ಎಗ್ಗಿಲ್ಲದೆ ನಡೆಯುತ್ತಿದೆ ಜಮೀನು ಒತ್ತುವರಿ

03 KRN-1-
Published on

ಕೆ.ಆರ್.ನಗರ: ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಂಡು ಖಾತೆ ಮಾಡಿ ಮಾರಾಟ ಮಾಡುತ್ತಿರುವುದು ಎಗ್ಗಿಲ್ಲದೆ ನಡೆಯುತ್ತಿದೆ ಎಂದು ಶಾಸಕ ಸಾ.ರಾ.ಮಹೇಶ್ ಬೇಸರ ವ್ಯಕ್ತಪಡಿಸಿದರು. ಪಟ್ಟಣದ ಹುಣಸೂರು ರಸ್ತೆಯಲ್ಲಿರುವ ಖಬರಸ್ತಾನ್ ಬಳಿ ಶುಕ್ರವಾರ 27 ಗುಂಟೆ ಸರ್ಕಾರಿ ಭೂಮಿಗೆ ತಡೆಗೋಡೆ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಸರ್ಕಾರಿ ಜಾಗ ಬೇರೆಯವರ ಪಾಲಾಗ ಬಾರದು ಮತ್ತು ಸಾರ್ವಜನಿಕರಿಗೆ ಉಪಯೋಗವಾಗಬೇಕು ಎಂದರು.


ಸ್ಮಶಾನದ ಮಧ್ಯಭಾಗದಲ್ಲಿ ಚಿಕ್ಕದಾದ ಕಟ್ಟೆಯೊಂದನ್ನು ನಿರ್ಮಿಸಿ ಪುರಸಭೆ ಯಿಂದ ಅಲ್ಲಿ ನೀರು ತುಂಬಿಸಲಾಗುವುದು. ಮುಸ್ಲಿಂ ಸಮುದಾಯದವರು ಕೈಕಾಲು ತೊಳೆದುಕೊಳ್ಳಲು ಅನುಕೂಲ ಮಾಡಿಕೊಡಲಾಗುವುದು ಎಂದು ತಿಳಿಸಿದರು. ಮೂಳೆ ತಜ್ಞ ಡಾ.ಮೊಹಬೂಬ್ ಖಾನ್ ಮಾತನಾಡಿ, ಶಾಸಕರ ಈ ದಿಟ್ಟ ನಿರ್ಧಾರ ದಿಂದ ಪಟ್ಟಣದ ಮುಸ್ಲಿಂ ಸಮುದಾಯಕ್ಕೆ ಅನುಕೂಲವಾಗಿದೆ ಎಂದು ಪ್ರಶಂಶಿಸಿದರು.

ಜಾಮೀಯಾ ಮಸೀದಿ ಧರ್ಮಗುರುಗಳಾದ ಮುಫ್ತಿ ಜೈನೂಲ್ಲಬಿದ್ದಿನ್, ಆಲಿ ಹುಸೇನ್, ಜಾಮೀಯಾ ಮಸೀದಿ ಕಮಿಟಿ ಅಧ್ಯಕ್ಷ ಅಫ್ಸರ್ ಬಾಬು, ಕಾರ್ಯದರ್ಶಿ ತಸ್ಸವರ್ ಪಾಷ, ಉಪಾ ಧ್ಯಕ್ಷ ಜಾವಿದ್ ಆಲಿ, ಖಜಾಂಚಿ ಮಹಮದ್ ಇರ್ಷಾದ್, ಪುರಸಭಾ ಮಾಜಿ ಸದಸ್ಯರಾದ ಮಹಮ್ಮದ್ ಸಿರಾಜ್, ಸೈಯಾದ್ ಅಸ್ಲಾಂ, ಜೆಡಿಎಸ್ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮುಬಾರಕ್, ಮುಖಂಡರಾದ ನಾಸೀರ್ ಹುಸೇನ್, ನಜೀಬದ ಹುಷೇನ್, ವಾಸಿಂ ಪಾಷಾ, ಇಪ್ತಿಯಾಜ ಪಾಷಾ, ಇಲಿಯಾಸ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net