

ಬೆಂಗಳೂರು: ಇಂಡಿಜೀನಿಯಸ್ ತಂತ್ರಜ್ಞಾನದ ಮೂಲಕ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ಅಭಿವೃದ್ಧಿಪಡಿಸಿರುವ ಆ್ಯಂಟಿ ಟ್ಯಾಂಕ್ ಗೈಡೆಡ್ ಮಿಸೈಲ್ (ಎಟಿಜಿಎಂ) ಪರೀೆ ಯಶಸ್ವಿಯಾಗಿದೆ.
ಮಹಾರಾಷ್ಟ್ರದ ಅಹ್ಮದ್ನಗರನಲ್ಲಿನ ಕೆ.ಕೆ.ರೇಂಜ್ನಲ್ಲಿ ಅರ್ಜುನ್ ಟ್ಯಾಂಕ್ ಮೂಲಕ ಗುರುವಾರ ಪರೀೆಗೊಳಪಡಿಸಲಾಯಿತು. ಲೇಸರ್ ಮಾರ್ಗದರ್ಶನದಲ್ಲಿ ಗುರಿ ತಲುಪುವ ಎಟಿಜಿಎಂಗೆ ನೀಡಲಾಗಿದ್ದ ಗುರಿಯನ್ನು ಮುಟ್ಟಿ ಪರೀೆ ಸಲವಾಯಿತು. 1.5ರಿಂದ 5 ಕಿ.ಮೀ. ರೇಂಜ್ನ ಆಮ್ರ್ಡ್ ವಾಹನದ ಮೂಲಕ ಮಿಸೈಲ್ ಅನ್ನು ಬಳಸಬಹುದಾಗಿದೆ. ಡಿಆರ್ಡಿಒ ಭಾಗಗಳಾದ ಪುಣೆಯ ಎಆರ್ಡಿಇ, ಎಚ್ಇಎಂಆರ್ಎಲ್ ಮತ್ತು ಡೆರಾಡೂನ್ನ ಐಆರ್ಡಿಇ ನೂತನ ಮಿಸೈಲ್ ಅಭಿವೃದ್ಧಿಗೆ ಕೆಲಸ ಮಾಡಿವೆ. ಎಟಿಜಿಎಂ ಯಶಸ್ಸಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಡಿಆರ್ಡಿಒಗೆ ಶುಭಾಷಯವನ್ನು ತಿಳಿಸಿದ್ದು, ಆತ್ಮನಿರ್ಭರ ಭಾರತ ಅಭಿಯಾನಕ್ಕೆ ಮತ್ತೊಂದು ಕೊಡುಗೆ ನೀಡಿದಂತಾಗಿದೆ.