

ಇದು ಉದ್ಯಮ ಸ್ನೇಹಿ ಸ್ವಾಗತಾರ್ಹ ಬಜೆಟ್ ಎಂದು ಮೈಸೂರು ಕೈಗಾರಿಕೆಗಳ ಸಂಘ ಪ್ರಧಾನ ಕಾರ್ಯದರ್ಶಿ ಸುರೇಶ್‌ಕುಮಾರ್ ಜೈನ್ ತಿಳಿಸಿದ್ದಾರೆ.
ಕೇಂದ್ರ ಬಜೆಟ್‌ನ ಮೊದಲ ಇಂಜಿನ್ ಕೃಷಿ ಕ್ಷೇತ್ರವಾಗಿದ್ದರೆ, ಎರಡನೇ ಇಂಜಿನ್ ಎಂಎಸ್‌ಎಂಇಗಳಾಗಿವೆ. ಕಿಸಾನ್ ಕ್ರೆಡಿಟ್ ಸಾಲ ಮಿತಿ 5 ಲಕ್ಷ ರೂಪಾಯಿಗೆ ಏರಿಕೆ. ಎಸ್‌ಸಿ, ಎಸ್‌ಟಿ ಉದ್ಯಮಿಗಳ ಸ್ಟ್ಯಾಂಡ್ ಅಪ್ ಸಾಲ ಮಿತಿ 20 ಲಕ್ಷ ರೂಪಾಯಿ ಏರಿಕೆಯಾಗಿದೆ. ಬೀದಿ ಬದಿ ವ್ಯಾಪಾರಿಗಳಿಗೆ ಕ್ರೆಡಿಟ್ ಕಾರ್ಡ್ ಸಾಲ, ಎಂಎಸ್‌ಎಂಇ ಕ್ರೆಡಿಟ್ ವ್ಯಾಪ್ತಿ ಹೆಚ್ಚಳ, ಎಂಎಸ್‌ಎಂಇ ವರ್ಗೀಕರಣದ ಹೂಡಿಕೆ ಮಿತಿಯನ್ನು 2.5 ಪಟ್ಟು ಹೆಚ್ಚಿಸಲಾಗಿದೆ. ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳಿಗೆ ಇದನ್ನು 5 ಕೋಟಿ ರೂ.ಗಳಿಂದ 10 ಕೋಟಿ ರೂ.ಗಳಿಗೆ ಹೆಚ್ಚಿಸಲಾಗುವುದು. ಸ್ಟಾರ್ಟ್‌ಅಪ್‌ಗಳಿಗೆ ಇದನ್ನು 10 ಕೋಟಿ ರೂ.ಗಳಿಗೆ ಹೆಚ್ಚಿಸಲಾಗುವುದು ಎಂದಿರುವುದು ಸಮಾಧಾನ ತಂದಿದೆ. ಎಂಎಸ್‌ಎಂಇ ವರ್ಗೀಕರಣದ ಹೂಡಿಕೆ ಮಿತಿಯನ್ನು 2.5 ಪಟ್ಟು ಮಾಡಲಾಗುವುದು ಮತ್ತು ಎಂಎಸ್‌ಎಂಇ ವರ್ಗೀಕರಣದ ವಹಿವಾಟು ಮಿತಿಗಳನ್ನು ಸಹ ದ್ವಿಗುಣಗೊಳಿಸಲಾಗುವುದು ಎಂದು ಅವರು ಘೋಷಿಸಿರುವುದು ಅಸಮಾಧಾನ ತಂದಿದೆ. ಮೈಸೂರಿಗೆ ನಿರ್ದಿಷ್ಟ ಯೋಜನೆ ಇಲ್ಲದಿರುವುದು ಅಸಮಾಧಾನ ತಂದಿದೆ ಎಂದಿದ್ದಾರೆ.