

ನಗರದ ಕೆಆರ್‌ಎಸ್ ರಸ್ತೆಯ ಲಕ್ಷ್ಮೀವೆಂಕಟರಮಣ ಸ್ವಾಮಿ ದೇವಸ್ಥಾನದ ಎದುರು ಸೋಮವಾರ ಮುಂಜಾನೆ ನಡೆದ ರಸ್ತೆ ಅಪಘಾತದಲ್ಲಿ ಇಬ್ಬರು ಪೊಲೀಸರು ಸೇರಿದಂತೆ ನಾಲ್ವರು ಗಾಯಗೊಂಡಿದ್ದಾರೆ.
ವಿವಿಪುರಂ ಠಾಣೆಯ ಯೋಗೇಶ್, ಸಿಎಆರ್‌ನ ಪೇದೆ ಜಗದೀಶ್, ಬನ್ನೂರಿನ ಚಂದ್ರು ಮತ್ತು ರಾಜು ಗಾಯಗೊಂಡಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸೋಮವಾರ ಬೆಳಗಿನ ಜಾವ 3 ಗಂಟೆ ಸಮಯದಲ್ಲಿ ವಿವಿ ಪುರಂ ಠಾಣೆಯ ಸಿಬ್ಬಂದಿ ಯೋಗೇಶ್ ಮತ್ತು ಜಗದೀಶ್ ಕೆಆರ್‌ಎಸ್ ರಸ್ತೆಯಲ್ಲಿ ತಪಾಸಣಾ ಕಾರ್ಯದಲ್ಲಿ ನಿರತರಾಗಿದ್ದಾಗ ದೇವರಾಜ ಠಾಣೆಯ ಪೊಲೀಸ್ ಪೇದೆ ಅಶೋಕ್ ಅವರು ಕಾರಿನಲ್ಲಿ ಬಂದಿದ್ದಾರೆ. ಈ ವೇಳೆ ಕರ್ತವ್ಯದಲ್ಲಿದ್ದ ಪೊಲೀಸರ ಡಿಕ್ಕಿ ಹೊಡೆದಿದಲ್ಲದೇ ಬೈಕಿನ ಬಳಿ ಇದ್ದ ಮತ್ತಿಬ್ಬರಿಗೂ ಸಹ ಕಾರಿನಲ್ಲಿ ಡಿಕ್ಕಿ ಹೊಡೆದು ರಸ್ತೆ ವಿಭಜಕ್ಕೆ ಢಿಕ್ಕಿ ಹೊಡೆದಿದ್ದಾರೆ. ತಕ್ಷಣ ಸ್ಥಳದಲ್ಲಿ ಗಾಯಗೊಂಡಿದ್ದ ಪೊಲೀಸ್ ಸಿಬ್ಬಂದಿ ಸೇರಿದಂತೆ ಇಬ್ಬರು ಸಾರ್ವಜನಿಕರನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಾಯಾಳುಗಳು ನೀಡಿದ ದೂರಿನ ಮೇರೆಗೆ ಈ ಸಂಬಂಧ ವಿವಿ ಪುರಂ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.