ಎತ್ತಿನಹೊಳೆ ಯೋಜನೆ ಬಗ್ಗೆ ಅಸಮಾಧಾನ / ಜಿಲ್ಲೆಯ ಜನಪ್ರತಿನಿಧಿಗಳಿಗಿಲ್ಲ ಎತ್ತಿನಹೊಳೆ ನೀರಿನ ಬಗ್ಗೆ ಆಸಕ್ತಿ / ನಮಗಾಗಿ ರೂಪಿಸಿದ ಯೋಜನೆ ಬೇರೆಯವರ ಪಾಲು / ಮಾಜಿ ಸ್ಪೀಕರ್ ರಮೇಶ್‌ಕುಮಾರ್

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಎತ್ತಿನಹೊಳೆ ಯೋಜನೆಯನ್ನು ಜಾರಿಗೆ ತಂದಿದ್ದು, ಬಯಲುಸೀಮೆ ಜಿಲ್ಲೆಗಳಾದ ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಆದರೆ ಅದರ ಉಪಯೋಗ ಆಗುತ್ತಿರುವುದು ಹಾಸನ ಜಿಲ್ಲೆಗೆ. ಸರ್ಕಾರ ಮತ್ತು ಜಿಲ್ಲೆಯ ಜನಪ್ರತಿನಿಧಿಗಳಿಗೆ ಯೋಜನೆಯ ಬಗ್ಗೆ ಇಚ್ಚಾಶಕ್ತಿ ಇಲ್ಲದಂತಾಗಿದೆ ಎಂದು ಮಾಜಿ ಸ್ಪೀಕರ್ ರಮೇಶ್‌ಕುಮಾರ್ ಬೇಸರ ವ್ಯಕ್ತಪಡಿಸಿದರು.

ನಗರದ ಟಿ.ಚನ್ನಯ್ಯ ರಂಗಮAದಿರದಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ದಿ.ವೆಂಕಟಮುನಿಯಪ್ಪನವರ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಎತ್ತಿನಹೊಳೆ ಯೋಜನೆ ಪೂರ್ಣಗೊಂಡು ಲೋರ್ಪಾಣೆಯನ್ನು ಮಾಡಲಾಗಿದೆ. ಆದರೆ ಯೋಜನೆಯ ನೀರು ಹಾಸನ ಜಿಲ್ಲೆಯ ಅರಸೀಕೆರೆ ಸೇರಿದಂತೆ ಜಿಲ್ಲೆಗೆ ಉಪಯೋಗವಾಗುತ್ತಿದೆ. ಎತ್ತಿನಹೊಳೆ ಯೋಜನೆ ರೂಪಿಸಿದ್ದೇ ನಮಗಾಗಿ. ಆದರೆ ಅದರ ಉಪಯೋಗ ಪಡೆದುಕೊಳ್ಳಲು ಸಾಧ್ಯವಾಗಲಿಲ್ಲ. ಜಿಲ್ಲೆಯ ಜನಪ್ರತಿನಿಧಿಗಳಿಗೂ ಇದರ ಬಗ್ಗೆ ಇಚ್ಛಾಶಕ್ತಿ ಇಲ್ಲದಂತಾಗಿದೆ ಎಂದರು.

ಎತ್ತಿನಹೊಳೆ ಯೋಜನೆಯ ಪ್ರಾರಂಭಕ್ಕೂ ಮುನ್ನವೇ ಚಿಕ್ಕಬಳ್ಳಾಪುರದಲ್ಲಿ ಅಂದು ವೀರಪ್ಪಮೊಯ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಕರೆಸಿ ಪೂಜೆ ನಡೆಸಿದರು. ಅದಕ್ಕೂ ನಾನು ವಿರೋಧ ವ್ಯಕ್ತಪಡಿಸಿ ಚುನಾವಣೆಯ ಗಿಮ್ಮಿಕ್ಕಾಗಿ ಬೇಡ, ಅದು ಕಾರ್ಯಗತಗೊಳ್ಳಬೇಕು ಎಂದು ಎತ್ತಿನಹೊಳೆ ಯೋಜನೆಯನ್ನು ಪೂರ್ಣಗೊಳಿಸಲು ಸಹಕರಿಸಿದ್ದನ್ನು ಸ್ಮರಿಸಿದರಲ್ಲದೆ ನೀರು ಯೋಜನೆಯಿಂದ ಲಭ್ಯವಾಗುತ್ತಿದ್ದರೂ ಅದನ್ನು ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ತರುವಲ್ಲಿ ಈಗಿನ ಜನಪ್ರತಿನಿಧಿಗಳಲ್ಲಿ ಇರುವ ಇಚ್ಛಾಶಕ್ತಿಯ ಬಗ್ಗೆ ಅಸಮಾಧಾನ ಹೊರ ಹಾಕಿದರು.

