ನುಗ್ಗೇಹಳ್ಳಿ: ಹೋಬಳಿಯ ಸಂತೆಶಿವರ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಮಂಗಳವಾರ ಹೊಸಳ್ಳಿ ಎಚ್.ಎನ್.ಲೋಕೇಶ್ ಅವಿರೋಧವಾಗಿ ಆಯ್ಕೆಯಾದರು.
ಬೆಳಗುಲಿ ಬಿ.ಎನ್.ಲೋಕೇಶ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಎಚ್.ಎನ್.ಲೋಕೇಶ್ ಹೊರತುಪಡಿಸಿ ಮತ್ತ್ಯಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾ ಅಧಿಕಾರಿ ಇ.ಒ.ಸುನೀಲ್ ಕುಮಾರ್ ಅವಿರೋಧ ಆಯ್ಕೆ ಪ್ರಕಟಿಸಿದರು.
ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಚ್.ಎಂ.ನಟರಾಜ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಬೆಳಗಳ್ಳಿ ಪುಟ್ಟಸ್ವಾಮಿ, ಮುಖಂಡರಾದ ಸಂತೆ ಶಿವರ ರವಿ, ಚಿರಂಜೀವಿ, ಸತೀಶ್, ಎನ್.ಬಿ. ನಾಗರಾಜ್, ಕುಳ್ಳೇಗೌಡ, ಸಂತೋಷ್, ಗುರು, ನಾಗರತ್ನ, ಧರ್ಮರಾಜ್, ಕವಿತಾ ಕೃಷ್ಣ, ಪ್ರಕಾಶ್, ಕಮಲಾಕ್ಷಿ ಗಿರೀಶ್, ಆರ್.ಟಿ.ಕುಮಾರ್, ನಿಂಗಮ್ಮ, ಕೃಷ್ಣೇಗೌಡ, ಅಮೃತ ಸಂತೋಷ್ ಮತ್ತಿತರರು ಅಭಿನಂದಿಸಿದರು.