ಉಡುಪಿ: ಜಿಲ್ಲೆಯಲ್ಲಿಕರೊನಾ ಆತಂಕ ಮುಂದುವರಿದ್ದು, ಭಾನುವಾರ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದ ಕಾಪು ತಾಲೂಕಿನ ವಿದ್ಯಾರ್ಥಿನಿಗೆ ಕರೊನಾ ಪಾಸಿಟಿವ್ ದೃಡಪಟ್ಟಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಈ ಬಾಲಕಿ ಕಾಪು ತಾಲೂಕು ವ್ಯಾಪ್ತಿಯೊಂದರ ಪರೀಕ್ಷಾ ಕೇಂದ್ರದಲ್ಲಿ ಜೂನ್ 25 ರಂದು ಗುರುವಾರ ಕನ್ನಡ,ಜೂನ್ 26 ರಂದು ಶನಿವಾರ ಗಣಿತ ಪರೀಕ್ಷೆ ಬರೆದಿದ್ದರು. ಮೊದಲು ಬಾಲಕಿಯ ತಂದೆಗೆ ಕರೊನಾ ಪಾಸಿಟಿವ್ ಇರುವ ಬಗ್ಗೆ ಜೂನ್ 27 ರಂದು ವರದಿ ಬಂದಿತ್ತು. ಈಕೆಯನ್ನು ಸಹ ಗಂಟಲುದ್ರವ ಪರೀಕ್ಷೆಗೆ ಒಳಪಡಿಸಲಾಗಿದ್ದು, ಇಂದು ಸೋಂಕು ಧೃಡಪಟ್ಟ ವರದಿ ಬಂದಿದೆ. ಜೂನ್.29 ರಂದು ನಡೆಯುವ ಎಸ್ಸೆಸ್ಸೆಲ್ಸಿ ವಿಜ್ಞಾನ ಪರೀಕ್ಷೆಯಿಂದ ಬಾಲಕಿ ವಂಚಿತಳಾಗಿದ್ದಾರೆ. ದೈಹಿಕ ಅಂತರ, ಸ್ಯಾನಿಟೈಸರ್ ಪ್ರಕ್ರಿಯೆ ಸೇರಿದಂತೆ ಕೋವಿಡ್ 19 ನಿಯಮಾವಳಿ ಅನುಸರಿಸಿದ್ದರಿಂದ ಕೇಂದ್ರದಲ್ಲಿ ಪರೀಕ್ಷೆ ಬರೆದಿದ್ದ ಇತರೆ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಒಳಪಡಿಸುವ ಅಗತ್ಯ ಇಲ್ಲ ಎಂಬ ಅಭಿಪ್ರಾಯವನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.