ಎಂಜಿಎಂ ಕಾಲೇಜಿನಲ್ಲಿ 2 ದಿನಗಳ ಪುಸ್ತಕೋತ್ಸವಕ್ಕೆ ಚಾಲನೆ

Published on

ಉಡುಪಿ: 20ಕ್ಕೂ ಅಧಿಕ ಸ್ಟಾಲ್‌ಗಳು, ಸಾವಿರಾರು ಪುಸ್ತಕಗಳು…. ನಗರದ ಮಹಾತ್ಮ ಗಾಂಧಿ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಗಮನ ಸೆಳೆದ ಪುಸ್ತಕೋತ್ಸವ. ಶುಕ್ರವಾರ, ಶನಿವಾರ ಎರಡುದಿನಗಳ ಕಾಲ ನಡೆಯುವ ಪುಸ್ತಕೋತ್ಸವ ಓದುಗ ಆಸಕ್ತರನ್ನು ಕೈಬೀಸಿ ಕರೆಯುತ್ತಿದೆ. ಕನ್ನಡ ಹಿರಿಯ, ಕಿರಿಯ, ನವಯುಗ ಸಾಹಿತಿಗಳ ಹೊತ್ತಗೆ, ಕವನ ಸಂಕಲನ, ಕಾದಂಬರಿ, ಧಾರ್ಮಿಕ, ಆದ್ಯಾತ್ಮಿಕ ಕೃತಿಗಳು, ಗ್ರಂಥಗಲು, ವಿಜ್ಞಾನ, ಮಾನಸಿಕ ವಿಚಾರದ ಪುಸ್ತಕ, ಜಗದ್ವೀಖ್ಯಾತ ಸಾಧಕರ ಆಂಗ್ಲ ಪುಸ್ತಕಗಳು, ಜಗತ್ತಿನ ರಾಜಕೀಯ, ಉದ್ಯಮ, ಧಾರ್ಮಿಕ ಕ್ಷೇತ್ರದ ಮೇರು ನಾಯಕರ ಪುಸ್ತಕಗಳ ಅಪಾರ ಸಂಗ್ರಹ ಇಲ್ಲಿದೆ. ವಿದ್ಯಾರ್ಥಿಗಳು, ಉಪನ್ಯಾಸಕರು ಆಸಕ್ತಿಯಿಂದ ಪುಸ್ತಕಗಳನ್ನು ಖರೀದಿಸಿದರು. ಬಹುತೇಕ ಸ್ಟಾಲ್‌ಗಳು ರಿಯಾಯಿತಿ ದರದಲ್ಲಿ ಪುಸ್ತಕಗಳ ಮಾರಾಟ ಹಮ್ಮಿಕೊಂಡಿದ್ದು, ಎಂಜಿಎಂ ಕಾಲೇಜಿನ ಪತ್ರಿಕೋದ್ಯಮ ಉಪನ್ಯಾಸಕ ಮಂಜುನಾಥ್ ಕಾಮತ್ ಅವರ ಕೃತಿಗಳು ವಿಶೇಷ ಆಫರ್ ಮೂಲಕ ಮಾರಾಟವಾಗುತ್ತಿದೆ. ಎಂಜಿಎಂ ಕಾಲೇಜು, ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರ, ಆಂತರಿಕ ಗುಣಮಟ್ಟ ಖಾತರಿ ಕೋಶ ಈ ಪುಸ್ತಕೋತ್ಸವವನ್ನು ಆಯೋಜಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net