ಉಡುಪಿ ನಗರ ಮದ್ಯಭಾಗದಲ್ಲಿ ಹಳೆ ಕಟ್ಟಡ ಕುಸಿತ !

Published on

ಉಡುಪಿ: ನಗರದ ಮಧ್ಯಭಾಗದಲ್ಲಿದ್ದ ಹಳೆಕಾಲದ ಬಹುಮಹಡಿ ಕಟ್ಟಡದ ಪಾರ್ಶ್ವ ಭಾಗವೊಂದು ಕುಸಿದಿದೆ. ನಗರದ ಚಿತ್ತರಂಜನ್ ಸರ್ಕಲ್ ಸಮೀಪದ ರಾಯಲ್ ಮಹಲ್‌ ಕುಸಿದ ಕಟ್ಟಡ.ಈ ಹಳೆಯ ಕಟ್ಟಡದಲ್ಲಿ ಭಾರತೀಯ ಜನೌಷಧಿ ಕೇಂದ್ರ, ಹೋಟೆಲ್, ಬೇಕರಿ, ಚಿಪ್ಸ್ ಅಂಗಡಿ ಸೇರಿದಂತೆ ಐದಾರು ಅಂಗಡಿಗಳಿದ್ದ ಕಟ್ಟ

ಡವಿತ್ತು.ಕಟ್ಟಡ ಕುಸಿಯುತ್ತಿದ್ದಂತೆ ಕೆಲವರು ಕಟ್ಟಡದಿಂದ ಹೊರ ಬಂದಿದ್ದಾರೆ. ಅದೃಷ್ಟವಶತ್ ಪ್ರಾಣಾಪಾಯ ಸಂಭವಿಸಿಲ್ಲ. ಒಬ್ಬರು ಮಹಿಳೆಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿದ್ದು ಕಾರ್ಯಚರಣೆ ನಡೆಯುತ್ತಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net