ಎನ್​ಎಸ್​ಯುಐ ವಿರುದ್ಧ ಕ್ರಮಕ್ಕೆ ಪಟ್ಟು

02
Published on

ತುಮಕೂರು ಶಿಕ್ಷಣ ಸಚಿವ ಬಿ.ಸಿ.ನಾಗೇಶ್​ ಅವರ ತಿಪಟೂರಿನ ನಿವಾಸಕ್ಕೆ ಎನ್​ಎಸ್​ಯುಐ ಕಾರ್ಯಕರ್ತರು ಮುತ್ತಿಗೆ ಹಾಕಲು ಯತ್ನಿಸಿದ್ದನ್ನು ಖಂಡಿಸಿ ಬಿಜೆಪಿ ಜಿಲ್ಲಾ ಟಕದ ನೇತೃತ್ವದಲ್ಲಿ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು. ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ವಿರುದ್ಧ ೂಷಣೆಗಳನ್ನು ಬಿಜೆಪಿ ಕಾರ್ಯಕರ್ತರು ಆಕ್ರೋಶ ಹೊರಹಾಕಿದರು.

ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಗುರುವಾರ ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ.ಬಿ.ನಂದೀಶ್​ ನೇತೃತ್ವದಲ್ಲಿ ನೂರಾರು ಪದಾಧಿಕಾರಿಗಳು ಪ್ರತಿಭಟನೆ ನಡೆಸಿ, ಸಚಿವರ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ್ದರ ಹಿಂದೆ ಕಾಂಗ್ರೆಸ್​ ಹತಾಶೆ ಎದ್ದುಕಾಣುತ್ತಿದೆ. ಕೈ ಮುಖಂಡರ ಕುಮ್ಮಕ್ಕಿನಿಂದಲೇ ಕಿಡಿಗೇಡಿಗಳು ಸಚಿವರ ಮನೆಗೆ ನುಗ್ಗಿದ್ದು, ದಾಳಿಕೋರರ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಒತ್ತಾಯಿಸಿದರು.

ಎಂ.ಬಿ.ನಂದೀಶ್​ ಮಾತನಾಡಿ, ಪಂಚರಾಜ್ಯಗಳ ಚುನಾವಣೆ ಬಳಿಕ ಇಡೀ ದೇಶದಲ್ಲಿ ಕಾಂಗ್ರೆಸ್​ ಶಕ್ತಿ ಕುಂದಿದೆ. ಇದರಿಂದ ಹತಾಶರಾಗಿ ದಿಕ್ಕು ತೋಚದೆ ಇಂತಹ ಕೃತ್ಯಗಳನ್ನು ಕಾಂಗ್ರೆಸ್ಸಿಗರು ಎಸಗುತ್ತಿದ್ದಾರೆ. ಜನರೇ ಇದಕ್ಕೆ ಪಾಠ ಕಲಿಸುತ್ತಾರೆ. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್​ ಪರಿಸ್ಥಿತಿ ಇನ್ನಷ್ಟು ಕಠಿಣವಾಗಲಿದೆ. ಗಲಭೆಕೋರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸಚಿವ ನಾಗೇಶ್​ ಅವರಿಗೂ ಪಠ್ಯಪುಸ್ತಕ ಪರಿಷ್ಕರಣೆಗೂ ಯಾವುದೇ ಸಂಬಂಧವಿಲ್ಲ. ಕಾಂಗ್ರೆಸ್​ ಕೃಪಾಪೋಷಿತ ಸಂಟನೆಯ ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದು, ಹೊರ ಜಿಲ್ಲೆಗಳಿಂದ ಗೂಂಡಾಗಳನ್ನು ಕರೆಸಿ ಗಲಾಟೆ ಮಾಡಿಸಲಾಗಿದೆ. ನಾಗೇಶ್​ ನಿವಾಸದ ಮೇಲಿನ ದಾಳಿ ಅತ್ಯಂತ ಖಂಡನೀಯ ಎಂದು ಬಿಜೆಪಿ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಸ್​.ಶಿವಪ್ರಸಾದ್​ ಹರಿಹಾಯ್ದರು.

ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಈವರೆಗೆ ಸಚಿವರ ನಿವಾಸದ ಮೇಲಿನ ದಾಳಿಯನ್ನು ಖಂಡಿಸಿಲ್ಲ. ಕೈ ಮುಖಂಡರು ಹತಾಶೆ ಮನೋಭಾವದಿಂದ ಎನ್​ಎಸ್​ಯುಐ ಗೂಂಡಾಪಡೆ ಬಿಟ್ಟು ಸಚಿವರ ಮನೆಗೆ ನುಗ್ಗಿ ದಾಂಧಲೆ ಮಾಡಿಸಿದ್ದಾರೆ. ಇದು ಆ ಪಕ್ಷದ ಸಂಸತಿ ಎಂದು ಅಸಂಟಿತ ಕಾರ್ಮಿಕ ಪ್ರಕೋಷ್ಠ ಸಂಚಾಲಕ ಬ್ಯಾಟರಂಗೇಗೌಡ ಹೇಳಿದರು. ನಗರ ಪ್ರಧಾನಕಾರ್ಯದರ್ಶಿಗಳಾದ ರಾಜೀವ್​ ಕೃಷ್ಣಮೂರ್ತಿ, ಗಣೇಶ್​ ಜಿ.ಪ್ರಸಾದ್​, ಕೊಪ್ಪಲ್​ ನಾಗರಾಜ್​, ಮಹಿಳಾ ಫಾರ್ದನಾ ರಹೀಂ ಜೀ, ಶಕುಂತಲಾ ಮತ್ತಿತರರು ಪಾಲ್ಗೊಂಡಿದ್ದರು.

