

ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ನ್ಯೂ ಸಯ್ಯಾಜಿರಾವ್ ರಸ್ತೆ, ವಿಶ್ವೇಶ್ವರಯ್ಯ ವೃತ್ತ, ಮೈಸೂರು, ಇಲ್ಲಿನ ಸ್ವಸ್ಥವೃತ್ತ ಹೊರರೋಗಿ ವಿಭಾಗದಲ್ಲಿ (ರೂಂ ನಂ-12) ಜೂನ್ 24 ರಿಂದ ಜುಲೈ 24 ರ ವರೆಗೆ ರೂಮಟಾಯ್ಡ್ ಅರ್ಥ್ರೈಟಿಸ್ (ಆಮವಾತ) ಖಾಯಿಲೆಗೆ ತಜ್ಞ ವೈದ್ಯರಿಂದ ಉಚಿತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವನ್ನು ಬೆಳಗ್ಗೆ 9 ಗಂಟೆಯಿOದ ಮಧ್ಯಾಹ್ನ 1 ಗಂಟೆಯವರಗೆ ನಡೆಸಲಾಗುವುದು ಹಾಗೂ ಈ ಶಿಬಿರದಲ್ಲಿ ಉಚಿತ ಆಯುರ್ವೇದ ಔಷಧಿಗಳನ್ನು ವಿತರಿಸಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ರೂಮಟಾಯ್ಡ್ ಅ ಅರ್ಥ್ರೈಟಿಸ್ (ಆಮವಾತ) ಖಾಯಿಲೆಗೆ ಚಿಕಿತ್ಸೆ ನೀಡುವ ವೈದ್ಯರಾದ ಡಾ. ಶಾಂತಮ್ಮ ಅವರ ದೂ.ಸಂ: 7259568651 ನ್ನು ಸಂಪರ್ಕಿಸಬಹುದು ಎಂದು ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.