

ಎನ್.ಆರ್.ಪುರ: ಅಗ್ರಹಾರದ ಉಮಾ ಮಹೇಶ್ವರ ದೇವಸ್ಥಾನದಲ್ಲಿ ಲಲಿತಾ ಭಜನಾ ಮಂಡಳಿ ನೇತೃತ್ವದಲ್ಲಿ ಹನುಮ ಜಯಂತಿ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು.
ಶ್ರೀ ಆಂಜನೇಯಸ್ವಾಮಿಗೆ ಪವಮಾನ ಅಭಿಷೇಕ, ಅಷ್ಟೋತ್ತರ, ವಿಷ್ಣು ಸಹಸ್ರನಾಮ, ಭಜನಾ ಸೇವೆ, ಮಹಾ ಮಂಗಳಾರತಿ ನಡೆಯಿತು. ಲಲಿತಾ ಭಜನಾ ಮಂಡಳಿಯಿಂದ ಭಜನೆ, ವಿಶೇಷ ಪೂಜೆ, ಅಷ್ಟಾವಧಾನ ಸೇವೆ ಪ್ರಸಾದ ವಿನಿಯೋಗ ನಡೆಯಿತು. ಶುಕ್ರವಾರ ಬೆಳಗ್ಗೆ ಆಂಜನೇಯ ಸ್ವಾಮಿಗೆ ರುದ್ರಾಭಿಷೇಕ, ಹನುಮಾನ್ ಚಾಲೀಸ್ ಪಠಣ, ಮಾರುತಿ ಹೋಮ, ಅನ್ನ ಸಂತರ್ಪಣೆ ನಡೆಯಿತು. ಸಂಜೆ ಆಂಜನೇಯಸ್ವಾಮಿಗೆ ವಿಶೇಷ ಅಲಂಕಾರ, ತಾಳ ವಾದ್ಯಸೇವೆ, ಸಂಗೀತ ಸೇವೆ, ಭಜನೆ ಸೇವೆ ನಡೆಯಿತು.
ಲಲಿತಾ ಭಜನಾ ಮಂಡಳಿ ಹಿರಿಯ ಸದಸ್ಯೆ ಸುನೀತಮ್ಮ ಸದಾಶಿವ ಭಟ್ ಅವರನ್ನು ಸನ್ಮಾನಿಸಲಾಯಿತು. ಲಲಿತಾ ಭಜನಾ ಮಂಡಳಿ ಅಧ್ಯಕ್ಷೆ ವತ್ಸಲಾ, ಕಾರ್ಯದರ್ಶಿ ಜ್ಯೋತಿ, ಭಾಗ್ಯಾ ನಂಜುಂಡಸ್ವಾಮಿ ಹಾಗೂ ಸದಸ್ಯರು ಭಾಗವಹಿಸಿದ್ದರು.