ಕೋಲಾರ ಜಿಲ್ಲೆಯಲ್ಲಿ ೨೦೦೦ ಅಡಿಗಳು ಕೊಳವೆ ಬಾವಿ ಕೊರೆದರೆ ನೀರು ಸಿಗುತ್ತಿರಲಿಲ್ಲ. ವಿಧಾನಸಭೆಯಲ್ಲಿ ಬೆಂಗಳೂರಿನಲ್ಲಿ ಬಳಸುವ ನೀರನ್ನು ಕೊಡುವಂತೆ ಮನವಿ ಮಾಡಿದ್ದಾಗ ಕೆ.ಸಿ.ವ್ಯಾಲಿ ಯೋಜನೆಯ ನೀರನ್ನು ನೀಡಿದರು. ಇದರಿಂದ ಬೆಳೆಗಳಿಗೆ ಹಾನಿಯಾಗುತ್ತಿದೆ ಎಂದು ನಾನು ಅಂದುಕೊAಡಿರಲಿಲ್ಲ. ಆದರೆ ೩೦೦ ಅಡಿಗಳಿಗೆ ನೀರು ಸಿಗುತ್ತಿದೆ. ಕೆ.ಸಿ.ವ್ಯಾಲಿಯಿಂದ ಮಾರಕ ಎಂದು ಅಪಪ್ರಚಾರ ನಡೆಸಲಾಗುತ್ತಿದೆ. ಆದರೆ ಇದು ತಪ್ಪು ಕೆಲಸ ಮಾಡಿದ್ದೇನೆ ಎಂದು ನನಗೆ ಈಗ ಅರಿವಾಗುತ್ತಿದೆ. ಇಡೀ ದೇಶವೇ ಯೋಜನೆಯನ್ನು ಇಷ್ಟ ಪಡುವಾಗ ಕೋಲಾರ ಜಿಲ್ಲೆಯ ಜನತೆಗೆ ಯೋಜನೆ ಇಷ್ಟ ಇಲ್ಲ ಎನ್ನುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಬೆನ್ನಿಗೆ ಚೂರಿ ಹಾಕಿದವರ ಬಗ್ಗೆ ಅಸಮಾಧಾನ :

ಸೋತಿರುವ ಬಗ್ಗೆ ನನಗೆ ಬೇಸರವಿಲ್ಲ. ಜೀವನದಲ್ಲಿ ಮತ್ತು ಬದುಕಿನಲ್ಲಿ ಸೋತಿದ್ದೇನೆ. ನನ್ನ ಜೊತೆಯಲ್ಲೇ ಇದ್ದು ಬೆನ್ನಿಗೆ ಚೂರಿ ಹಾಕಿದವರಿಂದ ಸೋತಿದ್ದೇನೆ. ಸೋಲಿನ ಬಗ್ಗೆ ಪ್ರಶ್ನಿಸುವುದಿಲ್ಲ. ಅದು ಜನರ ತೀರ್ಪು. ನನಗೆ ಮತ್ತೆ ಚುನಾವಣೆಗೆ ನಿಲ್ಲಬೇಕೆಂದರೆ ಬಿಳಿ ಶರ್ಟು ಹಾಕಿಕೊಂಡು ಓಡಾಡಬೇಕು. ಮದುವೆ, ಮುಂಜಿ, ರಥೋತ್ಸವ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳಬೇಕು. ಆದರೆ ಅಂತಹ ಆಸೆಗಳು ನನ್ನಲ್ಲಿ ಸದ್ಯಕ್ಕೆ ಇಲ್ಲ ಎಂದರು.

ನಮಗಾಗಿ ದುಡಿದವರಿಗೆ, ನನಗೆ ಹೆಗಲು ಕೊಟ್ಟವರಿಗೆ, ನನ್ನ ನಂಬಿದವರಿಗೆ ಕೃತಜ್ಞತೆಗಳನ್ನು ಸಲ್ಲಿಸಬೇಕು. ವಿಶೇಷವಾಗಿ ೪ನೇದಾಗಿ ಅನ್ನದಲ್ಲಿ ವಿಷ ಹಾಕಿದವರಿಗೆ ಭುಜದ ಮೇಲೆ ಕೈಹಾಕಿ ಬೆನ್ನಹಿಂದೆ ತಿವಿದು, ಕಾಲಿಗೆ ಅಡ್ಡ ಇಟ್ಟು ಬೀಳಿಸಿದವರಿಗೆ ದೇವರಿಗೆ ನಮಸ್ಕಾರ ಹಾಕಿ ಭಗವಂತ ಇವರನ್ನು ಕಾಪಾಡಿ ಎಂದು ನಮಸ್ಕಾರ ಹಾಕಬೇಕಾಗಿದೆ ಎಂದು ಪರೋಕ್ಷವಾಗಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೈಕೊಟ್ಟವರ ವಿರುದ್ಧ ಹರಿಹಾಯ್ದರು.

ಚಿತ್ರ ೧೫ ಕೆ.ಎಲ್.ಆರ್. ೦೨ : ರಮೇಶ್‌ಕುಮಾರ್ ರವರ ಭಾವಚಿತ್ರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net