

ಚಿತ್ರದುರ್ಗ: ಮಧ್ಯಂತರ ಬಜೆಟ್ ಆಗಿರುವ ಕಾರಣ ಹೇಳಿಕೊಳ್ಳುವಂತಹ ಯಾವ ಪ್ರಮುಖ ಘೋಷಣೆಗಳು ಆಗಿಲ್ಲ. ಆದ್ಯತಾ ವಲಯಗಳ ಕಡೆಗೆ ಮಾತ್ರ ಈ ಬಜೆಟ್‌ನಲ್ಲಿ ಹೆಚ್ಚು ಗಮನ ಹರಿಸಲಾಗಿದೆ ಎನ್ನುತ್ತಾರೆ ಆರ್ಥಿಕ ತಜ್ಞ ಯು.ಪ್ರಸನ್ನ.
ಬಡವರಿಗೆ, ಮಹಿಳೆಯರಿಗೆ, ರೈತರಿಗೆ ಮತ್ತು ಯುವ ಸಮುದಾಯವನ್ನು ಕೇಂದ್ರೀಕರಿಸಿ ಬಜೆಟ್ ಮಂಡಿಸಲಾಗಿದೆ. ಒಂದೆರಡು ಅಂಶ ಹೊರತುಪಡಿಸಿದರೆ ಉಳಿದಂತೆ ಬಜೆಟ್‌ನಲ್ಲಿರುವ ಎಲ್ಲಾ ಅಂಶಗಳು ಸ್ವಾಗತಾರ್ಹ ಎಂದು ತಿಳಿಸಿದ್ದಾರೆ.