ಉದ್ಯೋಗಾಧಾರಿತ ಕೌಶಲ್ಯ ತರಬೇತಿ

Application
Published on

ಹೂಟಗಳ್ಳಿ ನಗರಸಭಾ ಕಾರ್ಯಾಲಯದ ವತಿಯಿಂದ 2024- 25 ನೇ ಸಾಲಿನ Prime Minister's Internship Scheme in Top Companies ಯೋಜನೆಯಡಿ ಉನ್ನತ ಮಟ್ಟದ ಕಂಪನಿಗಳಲ್ಲಿ ಒಂದು ಕೋಟಿ ಯುವಕರಿಗೆ ತರಬೇತಿಯ ಮೂಲಕ ಕೌಶಲ್ಯವನ್ನು ವೃದ್ಧಿಸಲು ಯುವಕ ಯುವತಿಯರಿಗೆ ಮಾರ್ಚ್ 31 ರೊಳಗಾಗಿ ಅರ್ಹತೆ ಆಧಾರದ ಮೇಲೆ ವೆಬ್‌ಸೈಟ್ www.pminternship.mca.gov.in ಮೂಲಕ ಅಗತ್ಯ ದಾಖಲೆಯೊಂದಿಗೆ ದಾಖಲಿಸಲು ಅವಕಾಶ ಕಲ್ಪಿಸಲಾಗಿದ್ದು, ಆಸಕ್ತ ಅಭ್ಯರ್ಥಿಗಳು ನೊಂದಹಿಸಿಕೊoಡು ಪ್ರಯೋಜನ ಪಡೆಯಬಹುದಾಗಿದೆ.

21 ರಿಂದ 24 ವಯಸ್ಸಿನ ವಯೋಮಾನದ ಯುವಕ/ಯುವತಿಯರಾಗಿರಬೇಕು, ಎಸ್‌ಎಸ್‌ಎಲ್‌ಸಿ, ಐಟಿಐ , ಡಿಪ್ಲೋಮ, ಬಿಎ, ಬಿಎಸ್ಸಿ, ಬಿಕಾಮ್, ಬಿಸಿಎ, ಬಿಬಿಎ, ಬಿಫಾರ್ಮ, ಇತ್ಯಾದಿ ವಿದ್ಯಾರ್ಹತೆಯನ್ನು ಪಡೆದಿರಬೇಕು. ಕುಟುಂಬದ ವಾರ್ಷಿಕ ಆದಾಯವು 2023-24 ಕ್ಕೆ 8 ಲಕ್ಷ ಮಿತಿಗೆ ಒಳಪಟ್ಟಿರಬೇಕು, ಕುಟುಂಬದ ಸದಸ್ಯರಲ್ಲಿ ಯಾವುದೇ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅಲ್ಲದೆ ಸರ್ಕಾರಿ ಸ್ವಾಯಿತ್ಯ ಸಂಸ್ಥೆಗಳಲ್ಲಿ ಖಾಯಂ ನೌಕರರಾಗಿರಬಾರದು. ಇಂಟರ್ಶಿಪ್ ತರಬೇತಿಯ ಅವಧಿ 12 ತಿಂಗಳು ಇರುವುದರಿಂದ ತರಬೇತಿ ಸರಿಯಾಗಿ ಹಾಜರಾದ ಅಭ್ಯರ್ಥಿಗಳಿಗೆ ತರಬೇತಿ ಅವಧಿಯಲ್ಲಿ ಮಾಸಿಕ ರೂ.5.000/- ಅಭ್ಯರ್ಥಿಯ ಬ್ಯಾಂಕ್ ಖಾತೆಗೆ ಸಂದಾಯಿಸಲಾಗುತ್ತದೆ. ಇಂಟರ್ಶಿಪ್ ಗೆ ಆಯ್ಕೆಯಾದ ಅಭ್ಯರ್ಥಿಗಳು ಕಂಪನಿಯ ಆಯೋಜಿಸಿದ ಸ್ಥಳದಲ್ಲಿ ಹೋಗಿ ತರಬೇತಿ ಪಡೆಯುವುದು. ಇಂಟರ್ನ್ಶಿಪ್ ಪೂರ್ಣಗೊಂಡ ನಂತರ ಅರ್ಹತೆ ಆಧಾರದ ಮೇಲೆ ರೂ.6000/- ಅಭ್ಯರ್ಥಿಯ ಬ್ಯಾಂಕ್ ಸಂದಾಯಿಸಲಾಗುವುದು ಹಾಗೂ ಪ್ರಮಾಣ ಪತ್ರ ನೀಡಲಾಗುತ್ತದೆ ಎಂದು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net