

ನಿಪ್ಪಾಣಿ: ಕಳೆದ ಮೂರು ದಿನಗಳಿಂದ ಮಳೆ ಅಬ್ಬರ ಕಡಿಮೆಯಾದ್ದರಿಂದ ತಾಲೂಕಿನಲ್ಲಿ ಜಲಾವೃತವಾಗಿದ್ದ ಎಲ್ಲ ಸೇತುವೆಗಳು ಗುರುವಾರದಿಂದ ಸಂಚಾರಕ್ಕೆ ಮುಕ್ತಗೊಂಡಿವೆ. ವೇದಗಂಗಾ ಮತ್ತು ದೂಧಗಂಗಾ ನದಿಗಳಿಗೆ ಅಡ್ಡಲಾಗಿ ನಿರ್ಮಿಸಿದ್ದ ಭೋಜ&ಕಾರದಗಾ, ಭೋಜವಾಡಿ&ಕುನ್ನೂರ, ಅಕ್ಕೋಳ&ಸಿದ್ನಾಳ, ಜತ್ರಾಟ&ಭೀವಶಿ, ಮಮದಾಪುರ&ಹುನ್ನರಗಿ, ಕುನ್ನೂರ&ಬಾರವಾಡ ಸೇತುವೆಗಳು ಸಂಚಾರಕ್ಕೆ ಮುಕ್ತಗೊಂಡಿವೆ.
ಮಳೆ ಕಡಿಮೆಯಾಗಿದ್ದು ನದಿಗಳಲ್ಲಿ ನೀರಿನ ಪ್ರಮಾಣ ತಗ್ಗುತ್ತಿದೆ. ಜತ್ರಾಟ&ಭೀವಶಿ ಸೇತುವೆಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದ್ದಂತೆ ಹರಿದು ಬಂದಿದ್ದ ಮರಗಳ ಕೊಂಬೆಗಳು, ಕಸ&ಕಡ್ಡಿಗಳನ್ನು ತೆಗೆದುಹಾಕಿ ಸ್ವಚ್ಛಗೊಳಿಸಲಾಯಿತು. ಎಲ್ಲ ಸೇತುವೆಗಳಲ್ಲಿ ಈಗ ಜನರ ಓಡಾಟ ಎಂದಿನಂತೆ ಆರಂಭಗೊಂಡಿದೆ.
ವಾಹನಗಳ ಸಂಚಾರ ಸರಾಗವಾಗಿ ನಡೆದಿದೆ. ತಾಲೂಕಿನಲ್ಲಿ ನದಿಯಲ್ಲಿ ಮುಳುಗಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಕೊಟ್ಟಿಗೆ ಕುಸಿದು ಒಂದು ಜಾನುವಾರು ಮೃತಪಟ್ಟಿದೆ. ಎರಡು ಮನೆಗಳಿಗೆ ಭಾಗಶ@ ಹಾನಿಯಾಗಿದೆ.