ವಿಜಯವಾಣಿ ಸುದ್ದಿಜಾಲ ಕೋಲಾರ
ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟಿಕೆ ವಿರೋಧಿಸಿ ಕನ್ನಡ ಒಕ್ಕೂಟವು ಕರೆ ನೀಡಿದ್ದ ಕರ್ನಾಟಕ ಬಂದ್‌ಗೆ ಕೋಲಾರ ಜಿಲ್ಲಾ ಕನ್ನಡ ಪರ ಸಂಘಟನೆಗಳ ಒಕ್ಕೂಟವು ಬೆಂಬಲಿಸಿ ಶನಿವಾರ ನಗರದ ಗಾಂಧಿವನದಲ್ಲಿ ಸಾಂಕೇತಿಕ ಪ್ರತಿಭಟನೆ ನಡೆಸಿದ ನಂತರ ಸರ್ಕಾರಕ್ಕೆ ಕೋಲಾರ ಜಿಲ್ಲಾಧಿಕಾರಿ ಎಂ.ಆರ್.ರವಿ ರವರ ಮೂಲಕ ಮನವಿಯನ್ನು ಸಲ್ಲಿಸಲಾಯಿತು.
ಹಿರಿಯ ಕನ್ನಡ ಹೋರಾಟಗಾರರಾದ ಜಯದೇವ ಪ್ರಸನ್ನ ಮಾತನಾಡಿ, ಬೆಳಗಾವಿಯಲ್ಲಿ ಎಂಇಎಸ್ ಮತ್ತು ಶಿವಸೇನೆಯ ಪುಂಡಾಟಿಕೆ ಮಿತಿಮೀರಿದೆ, ಕೂಡಲೇ ಸಂಘಟನೆಗಳನ್ನು ನಿಷೇಧ ಮಾಡಬೇಕು. ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಿರ್ವಾಹಕನ ಮೇಲೆ ಹಲ್ಲೆ ಹಾಗೂ ಚಾಲಕನ ಮುಖಕ್ಕೆ ಮಸಿ ಬಳಿದು ಅಟ್ಟಹಾಸ ಮೆರೆದಿರುವ ಎಂಇಎಸ್ ಸಂಘಟನೆಯ ತಂಟೆಕೋರರನ್ನು ಬೆಳಗಾವಿಯಿಂದ ಗಡಿಪಾರು ಮಾಡಬೇಕು ಹಾಗೂ ಬೆಳಗಾವಿಯಲ್ಲಿ ನೆಲೆಸಿ ಅಣ್ಣ ತಮ್ಮಂದಿರAತಿರುವ ಕನ್ನಡ ಮತ್ತು ಮರಾಠಿ ಭಾಷಿಕರ ಮಧ್ಯೆ ಭಾಷಾ ದ್ವೇಷವನ್ನು ತುಂಬುತ್ತಾ ತಮ್ಮ ಬೇಳೆಯನ್ನು ಬೇಯಿಸಿಕೊಳ್ಳುತ್ತಿರುವ ಎಂಇಎಸ್ ಪುಂಡರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಿದರು.
ಗಾಂಧಿವನದಲ್ಲಿ ಧರಣಿ :
ಕನ್ನಡಪರ ಸಂಘಟನೆಗಳ ವತಿಯಿಂದ ಬೆಳ್ಳಿಗ್ಗೆ ಗಾಂಧಿವನದ ಗಾಂಧಿ ಪ್ರತಿಮೆ ಮುಂಭಾಗ ಧರಣಿ ನಡೆಸಿ ಬೆಳಗಾವಿಯಲ್ಲಿ ಎಂಇಎಸ್ ಕಾರ್ಯಕರ್ತರ ಪುಂಡಾಟಿಕೆ ಹೆಚ್ಚಾಗಿದೆ. ಎಂಇಎಸ್ ಸಂಘಟನೆಯನ್ನು ನಿಶೇಧ ಮಾಡಬೇಕೆಂದು ಒತ್ತಾಯಿಸಿ ಧರಣಿ ನಡೆಸಿದರು.
