ಈ ರಾಶಿಯವರು ಇಂದು ಯಾವುದೇ ವಿಷಯದ ಬಗ್ಗೆ ಅನೇಕ ಬಾರಿ ಯೋಚಿಸಿ ನಿರ್ಧರಿಸಿ: ನಿತ್ಯಭವಿಷ್ಯ

Nithya Bhavishya
Published on

ಮೇಷ: ತೊಂದರೆ ತಾಪತ್ರಯಗಳು ದೂರವಾಗಿ ಮಾನಸಿಕ ನೆಮ್ಮದಿ. ಗೆಳೆಯರೊಂದಿಗೆ ನಿಮ್ಮ ಸಂತೋಷವನ್ನು ಹಂಚಿಕೊಳ್ಳಿ. ಶುಭಸಂಖ್ಯೆ: 8

ವೃಷಭ: ಹಿತಮಿತ ಮಾತುಗಳಿಂದ ಜನಮನವನ್ನು ಗೆಲ್ಲುತ್ತೀರಿ. ಜನಪ್ರತಿನಿಧಿಗಳಿಗೆ ಮುಂದಾಳುಗಳಿಗೆ ವಿಶೇಷ ದಿನ. ತಾಳ್ಮೆ ಇರಲಿ. ಶುಭಸಂಖ್ಯೆ: 9

ಮಿಥುನ: ಬಹುದಿನದ ಬಯಕೆಯನ್ನು ಕುಟುಂಬದೊಂದಿಗೆ ಸಮಾಲೋಚಿಸಿ. ವ್ಯಾಪಾರ ಆರಂಭಿಸಲು ದೃಢ ನಿರ್ಧಾರ ತೆಗೆದುಕೊಳ್ಳಿ. ಶುಭಸಂಖ್ಯೆ: 1

ಕಟಕ: ನಕಾರಾತ್ಮಕ ಯೋಚನೆಗಳಿಂದ ದೂರವಿರಿ. ಹಳೆಯ ಯೋಜನೆಯನ್ನು ಕಾರ್ಯಗತಗೊಳಿಸಿಕೊಳ್ಳಿ. ಸ್ನೇಹಿತನ ಭೇಟಿ. ಶುಭಸಂಖ್ಯೆ: 5

ಸಿಂಹ: ಪ್ರತಿಭೆ, ಜಾಣತನಕ್ಕೆ ಪುರಸ್ಕಾರ. ಮಿತಿಮೀರಿದ ಉತ್ಸಾಹದಿಂದ ತೊಂದರೆಯಾಗ ಬಹುದು, ಯೋಚಿಸಿ ಮುಂದುವರಿಯಿರಿ. ಶುಭಸಂಖ್ಯೆ: 7

ಕನ್ಯಾ: ಆತ್ಮವಿಶ್ವಾಸದಿಂದ ಕಾರ್ಯನಿರ್ವಹಿಸಿದ ತೃಪ್ತಿ. ಪ್ರಭಾವಿಗಳೊಂದಿಗೆ ಸಂಪರ್ಕ ಬೆಳೆಯುತ್ತದೆ. ಇತಿ-ಮಿತಿ ಅರಿತು ಕೆಲಸ ಮಾಡಿ. ಶುಭಸಂಖ್ಯೆ: 3

ತುಲಾ: ಉದ್ದಿಮೆಗಳಿಗೆ ಸಂಬಂಧಿಸಿದಂತೆ ವಿಶೇಷ ವ್ಯಕ್ತಿಯ ಭೆೇಟಿ. ಅನಿರೀಕ್ಷಿತ ತಿರುವು. ಹಿರಿಯರ ಆರೋಗ್ಯದ ಕಡೆ ಗಮನ ವಹಿಸಿ. ಶುಭಸಂಖ್ಯೆ: 4

ವೃಶ್ಚಿಕ: ಹಣಕಾಸಿನ ವಿಚಾರದಲ್ಲಿ ಹಿಡಿತ ಇರಲಿ. ಅತ್ಯಂತ ಗಮನಾರ್ಹವಾದ ಸಾಧನೆ ನಿಮ್ಮದಾಗಲಿದೆ ದೂರ ಪ್ರಯಾಣ ಸಾಧ್ಯತೆ. ಶುಭಸಂಖ್ಯೆ: 9

ಧನುಸ್ಸು: ಕುಟುಂಬದವರಿಗೆ ಭರವಸೆ ಮೂಡಿಸುವಿರಿ. ಚಲನಚಿತ್ರ ನಟರಿಗೆ ಅನಾರೋಗ್ಯದ ಸಾಧ್ಯತೆ. ಸಂಗೀತಗಾರರಿಗೆ ವಿಶೇಷ ದಿನ. ಶುಭಸಂಖ್ಯೆ: 4

ಮಕರ: ಕೈಬಿಟ್ಟ ವ್ಯವಹಾರದಲ್ಲಿ ಅನಿರೀಕ್ಷಿತ ಯಶಸ್ಸು. ಮನೆಯಲ್ಲಿ ಶುಭ ಕಾರ್ಯಕ್ಕೆ ಚಾಲನೆ. ಹಣಕಾಸಿನ ವಿಚಾರದಲ್ಲಿ ಅಡಚಣೆ. ಶುಭಸಂಖ್ಯೆ: 3

ಕುಂಭ: ವಿದ್ಯಾಭ್ಯಾಸದಲ್ಲಿ ವಿಶೇಷ ಪ್ರಗತಿ. ಯೋಜಿತ ಕಾರ್ಯಗಳಲ್ಲಿ ಆತಂಕ ದೂರ. ಹೃದಯ ಸಂಬಂಧಿ ತೊಂದರೆ ಬರಬಹುದು. ಶುಭಸಂಖ್ಯೆ: 8

ಮೀನ: ಯಾವುದೇ ವಿಷಯದ ಬಗ್ಗೆ ಅನೇಕ ಬಾರಿ ಯೋಚಿಸಿ ನಿರ್ಧರಿಸಿ. ಹೊಸ ವ್ಯಾಪಾರವನ್ನು ಪ್ರಾರಂಭಿಸುವವರಿಗೆ ಶುಭದಿನ. ಶುಭಸಂಖ್ಯೆ: 3

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net