ಈಜಲು ಹೋಗಿದ್ದ ಇಬ್ಬರು ಯುವಕರು ಸಾವು

2525
Published on

ಬೆಳಗಾವಿ: ತಾಲೂಕಿನ ಯರಮಾಳ ಬಳಿ ಕಲ್ಲಿನ ಕ್ವಾರಿಯಲ್ಲಿ ಈಜಲು ಹೋಗಿದ್ದ ಇಬ್ಬರು ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ನಗರದ ಹಿಂದವಾಡಿಯ ಗಣೇಶ ಶಾಮ ಕಾಂಬಳೆ(17), ಶಹಾಪುರದ ಪಿ.ಕೆ. ಕ್ವಾರ್ಟರ್ಸ್‌ನ ತೇಜಸ್ ಚಾರ್ಲಿಸ್ ಯಲಕಪಾಟಿ(19) ಮೃತರು. ಯುವಕರು ಫೋಟೋಶೂಟ್‌ಗಾಗಿ ರಾಜಹಂಸಗಡಕ್ಕೆ ತೆರಳಿದ್ದರು.

ಬಳಿಕ, ಈಜಲು ಕಲ್ಲಿನ ಕ್ವಾರಿಗೆ ಹೋದಾಗ ಅವಘಡ ಸಂಭವಿಸಿದೆ. ಘಟನಾ ಸ್ಥಳಕ್ಕೆ ತೆರಳಿದ ಅಗ್ನಿಶಾಮಕ ದಳ, ಎಸ್‌ಡಿಆರ್‌ಎಫ್ ಸಿಬ್ಬಂದಿ ಹಾಗೂ ಪೊಲೀಸರು ಯುವಕರ ಶೋಧನಾ ಕಾರ್ಯ ಕೈಗೊಂಡರು. ಈ ಕುರಿತು ಬೆಳಗಾವಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net