

ಕಡೂರು: ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ನಡೆಸುವ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಗಣತಿಯಲ್ಲಿ ಉಪ್ಪಾರ ಸಮುದಾಯದವರು ಧರ್ಮದ ಕಾಲಂನಲ್ಲಿ ಹಿಂದು ಹಾಗೂ ಜಾತಿ ಮತ್ತು ಪಂಗಡ ಕಾಲಂನಲ್ಲಿ ಉಪ್ಪಾರ ಎಂದು ನಮೂದಿಸುವಂತೆ ಜಿಲ್ಲಾ ಭಗೀರಥ ಉಪ್ಪಾರ ಸಂಘದ ಅಧ್ಯಕ್ಷ ಮಲೆನಾಡು ನಾಗರಾಜ್ ಮನವಿ ಮಾಡಿದರು. ಬುಧವಾರ ಪಟ್ಟಣದ ಉಪ್ಪಾರ ಸಂಘದ ಭಗೀರಥ ವಿದ್ಯಾರ್ಥಿನಿಲಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯ ಸರ್ಕಾರ ನಡೆಸುತ್ತಿರುವ ಸಮೀಕ್ಷೆಯಲ್ಲಿ ಗಣತಿದಾರರು ಮನೆಗಳಿಗೆ ಬಂದಾಗ ಸೂಕ್ತ ಮಾಹಿತಿ ಒದಗಿಸಿ ಹಾಗೂ ಕಡ್ಡಾಯವಾಗಿ ಸಮಾಜದ ಬಂಧುಗಳು ಗಣತಿಯಲ್ಲಿ ಭಾಗವಹಿಸಬೇಕಿದೆ ಎಂದರು. ಉಪ್ಪಾರ ಸಂಘದ ತಾಲೂಕು ಅಧ್ಯಕ್ಷ ಲೋಕೇಶ್‌ಬಾಬು, ಮುಖಂಡರಾದ ಟಿ.ಆರ್.ಲಕ್ಕಪ್ಪ, ಸಪ್ತಕೋಟಿ ಧನಂಜಯ್, ಗರುಗದಹಳ್ಳಿ ಕೆಂಚಪ್ಪ, ಪಾತೇನಹಳ್ಳಿ ಚೌಡಪ್ಪ, ಪುಟ್ಟಲಿಂಗಪ್ಪ, ನಿಂಗಪ್ಪ, ಬಿಳುವಾಲ ನಾಗರಾಜ್, ಮಂಜುನಾಥ್, ರಮೇಶ್, ಶಿವಣ್ಣ, ಕೃಷ್ಣಪ್ಪ ಇದ್ದರು.