಶಿವದಾಸ್, ದೀಪಕ್ ಕುಮಾರ್, ಎಂ.ರವಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net