ಎರಡು ದಿನಗಳಲ್ಲಿ 55 ಲಕ್ಷ ರೂ. ದಂಡ ವಸೂಲಿ

Crime Logo
Published on

ಸಂಚಾರ ನಿಯಮ ಉಲ್ಲಂಘನೆ ಸಂಬಂಧ ದಂಡ ಪಾವತಿಯಲ್ಲಿ ಸರ್ಕಾರ ಶೇ.50ರಷ್ಟು ರಿಯಾಯಿತಿ ಘೋಷಣೆ ಮಾಡಿರುವುದಕ್ಕೆ ವಾಹನ ಸವಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ನಗರದಲ್ಲಿ ಕಳೆದ ಎರಡು ದಿನಗಳಲ್ಲಿ 55 ಲಕ್ಷ ರೂ. ದಂಡ ವಸೂಲಿಯಾಗಿದೆ. ಸಂಚಾರ ನಿಯಮ ಉಲ್ಲಂಘನೆ ಸಂಬಂಧ ದಾಖಲಾಗಿದ್ದ 22,154 ಪ್ರಕರಣಗಳು ವಿಲೇವಾರಿಯಾಗಿಛಿ. ಮೊದಲ ದಿನ 33 ಲಕ್ಷ ರೂ. ಸಂಗ್ರಹವಾಗಿದ್ದರೆ, ಎರಡನೇ ದಿನ 21 ಲಕ್ಷ ರೂ. ಸಂಗ್ರಹವಾಗಿದೆ. ನಗರ ಪೊಲೀಸ್ ಇಲಾಖೆ ವ್ಯಾಪ್ತಿಯಲ್ಲಿ ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿ 96 ಲಕ್ಷ ರೂ.ದಂಡ ಪಾವತಿಯಾಗದೆ ಉಳಿದಿತ್ತು. ಇಲಾಖೆಯು ದಂಡ ಪಾವತಿಗೆ ನೀಡಿರುವ ಶೇ.50 ರಿಯಾಯಿತಿಯಿಂದ ಈ ಭಾರ ಕಡಿಮೆಯಾಗಲಿದೆ. ಸಂಚಾರ ಇ- ಚಲನ್‌ನಲ್ಲಿ ದಾಖಲಾದ ಪ್ರಕರಣ ಇತ್ಯರ್ಥಪಡಿಸಲು ಆ.23ರಿಂದ ಅವಕಾಶ ನೀಡಿದೆ. ಸೆ.12ರವರೆಗಿನ ಪ್ರಕರಣಗಳ ದಂಡದ ಮೊತ್ತಕ್ಕೆ ಶೇ.50 ರಿಯಾಯಿತಿ ದೊರೆಯಲಿದೆ ಎಂದು ಮೈಸೂರು ನಗರ ಸಂಚಾರ ವಿಭಾಗದ ಎಸಿಪಿ ಎಂ.ಶಿವಶಂಕರ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net