ಎರಡು ಮನೆಗಳು ಕುಸಿತ

TKE home
ಉಡೇವಾ ಗ್ರಾಮದಲ್ಲಿ ಯಶೋದಮ್ಮ ಎಂಬುವವರ ಮನೆ ಕುಸಿದಿರುವುದು.
Published on

ರೀಕೆರೆ: ತಾಲೂಕಿನೆಲ್ಲೆಡೆ ಗುರುವಾರ ಭರ್ಜರಿ ಮಳೆಯಾಗಿದೆ.

ಬುಧವಾರದಿಂದ ಗುರುವಾರ ಬೆಳಗ್ಗೆ 8 ಗಂಟೆವರೆಗೆ ತರೀಕೆರೆಯಲ್ಲಿ 43.2 ಮಿ.ಮೀ, ಲಕ್ಕವಳ್ಳಿ 58, ರಂಗೇನಹಳ್ಳಿ 45, ಹುಣಸಘಟ್ಟ 23, ಲಿಂಗದಹಳ್ಳಿ, ತ್ಯಾಗದಬಾಗಿ 29.6, ತಣಿಗೇಬೈಲು 26.2, ಉಡೇವಾ 14.5 ಮಿ.ಮೀ ಮಳೆಯಾಗಿದೆ. ಮಳೆಯಿಂದ ಗುರುಪುರ ಗ್ರಾಮದ ಲಲಿತಮ್ಮ ಹಾಗೂ ಉಡೇವಾ ಗ್ರಾಮದ ಯಶೋದಮ್ಮ ಎಂಬುವವರ ಮನೆ ಗೋಡೆ ಕುಸಿದಿದೆ. ಲಕ್ಕವಳ್ಳಿ ಕ್ರಾಸ್ ಮತ್ತು ಪಿರಮೇನಹಳ್ಳಿಯಲ್ಲಿ ಎರಡು ವಿದ್ಯುತ್ ಕಂಬ ಬಿದ್ದಿವೆ. ಹಾನಿಯಾದ ಸ್ಥಳಕ್ಕೆ ಆಯಾ ವೃತ್ತದ ಕಂದಾಯ ನಿರೀಕ್ಷಕರು, ಗ್ರಾಮ ಆಡಳಿತಾಧಿಕಾರಿಗಳು ಪರಿಶೀಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net