ಈಗಿನ ಜಾತಿಗಣತಿ ಅವೈಜ್ಞಾನಿಕ / ಎಲ್ಲಾ ಸಮುದಾಯದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಾತಿಗಣತಿ ನಡೆಸಲಿ / ನಿಖಿಲ್‌ಕುಮಾರಸ್ವಾಮಿ

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಜಾತಿ ಗಣತಿಯ ಲೋಪದೋಷ ಮತ್ತು ಸರ್ಕಾರದ ವೈಫಲ್ಯಗಳನ್ನು ಮುಚ್ಚಿಟ್ಟುಕೊಳ್ಳಲು ಜಾತಿಗಣತಿ ಕರೆಯುವಂತಹ ಪದ ಸೂಕ್ತವಲ್ಲ. ಜಾತಿಗಣತಿ ನಡೆಸಲು ಅಧಿಕಾರವಿರುವುದು ಸಂವಿಧಾನದ ಅಡಿಯಲ್ಲಿ ಕೇಂದ್ರ ಸರ್ಕಾರಕ್ಕೆ ಮಾತ್ರ ಇದೆ ಎಂದು ಯುವ ಜನತಾದಳದ ರಾಜ್ಯಾಧ್ಯಕ್ಷ ನಿಖಿಲ್‌ಕುಮಾರಸ್ವಾಮಿ ಅಭಿಪ್ರಾಯ ಪಟ್ಟರು.

ಕೋಲಾರಕ್ಕೆ ಖಾಸಗಿ ಕಾರ್ಯಕ್ರಮವೊಂದಕ್ಕೆ ಆಗಮಿಸಿದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿ, ಆರ್ಥಿಕ, ಸಾಮಾಜಿಕ ಸಮೀಕ್ಷೆಯನ್ನು ಮಾಡಲು ಅವಕಾಶವಿದೆ. ಕಳೆದ ೧೦ ವರ್ಷಗಳಿಂದ ೨೦೨೫ ರಿಂದ ಈಗಿನ ರಾಜ್ಯದ ಮುಖ್ಯಮಂತ್ರಿಗಳ ಮೊದಲನೇ ಅವಧಿಯಲ್ಲಿ ಜಾತಿ ಸಮೀಕ್ಷೆ ಮಾಡಬೇಕೆಂದು ಒಂದು ಆಯೋಗವನ್ನು ರಚನೆ ಮಾಡಿದರು.

ಆ ಆಯೋಗದ ಅಧ್ಯಕ್ಷರನ್ನಾಗಿ ಕಾಂತರಾಜು ರವರನ್ನು ನೇಮಿಸಿ ೫ ವರ್ಷಗಳಲ್ಲಿ ವರದಿಯನ್ನು ನೀಡಬೇಕೆಂದು ಸೂಚನೆ ನೀಡಿದ್ದರು. ಅವರು ವರದಿ ತಯಾರಿಸಿದರು, ಆದರೆ ಸದಸ್ಯರು ಮತ್ತು ಕಾರ್ಯದರ್ಶಿಗಳು ಸಹಿ ಮಾಡಲಿಲ್ಲ. ಆ ವರದಿ ಅವೈಜ್ಞಾನಿವಾಗಿ ಇತ್ತು ಎಂಬ ಕಾರಣಕ್ಕೆ ಕಮಿಟಿಯ ಸದಸ್ಯರು ಮತ್ತು ಕಾರ್ಯದರ್ಶಿಗಳು ಸಹಿ ಮಾಡಲಿಲ್ಲ. ಸದಸ್ಯರು ಮತ್ತು ಕಾರ್ಯದರ್ಶಿಗಳು ಸಹಿ ಮಾಡದ ಕಾರಣ ಕಾಂತರಾಜು ರವರಿಗೆ ಈ ವರದಿ ತಯಾರಿಸಿರುವುದು ಅವೈಜ್ಞಾನಿಕ ಎನಿಸುವ ಮಟ್ಟಕ್ಕೆ ಇತ್ತು.

ನಂತರ ಕುಮಾರಸ್ವಾಮಿಯವರು ಈ ರಾಜ್ಯದ ೨ ಬಾರಿ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ವರದಿ ಅವೈಜ್ಞಾನಿಕವಾಗಿದ್ದ ಕಾರಣ ಅದಕ್ಕೆ ಮುಖ್ಯಮಂತ್ರಿಗಳು ಸಹಿ ಮಾಡಲಿಲ್ಲ. ವರದಿಯನ್ನು ಸ್ವಾಗತಿಸುತ್ತೇವೆ. ಆದರೆ ಇದರ ಬಗ್ಗೆ ಹೆಚ್ಚಿಗೆ ಮಾತನಾಡಲು ಇಷ್ಟವಿಲ್ಲ. ಸರಿಯಾದ ಮಾರ್ಗದಲ್ಲಿ ಸರ್ವೇ ಮಾಡಿದ್ದರೆ ಆ ವರದಿಯನ್ನು ಸ್ವಾಗತಿಸಬಹುದಾಗಿತ್ತು. ಈಗಾಗಲೇ ವರದಿಯ ಬಗ್ಗೆ ವಿವರವಾಗಿ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದೇನೆ. ಹೆಚ್ಚಿಗೆ ಮಾತನಾಡಲು ಇಷ್ಟವಿಲ್ಲ ಎಂದರು.

