

ಸರಗೂರು: ಪಟ್ಟಣ ಪಂಚಾಯಿತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಉಮಾ ರಾಮು ಆಯ್ಕೆಯಾದರು.
ಪ.ಪಂ. ಕಚೇರಿಯಲ್ಲಿ ಶನಿವಾರ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಎಸ್.ಎಲ್.ರಾಜಣ್ಣ, ಉಮಾರಾಮು, ಶಿವಕುಮಾರ್ ನಾಮಪತ್ರ ಸಲ್ಲಿಸಿದ್ದರು. ಈ ಪೈಕಿ ಶಿವಕುಮಾರ್ ಉಮಾರಾಮು ಅವರಿಗೆ ಬೆಂಬಲ ಸೂಚಿಸಿದ ಹಿನ್ನೆಲೆಯಲ್ಲಿ ಅಂತಿಮವಾಗಿ ಉಮಾ ಆಯ್ಕೆಯಾದರು. ಮುಖ್ಯಾಧಿಕಾರಿ ಕೆ.ಪಿ.ವಸಂತಕುಮಾರಿ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು.
ಎಸ್.ಎಲ್.ರಾಜಣ್ಣ ಮಾತನಾಡಿ, ಶಾಸಕರ ಗೈರು ಹಾಜರಿಯಲ್ಲಿ ನಡೆದ ಸ್ಥಾಯಿ ಸಮಿತಿ ಅಧ್ಯಕ್ಷೆ ಆಯ್ಕೆ ಅಸಿಂಧುವಾಗಿದೆ. ಈ ಸಂಬಂಧ ಹೋರಾಟ ಮಾಡಲಾಗುವುದು ಎಂದು ಹೇಳಿದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರಾಧಿಕಾ ಶ್ರೀನಾಥ್, ಉಪಾಧ್ಯಕ್ಷ ವಿನಯ್, ಸದಸ್ಯರಾದ ಹೇಮಾವತಿ ರಮೇಶ್, ಚೈತ್ರಾ ಸ್ವಾಮಿ, ಸಣ್ಣತಾಯಮ್ಮ, ನೂರಾಳಸ್ವಾಮಿ, ಶಿವಕುಮಾರ್, ದಿವ್ಯಾ ನವೀನ್, ಶ್ರೀನಿವಾಸ್, ಚಲುವಕೃಷ್ಣ, ನಾಮ ನಿರ್ದೇಶಿತ ಸದಸ್ಯರಾದ ಎಸ್.ನಾರಾಯಣ್, ಎನ್.ಎಸ್.ಪ್ರತಾಪ್, ರಂಗಸ್ವಾಮಿ ಹಾಜರಿದ್ದರು.
ಬಿಜೆಪಿಯಿಂದ ಸಂಭ್ರಮಾಚರಣೆ: ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಉಮಾರಾಮ ರಾಮಚಂದ್ರ ಆಯ್ಕೆಯಾಗುತ್ತಿದ್ದಂತೆ ಪಟ್ಟಣ ಪಂಚಾಯಿತಿ ಕಚೇರಿ ಆವರಣದ ಮುಂಭಾಗ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ಬಿಜೆಪಿ ಟೌನ್ ಅಧ್ಯಕ್ಷ ನಾಗರಾಜರಾಮ್, ಜಿಲ್ಲಾ ಕಾರ್ಯಕಾರಿಣಿ ಸುನಂದರಾಜು, ಶ್ರೀರಾಮಲು, ರಾಜೇಶ್, ಅನಿಲ್, ಪೈಂಟ್‌ನಾಗರಾಜು, ಶ್ರೀಕಂಠ ನವೀನ್‌ಕುಮಾರ್ ಹಾಜರಿದ್ದರು.