ಈ ರಾಶಿಯವರಿಗಿಂದು ಧನಾರ್ಜನೆಗೆ ಕೊರತೆ ಇರದು: ನಿತ್ಯಭವಿಷ್ಯ

Nithya Bhavishya
Published on

ಮೇಷ: ಅತಿ ಧಾರಾಳತನ. ದಾನ ಧರ್ಮದಿಂದ ಆರ್ಥಿಕ ತೊಂದರೆ. ಮಕ್ಕಳ ವಿಚಾರದಲ್ಲಿ ವಿಶೇಷ ಕಾಳಜಿ. ನೂತನ ಮಿತ್ರರ ಸಮಾಗಮ. ಶುಭಸಂಖ್ಯೆ: 9

ವೃಷಭ: ಸ್ತ್ರೀಯರ ಸಹಾಯದಿಂದ ಸಂಪತ್ತು ಪ್ರಾಪ್ತಿ. ದಾಂಪತ್ಯ ಸುಖ. ಮಕ್ಕಳ ವಿಚಾರದಲ್ಲಿ ಚರ್ಚೆ ಗೊಂದಲಕ್ಕೆ ಅವಕಾಶ ನೀಡದಿರಿ. ಶುಭಸಂಖ್ಯೆ: 6

ಮಿಥುನ: ಜಲೋತ್ಪನ್ನ ವಸ್ತುಗಳಿಂದ ಲಾಭ. ಮಿತ್ರರಲ್ಲಿ ಗುರು ಹಿರಿಯರಲ್ಲಿ ಸಹೋದ್ಯೋಗಿಗಳಲ್ಲಿ ತಾಳ್ಮೆಯಿಂದ ವ್ಯವಹರಿಸಿ. ಗುರಿತಲುಪಿ. ಶುಭಸಂಖ್ಯೆ: 1

ಕಟಕ: ಆರೋಗ್ಯದ ಬಗ್ಗೆ ಗಮನವಿರಲಿ. ನಿಮ್ಮಿಂದ ಸಹಾಯ ಪಡೆದುಕೊಳ್ಳುವವನಿಂದ ಮೋಸ ಹೋಗದಿರಿ. ನಿರೀಕ್ಷಿತ ಧನಾಗಮ. ಶುಭಸಂಖ್ಯೆ: 4

ಸಿಂಹ: ದೀರ್ಘ ಪ್ರಯಾಣ. ದೈಹಿಕ ಶ್ರಮವಿದ್ದರೂ ಬುದ್ಧಿಶಕ್ತಿ, ಧೈರ್ಯ ಉದಾರಾದಿ ಗುಣಗಳಿಂದ ಕಾರ್ಯಕ್ಷೇತ್ರದಲ್ಲಿ ಜನಮನ್ನಣೆ. ಶುಭಸಂಖ್ಯೆ: 3

ಕನ್ಯಾ: ಮಿತ್ರರಲ್ಲಿ, ಪಾಲುದಾರರಲ್ಲಿ ಆತ್ಮೀಯರಲ್ಲಿ ಸಂಶಯಕ್ಕೆ ಅವಕಾಶ ನೀಡದೇ ನೇರವಾಗಿ ವ್ಯವಹರಿಸಿ ನಿರೀಕ್ಷಿತ ಲಾಭ ಪಡೆಯಿರಿ. ಶುಭಸಂಖ್ಯೆ: 7

ತುಲಾ: ಸ್ಥಾನ ಗೌರವಾದಿ ಸುಖ. ಮಿತ್ರರ ಸಮಾಗಮ. ಧರ್ಮಕಾರ್ಯಗಳಲ್ಲಿ ಭಾಗವಹಿಸಿದ ತೃಪ್ತಿ. ದಂಪತಿಗಳಲ್ಲಿ ಅನುರಾಗ ವೃದ್ಧಿ. ಶುಭಸಂಖ್ಯೆ: 4

ವೃಶ್ಚಿಕ: ಅಧಿಕ ಶ್ರಮವಹಿಸಿ ಮಿತ್ರರ ಸಹಯೋಗದಿಂದ ಕಾರ್ಯ ಸಾಧಿಸಿದ ತೃಪ್ತಿ. ರಫ್ತು ಆಮದು ವ್ಯವಹಾರಗಳಲ್ಲಿ ಉತ್ತಮ ಅಭಿವೃದ್ಧಿ. ಶುಭಸಂಖ್ಯೆ: 1

ಧನುಸ್ಸು: ಗುರುಹಿರಿಯರಲ್ಲಿ. ಮೇಲಧಿಕಾರಿಗಳಲ್ಲಿ ಸಹನೆ ಉದಾರತನದಿಂದ ವ್ಯವಹರಿಸಿ ಕಾರ್ಯ ಸಾಧಿಸಿ. ಧನಾರ್ಜನೆಗೆ ಕೊರತೆ ಇರದು. ಶುಭಸಂಖ್ಯೆ: 8

ಮಕರ: ವಿದ್ಯಾರ್ಥಿಗಳಿಗೆ ಶ್ರಮದಿಂದ ಯಶಸ್ಸು. ದೂರದ ವ್ಯವಹಾರಗಳಲ್ಲಿ ಪ್ರಗತಿ. ಪಾಲುದಾರರು ಅನ್ಯೋನ್ಯದಿಂದ ವ್ಯವಹರಿಸಿ. ಶುಭಸಂಖ್ಯೆ: 9

ಕುಂಭ: ಶುಭಫಲ ಅನುಭವಿಸಿ. ದೂರ ಪ್ರಯಾಣದಿಂದ ಧನಾರ್ಜನೆ. ರಾಜಕೀಯ ಕ್ಷೇತ್ರದವರಿಗೆ, ಉನ್ನತ ಅಧಿಕಾರಿಗಳಿಂದ ಲಾಭ. ಶುಭಸಂಖ್ಯೆ: 2

ಮೀನ: ಸಹನೆಯಿಂದ ವ್ಯವಹರಿಸಿ. ಕಾರ್ವಿುಕ ವರ್ಗದವರಿಗೆ ಪ್ರೋತ್ಸಾಹಿಸಿ ನಿರೀಕ್ಷಿತ ಲಾಭ ಪಡೆಯಿರಿ. ಉದ್ಯೋಗದಲ್ಲಿ ಅಭಿವೃದ್ಧಿ. ಶುಭಸಂಖ್ಯೆ: 5

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net