ಎರಡು ಬಣವೆಗೆ ಕಿಡಿಗೇಡಿಗಳ ಹೊತ್ತಿಸಿದ ಬೆಂಕಿಗೆ ಐದಾರು ಎಮ್ಮೆಗಳ ಚರ್ಮಕ್ಕೆ ಗಾಯ..!

IMG-20210318-WA0014.jpg
Published on


ಬಳ್ಳಾರಿ: ತಾಲೂಕಿನ‌ ಕೊಳಗಲ್ಲು ಗ್ರಾಮ ಹೊರವಲಯದ ಪೆಟ್ರೋಲ್ ಬಂಕ್ ಬಳಿಯಿರುವ ಎರಡು ಬಣವೆಗೆ ಯಾರೋ ಕಿಡಿಗೇಡಿಗಳು ಹೊತ್ತಿ
ಸಿದ ಬೆಂಕಿಗೆ ಐದಾರು ಎಮ್ಮೆಗಳ ಚರ್ಮ ಸುಟ್ಟಿರುವ ಘಟನೆ ನಡೆದಿದೆ.
ಗ್ರಾಮದ ರಾಮಾನಾಯ್ಡು, ಸುಧಾರಾಣಿ ಎಂಬುವರಿಗೆ ಸೇರಿದ ಎಮ್ಮೆಗಳ ಚರ್ಮಕ್ಕೆ ಸುಟ್ಟ ಗಾಯಗಳಾ ಗಿದ್ದು, ಎಮ್ಮೆಗಳು ಅತೀವ ಪ್ರಮಾಣದಲ್ಲಿ ಅಸ್ವಸ್ಥಗೊಂಡಿರೋದು ಬೆಳಕಿಗೆ ಬಂದಿದೆ‌.
ನಿನ್ನೆಯ ದಿನ ಸಂಜೆಯೊತ್ತಿಗೆ ಕೊಳಗಲ್ಲು ಗ್ರಾಮ ಹೊರವಲಯದಲ್ಲಿರುವ ಈ ಎರಡು ಬಣವೆಗಳಿಗೆ ಯಾರೊ ಕಿಡಿಗೇಡಿಗಳು ಸಿಗರೇಟ್ ಸೇದಿ ಅದನ್ನು ಹಾರಿಸದೇ ಅಲ್ಲೇ ಬಿಸಾಡಿ ಹೋಗಿದ್ದರಿಂದ ಆ ಬೆಂಕಿಯು ಹುಲ್ಲಿನ ಬಣವೆಗಳಿಗೆ ತಾಕಿದೆ. ಅದರಿಂದ ಹೈನುಗಾರಿಕಾ ಮಾಡುತ್ತಿದ್ದ ಈ ದಂಪತಿಗಳ ದನದ ಕೊಟ್ಟಿಗೆಗೂ ಆ ಬೆಂಕಿಯ ಶಾಖಾ ತಗುಲಿದೆ. ಅದರಿಂದ ಐದಾರು ಎಮ್ಮೆಗಳ‌ ಚರ್ಮ ಸುಟ್ಟು ಹೋಗಿ, ಕೆಂಪನೆಯ ರಕ್ತ ಸ್ರಾವ ಬರಲಾರಂಭಿಸಿದ್ದು, ಈವರೆಗೂ ಕೂಡ ಪಶು ಸಂಗೋಪನೆ ಇಲಾಖೆಯವರು ಇತ್ತಕಡೆ ಗಮನ ಹರಿಸದೇ ಇರೋದು ಕೂಡ ಆಕ್ರೋಶಕ್ಕೆ ಕಾರಣವಾಗಿದೆ.
ಅಗ್ನಿಶಾಮಕ ದಳ ಸಿಬ್ಬಂದಿ ಭೇಟಿ: ಈ ವಿಷಯ ತಿಳಿದ ತತ್ ಕ್ಷಣವೇ ಬಳ್ಳಾರಿಯ ಅಗ್ನಿಶಾಮಕ ದಳ ಸಿಬ್ಬಂದಿ ಘಟನಾ ಸ್ಥಳಕ್ಕೆ ತೆರಳಿ ಹೊತ್ತಿ ಹುರಿಯುತ್ತಿದ್ದ ಬೆಂಕಿಯನ್ನ ತಹಬದಿಗೆ ತರುವಲ್ಲಿ ಯಶಕಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net