ಉದ್ಯಮಿ ಆಗುವವರಿಗೆ ಲೆಕ್ಕಾಚಾರ ಬಹು ಮುಖ್ಯ

mnd Books
Published on

ಮೈಸೂರು: ಉದ್ಯಮಿ ಆಗುವವರು ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕು ಎಂದು ಮಹಿಳಾ ಉದ್ಯಮಿ ರೇವತಿ ಕಾಮತ್ ಸಲಹೆ ನೀಡಿದರು.

‘ಮೈಸೂರು ಸಾಹಿತ್ಯ ಸಂಭ್ರಮ-2025’ ಕಾರ್ಯಕ್ರಮದಲ್ಲಿ ಭಾನುವಾರ ಗೋಷ್ಠಿಯಲ್ಲಿ ಮಾತನಾಡಿದ ಅವರು, ಉದ್ಯಮಿ ಆಗುವವರಿಗೆ ಲೆಕ್ಕಾಚಾರ ಬಹಳ ಮುಖ್ಯ. ಈ ನಿಟ್ಟಿನಲ್ಲಿ ನಾನು ಉದ್ಯಮಿ ಆಗಿ ಜೀವನ ವೃತ್ತಿ ಆರಂಭಿಸಿ, ಈಗ ಸಮಾಜ ಸೇವಕಿಯಾಗಿ ಮುಂದುವರಿದಿದ್ದೇನೆ. ಇದಕ್ಕೆ ನನ್ನ ಇಡೀ ಕುಟುಂಬ ಸಾಥ್ ನೀಡಿದೆ. ಅದರಲ್ಲೂ ಪತಿ ಆರಂಭದಿಂದ ಈವರೆಗೂ ಸಹಕಾರಿಯಾಗಿದ್ದಾರೆ ಎಂದರು.

ನಾನು ಮೈಸೂರಿನ ಸಾಂಪ್ರದಾಯಕ ಕುಟುಂಬದಲ್ಲಿ ಹುಟ್ಟಿದವಳು. ಮನೆಯಲ್ಲಿ ಎಲ್ಲರೂ ಹೊರಗಿನ ಪ್ರಪಂಚದ ಪರಿಚಯವೇ ಇಲ್ಲದಂತೆ ಮುದ್ದಾಗಿ ಸಾಕಿದರು. ಅದು ನನಗೆ ಅಭ್ಯಾಸವಾಗಿತ್ತು. ಜೀವನದಲ್ಲಿ ಏನಾದರೂ ಸಾಧಿಸಬೇಕು ಎಂದಾಗ ಅಲಂಕಾರಿಕ ಹೂವಿನ ಉದ್ಯಮ ಆರಂಭಿಸಿದೆ. ಈ ವೇಳೆ ರೌಡಿಗಳು, ನಕ್ಸಲರು ಸೇರಿದಂತೆ ಎಲ್ಲರನ್ನೂ ನಿರ್ವಹಿಸಿದೆ. ಮಹಿಳೆಯರು ಆದಷ್ಟೂ ಸ್ವಯಂ ಉದ್ಯೋಗ ಆರಂಭಿಸಿದರೆ ಉತ್ತಮ. ಇದ್ದರಿಂದ ಆತ್ಮಸ್ತೈರ್ಯ ಹೆಚ್ಚುತ್ತದೆ. ಹಾಗೇ ಇತರರಿಗೂ ಉದ್ಯೋಗ ನೀಡುವಂತಾಗುತ್ತದೆ ಎಂದು ಹೇಳಿದರು.

ಮೈಸೂರು ಲಿಟರರಿ ಫೋರಂ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷೆ ಶುಭಾ ಸಂಜಯ್ ಅರಸ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net