ಉತ್ಪಾದಕರ ಸಂಘದಿಂದ ರೈತರಿಗೆ ಅನುಕೂಲ - ನಬಾರ್ಡ್ ಅಧಿಕಾರಿ ಭಾರದ್ವಾಜ ಹೇಳಿಕೆ

121
Published on

ಮುರಗೋಡ: ಶ್ರಮವಹಿಸಿ ದುಡಿಯುವ ರೈತರಿಗೆ ನೆರವಾಗಲೆಂದು ಸ್ಥಾಪನೆಯಾಗಿರುವ ರೈತ ಉತ್ಪಾದಕರ ಸಂಘ ಜಿಲ್ಲೆಯಲ್ಲಿ ಉತ್ತಮ ಹೆಸರು ಮಾಡಿದೆ ಎಂದು ನಬಾರ್ಡ್ ಮುಖ್ಯ ಅಧಿಕಾರಿ ಎಸ್.ಕೆ. ಭಾರದ್ವಾಜ ಮೆಚ್ಚುಗೆ ವ್ಯಕ್ತಪಡಿಸಿದರು.

ಸಮೀಪದ ಹೊಸೂರ ಗ್ರಾಮದ ಶ್ರೀ ಮಹಾಂತ ರೈತ ಉತ್ಪಾದಕರ ಸಂಘ ಶಾಖೆಗೆ ಭೇಟಿ ನೀಡಿ ರೈತರನ್ನು ಉದ್ದೇಶಿಸಿ ಮಾತನಾಡಿದರು. ಈ ಭಾಗದಲ್ಲಿ ಶೇ.70 ಜನರು ಕೃಷಿಯನ್ನೇ ಅವಲಂಬಿಸಿದ್ದಾರೆ. ರೈತ ಉತ್ಪಾದಕರ ಸಂಘದಿಂದ ಬಿತ್ತನೆ ಬೀಜ, ರಸಗೊಬ್ಬರ ಜತೆಗೆ ಕೃಷಿ ಯಂತ್ರಗಳನ್ನು ನೀಡಲಾಗುತ್ತಿದೆ.

ಸರ್ಕಾರದ ಸೌಲಭ್ಯವನ್ನು ತಲುಪಿಸುವುದಲ್ಲದೆ ಪ್ರತಿವರ್ಷ ಸದಸ್ಯರ ಸಂಖ್ಯೆ ಹೆಚ್ಚಿಸಬೇಕು ಎಂದರು. ಸಂಘದ ಅಧ್ಯಕ್ಷ ಮಹಾಂತೇಶ ಬಾಳಿಕಾಯಿ, ಕಾರ್ಯದರ್ಶಿ, ಪ್ರಕಾಶ ಸಿದ್ದಗೌಡರ, ಮಲ್ಲಿಕಾರ್ಜುನ ಸಂಪಗಾಂವ, ಸೋಮಪ್ಪ ಮೊಗಬಸವ, ನಿಂಗಪ್ಪ ಆರೇರ, ಗಂಗಾಧರ ಮೊಗಬಸವ, ಮಹಾಂತೇಶ ಮತ್ತಿಕೊಪ್ಪ, ಶ್ರೀಕಾಂತ ಪೂಜೇರಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net