

ಭದ್ರಾವತಿ: ಕವಿ, ಸಾಹಿತಿ ಎಚ್.ಎಸ್.ವೆಂಕಟೇಶಮೂರ್ತಿ ಅವರ ನಿಧನ ಹಿನ್ನೆಲೆಯಲ್ಲಿ ಶುಕ್ರವಾರ ವೆಂಕಟೇಶಮೂರ್ತಿ ಅವರ ಜನನ ಹಾಗೂ ನಿಧನದ ದಿನಾಂಕವನ್ನು ಹೋಲುವ 10 ರೂ. ಮುಖಬೆಲೆಯ ನೋಟನ್ನು ನಗರದ ಅಂಚೆ ಚೀಟಿ ಸಂಗ್ರಹಕಾರ ಗಣೇಶ್ ಎಂಬುವವರು ಸಂಗ್ರಹಿಸಿದ್ದಾರೆ. ಆ ಮೂಲಕ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ವೆಂಕಟೇಶಮೂರ್ತಿ ಅವರ ಜನನ 23-06-44 ಆಗಿದ್ದು 30-05-25 ಮರಣದ ದಿನಾಂಕವಾಗಿರುವ ನೋಟುಗಳನ್ನು ಸಂಗ್ರಹ ಮಾಡಿದ್ದಾರೆ. ಹವ್ಯಾಸಿ ಅಂಚೆ ಚೀಟಿ ಸಂಗ್ರಹಕಾರರಾದ ಜನ್ನಾಪುರ ನಿವಾಸಿ ಎಸ್.ಕೆ.ಗಣೇಶ್ ಭಟ್ ಒಮ್ಮೆ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ವೆಂಕಟೇಶಮೂರ್ತಿ ಅವರನ್ನು ಭೇಟಿಯಾಗಿ ಅವರ ಕುರಿತು ಪ್ರಕಟಗೊಂಡ ಲೇಖನದ ಕೆಳಗೆ ಅವರಿಂದ ಹಸ್ತಾಕ್ಷರ ಪಡೆದುಕೊಂಡಿದ್ದರು.