ಕಿಡಿಗೇಡಿಗಳಿಗೆ ಕಠಿಣ ಶಿೆಯಾಗಲಿ

ಗುಂಡಾ ಪ್ರವೃತ್ತಿ ಮೆರೆದಿರುವುದನ್ನು ನಾವೆಲ್ಲರೂ ಖಂಡಿಸಬೇಕಾಗುತ್ತದೆ. ಡಿಜೆ ಹಳ್ಳಿ, ಕೆಜಿ ಹಳ್ಳಿ ಟನೆಯ ರೀತಿ, ತಿಪಟೂರಿನಲ್ಲಿಯೂ ಗಲಭೆ ಸೃಷ್ಟಿಸಲು ಕಾಂಗ್ರೆಸ್​ ಕಾರ್ಯಕರ್ತರು ಹೊರಟಿರುವುದು ಈ ಟನೆಯಿಂದ ಸ್ಪಷ್ಟವಾಗಿದೆ. ಪಠ್ಯಪುಸ್ತಕ ವಿಚಾರದಲ್ಲಿ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯವರು ಮಾಡಿರುವ ತಪ್ಪುಗಳನ್ನು ಸರಿಪಡಿಸುವ ಭರವಸೆಯನ್ನು ಸಿಎಂ ನೀಡಿದ್ದಾರೆ. ಹಾಗಿದ್ದರೂ ಪಠ್ಯಪುಸ್ತಕದ ವಿವಾದವನ್ನು ಮುಂದೆ ಮಾಡಿಕೊಂಡು ಮನೆಗೆ ಬೆಂಕಿ ಹಚ್ಚುವ ಕೆಲಸ ಮಾಡಿರುವುದು ಸರಿಯಲ್ಲ. ಕಿಡಿಗೇಡಿಗಳಿಗೆ ಕಠಿಣ ಶಿೆಯಾಗಬೇಕು ಎಂದು ಸಂಸದ ಜಿ.ಎಸ್​.ಬಸವರಾಜು ಒತ್ತಾಯಿಸಿದ್ದಾರೆ.

ಗುಂಡಾಗಿರಿಯ ಪರಮಾವಧಿ ಶಿಕ್ಷಣ ಸಚಿವ ಬಿ.ಸಿ.ನಾಗೇಶ್​ ಮನೆಯ ಮೇಲೆ ಪ್ರತಿಭಟನೆಯ ಹೆಸರಿನಲ್ಲಿ ದಾಳಿಗೆ ಯತ್ನಿಸಿರುವುದು ಖಂಡನೀಯ. ಪ್ರತಿಭಟನೆಗೆ ರೀತಿ ನೀತಿಗಳಿವೆ. ಇದೊಂದು ಗುಂಡಾಗಿರಿಯ ಪರಮಾವಧಿ, ಇಂತಹವರು ಯಾವುದೇ ಪಕ್ಷವಿರಲಿ ಸರ್ಕಾರ ಕೂಡಲೇ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಇಂತಹ ಗುಂಡಾಗಿರಿಗೆ ಮುಂದಿನ ದಿನಗಳಲ್ಲಿ ಜನರು ಉತ್ತರ ನೀಡಲಿದ್ದಾರೆ. ಶಾಲಾ, ಕಾಲೇಜು ಪಠ್ಯಪುಸ್ತಕದಲ್ಲಿ ವ್ಯತ್ಯಾಸಗಳಿದ್ದರೆ ಅದನ್ನು ಕೇಳಲು, ರೀತಿ ನೀತಿಗಳಿದೆ. ಏಕಾಎಕಿ ಸಚಿವರ ಮನೆಗೆ ನುಗ್ಗಿ ಧಾಂದಲೆ ನಡೆಸುವುದು ಸರಿಯಲ್ಲ. ಅದನ್ನು ಬಿಟ್ಟು ಬೆಂಕಿ ಹಾಕುವಂತಹ ಕೆಲಸ ಮಾಡಬಾರದು. ಇದು ಯಾರಿಗೂ ಶೋಭೆ ತರವಂತಹ ಕೆಲಸವಲ್ಲ ಎಂದು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್​ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net