ಜನತಾದಳ ಸ್ವಾಗತ :

ಜಾತಿಗಣತಿಯನ್ನು ಸ್ವಾಗತಿಸುತ್ತೇನೆ. ಇದರ ಉದ್ದೇಶ ಕಟ್ಟಕಡೆಯ ವ್ಯಕ್ತಿಗೂ, ಕಟ್ಟಕಡೆಯ ಗ್ರಾಮದಲ್ಲಿ ಸಿಗಬೇಕಾದ ಸೌಲಭ್ಯಗಳಿಂದ ವಂಚಿತನಾಗಿರುತ್ತಾನೆ. ಸರ್ಕಾರದ ಅಡಿಯಲ್ಲಿ ಹಲವಾರು ಕಾರ್ಯಕ್ರಮಗಳು ರೂಪಿಸಬೇಕಾಗಿದ್ದಂತಹ ಹಿನ್ನಲೆಯಲ್ಲಿ ಯಾರು ಯಾರು ಸಮಾಜದಲ್ಲಿ ಹಿಂದುಳಿದ ಸಮುದಾಯಗಳಲ್ಲಿ ಇರುತ್ತಾರೆಯೋ ಅವರನ್ನು ಗುರ್ತಿಸಿ ಮೇಲೆತ್ತುವಂತಹ ಕೆಲಸ ಸರ್ವೇಯಿಂದ ಆಗಬೇಕಾಗಿದೆ. ಇದರ ಉದ್ದೇಶವೇ ಅದು. ಅದು ಆಗದಿದ್ದಲ್ಲಿ ಪ್ರವೇಜನವೇ ಇಲ್ಲ. ತಮ್ಮ ತಮ್ಮ ರಾಜಕೀಯ ಕುರ್ಚಿ ಭದ್ರಪಡಿಸಿಕೊಳ್ಳಲು ತಮ್ಮ ರಕ್ಷಣೆಗೆ ತಮ್ಮ ಸುಖಕ್ಕಾಗಿ ಮಾಡಬೇಕಾದ ಕೆಲಸವಲ್ಲ. ಸರ್ವರಿಗೂ ಒಳ್ಳೇಯದಾಗಬೇಕು. ಕಟ್ಟಕಡೆಯ ವ್ಯಕ್ತಿಗೂ ಒಳ್ಳೇಯದು ಆಗಬೇಕು. ಅದಕ್ಕೆ ನಾವು ಬದ್ಧರಾಗಿರುತ್ತೇವೆ. ಈಗ ಮಾಡಿರುವಂತಹ ವರದಿ ಲೋಪದೋಷ ಇರುವುದು ಚರ್ಚೆಯಾಗಬೇಕಾಗಿದೆ. ಮುಂದಿನ ದಿನಗಳಲ್ಲಿ ಸರ್ವ ಸದಸ್ಯರ ಸಭೆ ಕರೆದು, ಧಾರ್ಮಿಕ ಗುರುಗಳು, ಸಂಘಟನೆಗಳು, ಸಂಘಗಳು ಎಲ್ಲರನ್ನು ಕರೆದು ಬಹಿರಂಗವಾಗಿ ಚರ್ಚಿಸಬೇಕಾಗಿದೆ.

ಇದಕ್ಕಾಗಿ ಖರ್ಚು ಮಾಡಿರುವ ೧೦ ಕೋಟಿ ಕನ್ನಡಿಗರ ಹಣ ಇದು ಚರ್ಚೆಯಾಗಬೇಕಾಗಿದೆ. ಕೋಲಾರ ಜಿಲ್ಲೆಯಲ್ಲಿ ಮರುಸು ವಕ್ಕಲಿಗರು ಮೂರು ಮುಕ್ಕಾಲು ಸಾವಿರ ಎಂದು ಹೇಳಿದೆ. ಇದಕ್ಕೆ ಈ ಜಿಲ್ಲೆಯವರಾದ ಕೃಷ್ಣಬೈರೇಗೌಡರೇ ಉತ್ತರ ನೀಡಬೇಕಾಗಿದೆ. ಎಲ್ಲಾ ಸಮುದಾಯದವರಿಗೂ ಅನ್ಯಾಯವಾಗದ ರೀತಿಯಲ್ಲಿ ಸಮೀಕ್ಷೆ ನಡೆಯಲಿ ಎಂಬುದು ನನ್ನ ಒತ್ತಾಯ ಎಂದರು.

ಈ ಸಂದರ್ಭದಲ್ಲಿ ಸಂಸದ ಮಲ್ಲೇಶ್‌ಬಾಬು, ಜೆಡಿಎಸ್. ಎಸ್.ಸಿ.ಘಟಕದ ಅಧ್ಯಕ್ಷ ನಾಗರಾಜ್ ಮುಂತಾದವರು ಇದ್ದರು.

ಚಿತ್ರ ೨೦ ಕೆ.ಎಲ್.ಆರ್. ೦೬ : ನಿಖಿಲ್ ಕುಮಾರಸ್ವಾಮಿ ಮಾಧ್ಯಮಗಳೊಂದಿಗೆ ಮಾತನಾಡುತ್ತಿರುವುದು, ಸಂಸದ ಮಲ್ಲೇಶ್‌ಬಾಬು, ಎಸ್.ಸಿ.ಘಟಕದ ಅಧ್ಯಕ್ಷ ನಾಗರಾಜ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net