ಜಿಲ್ಲಾಧಿಕಾರಿಗಳ ಕಛೇರಿ ಮುಂಭಾಗ ಪ್ರತಿಭಟನೆ :
ಗಾಂಧಿವನದಿAದ ಹೊರಟ ಕನ್ನಡಪರ ಸಂಘಟನೆಗಳ ಮುಖಂಡರು ಜಿಲ್ಲಾಧಿಕಾರಿಗಳ ಕಛೇರಿಗೆ ತೆರಳಿ ಅಲ್ಲಿ ಪ್ರತಿಭಟನೆ ನಡೆಸಿ ಎಂಇಎಸ್ ಪುಂಡಾಟಿಕೆ ವಿರುದ್ಧ ಘೋಷಣೆಗಳನ್ನು ಕೂಗಿದರು. ಎಂಇಎಸ್ ಸಂಘಟನೆಯು ಬೆಳಗಾವಿಯಲ್ಲಿ ವರ್ಷಗಳಿಂದ ಬೇರು ಬಿಟ್ಟಿರುವ ಮರಾಠಿಗರನ್ನು ಕನ್ನಡಿಗರ ವಿರುದ್ಧ ಎತ್ತಿಕಟ್ಟುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ನಗರ ಬಂದ್ ಇಲ್ಲ :
ಕೋಲಾರ ನಗರ ಸೇರಿದಂತೆ ಜಿಲ್ಲೆಯಲ್ಲಿ ಯಾವ ತಾಲ್ಲೂಕುಗಳಲ್ಲಿಯೂ ಕನ್ನಡಪರ ಸಂಘಟನೆಗಳು ಬಂದ್ ಆಚರಿಸಲು ಮುಂದಾಗಲಿಲ್ಲ. ಬೆಳ್ಳಗ್ಗೆ ಬಂದ್ ಇದೆ ಎಂದು ಕೆಲವರಲ್ಲಿ ಅನುಮಾನ ಕಾಡಿತ್ತು. ಬೆಳ್ಳಿಗ್ಗೆ ೭ ಗಂಟೆಯ ತನಕ ಕೆ.ಎಸ್.ಆರ್.ಟಿ.ಸಿ. ಬಸ್‌ಗಳು ಸಮಯಕ್ಕೆ ಸರಿಯಾಗಿ ನಿಲ್ದಾಣಗಳಿಂದ ಹೊರಡಲಿಲ್ಲ. ಬಸ್ ಇಲ್ಲ ಎಂಬ ಅನುಮಾನ ಸಾರ್ವಜನಿಕರಲ್ಲಿ ಹಾಗೂ ವಿದ್ಯಾರ್ಥಿಗಳಲ್ಲಿ ಮೂಡಿತ್ತು. ಬಂದ್ ಇದೆ ಎಂದು ಕನ್ನಡಪರ ಸಂಘಟನೆಗಳು ಘೋಷಣೆಯು ಮಾಡಲಿಲ್ಲ. ಇದರಿಂದ ಕೆಲವು ಅನುಮಾನಗಳು ಸಾರ್ವಜನಿಕರಲ್ಲಿ ಕಾಡತೊಡಗಿತು. ೮ ಗಂಟೆಯ ನಂತರ ಯಥಾಸ್ಥಿತಿ ಮುಂದುವರೆಯಿತು.
ಪ್ರತಿಭಟನೆಯಲ್ಲಿ ಕನ್ನಡಪರ ಸಂಘಟನೆಗಳ ಮುಖಂಡರಾದ ಕೋ.ನಾ. ಪ್ರಭಾಕರ್, ಕನ್ನಡ ಮಿತ್ರ ವೆಂಕಟಪ್ಪ, ಭುವನೇಶ್ವರಿ ಕನ್ನಡ ಸಂಘದ ಅಧ್ಯಕ್ಷ ಕೆ.ಆರ್. ತ್ಯಾಗರಾಜ್, ಐ. ಸುನಿಲ್ ರಾಜ್, ಎನ್.ಪಿ.ಶಿವಚಂದ್ರಯ್ಯ, ವೆಂಕಟಕೃಷ್ಣ, ಪಿ. ನಾರಾಯಣಪ್ಪ, ಗೌರಿಪೇಟೆ ರವೀಂದ್ರನಾಥ್, ಎಪಿಎಂಸಿ ಪುಟ್ಟರಾಜು, ಗಲ್‌ಪೇಟೆ ಸಂತೋಷ್, ಎಂ.ನಾಗರಾಜ್, ಎಸ್.ಶ್ರೀನಿವಾಸ್, ಎನ್. ಎಂ.ಲಕ್ಷ್ಮಣ್, ಮಧು, ಕೆ. ನಾರಾಯಣಗೌಡ, ವೆಂಕಟೇಶ್, ಕೆ.ಪಿ.ಶ್ರೀಕಾಂತ್‌ಗೌಡ, ಹರಿ, ವಿನೋದ್, ಕಾಶಿ, ಶಿವಕುಮಾರ್‌ಗೌಡ ಮುಂತಾದವರು ಭಾಗವಹಿಸಿದ್ದರು.
ಚಿತ್ರ ೨೨ ಕೆ.ಎಲ್.ಆರ್. ೦೨ : ಕನ್ನಡಪರ ಸಂಘಟನೆಗಳಿAದ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ ಬೆಳಗಾವಿಯ ಎಂಇಎಸ್ ಪುಂಡಾಟಿಕೆಯ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಾಯಿಸಿದರು.