ಇಂದು ಈ ರಾಶಿಯವರ ಸಂಗಾತಿಗೆ ನೆರೆಹೊರೆಯವರಿಂದ ಗೌರವ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಬಟ್ಟೆ ಹಾಗೂ ಚಿನ್ನದ ವ್ಯಾಪಾರ ಮಾಡುವವರಿಗೆ ವಿಶೇಷ ಆದಾಯ. ಅಧಿಕಾರಿಗಳ ವ್ಯತಿರಿಕ್ತ ಸಲಹೆಯಿಂದಾಗಿ ನಷ್ಟ ಸಾಧ್ಯತೆ. ಶುಭಸಂಖ್ಯೆ: 1

ವೃಷಭ: ತರಕಾರಿ ವ್ಯಾಪಾರಸ್ಥರಿಗೆ ಅಧಿಕ ಲಾಭ. ಪತ್ನಿ ವರ್ಗದವರ ಮನೆಗಳಿಗೆ ಕುಟುಂಬ ಸಮೇತರಾಗಿ ಭೇಟಿ ನೀಡುವ ಸಾಧ್ಯತೆ. ಶುಭಸಂಖ್ಯೆ: 5

ಮಿಥುನ: ಉದ್ಯೋಗ ಬದಲಾವಣೆ ನಿರೀಕ್ಷೆ. ನೆರೆಹೊರೆಯ ವರೊಂದಿಗೆ ವಿರಸ ತಲೆದೋರಬಹುದು. ಸಂಗಾತಿಗೆ ಭಾಗ್ಯೋದಯ ಸಾಧ್ಯತೆ. ಶುಭಸಂಖ್ಯೆ: 2

ಕಟಕ: ತುರ್ತು ವಿಷಯಕ್ಕಾಗಿ ಪ್ರಯಾಣ. ಸಂಸಾರದಲ್ಲಿ ನೆಮ್ಮದಿ. ಅನಗತ್ಯ ಸುತ್ತಾಟದಿಂದ ದೇಹಾಲಸ್ಯ. ಗುರುದೇವತಾ ದರ್ಶನ ಸಾಧ್ಯತೆ. ಶುಭಸಂಖ್ಯೆ: 7

ಸಿಂಹ: ದಾಂಪತ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಿರಿ. ತೈಲ ವ್ಯಾಪಾರಿಗಳಿಗೆ ವ್ಯವಹಾರದ ವೃದ್ಧಿಯಿಂದಾಗಿ ಅಧಿಕ ಧನಲಾಭ. ಶುಭಸಂಖ್ಯೆ: 7

ಕನ್ಯಾ: ರಾಜಕಾರಣಿಗಳಿಗೆ ಆಶಾದಾಯಕ ದಿನ. ಸರ್ಕಾರಿ ಹುದ್ದೆಯಲ್ಲಿರುವವರು ಭ್ರಷ್ಟಾಚಾರದ ಆರೋಪವನ್ನು ಎದುರಿಸಬೇಕಾದೀತು. ಶುಭಸಂಖ್ಯೆ: 5

ತುಲಾ: ಆಮದು - ರಫ್ತು ವ್ಯವಹಾರದಲ್ಲಿ ತೊಡಗಿಕೊಂಡಿರುವವರಿಗೆ ಉತ್ತಮ ಲಾಭ. ಪಾಲುಗಾರಿಕೆ ವ್ಯವಹಾರದಲ್ಲಿ ಇರಿಸುಮುರಿಸು. ಶುಭಸಂಖ್ಯೆ: 9

ವೃಶ್ಚಿಕ: ಉದ್ಯೋಗ ಕ್ಷೇತ್ರದಿಂದ ಒಳ್ಳೆಯ ಸುದ್ದಿಯೊಂದನ್ನು ಕೇಳಲಿದ್ದೀರಿ. ಅತಿ ಕಾರ್ಯಬಾಹುಳ್ಯದಿಂದ ಕೌಟುಂಬಿಕ ವಿರಸ ಮೂಡೀತು. ಶುಭಸಂಖ್ಯೆ:1

ಧನುಸ್ಸು: ಮನೆಯ ಕೆಲಸಗಳು ಪೂರ್ಣಗೊಂಡು ನೆಮ್ಮದಿ. ಮಗಳಿಗೆ ವಿವಾಹ ವಿಷಯದಲ್ಲಿ ಪ್ರಸ್ತಾಪಗಳು ಬರಲಿವೆ. ಸಾಲದಿಂದ ಮುಕ್ತಿ. ಶುಭಸಂಖ್ಯೆ: 8

ಮಕರ: ಅಡೆತಡೆ ಇದ್ದರೂ ಶುಭಕಾರ್ಯದಲ್ಲಿ ಯಶ. ವಿಮಾ ಅಧಿಕಾರಿಗಳಿಗೆ ಸ್ಥಾನ ಬದಲಾವಣೆ. ರಾಸಾಯನಿಕ ವ್ಯವಹಾರದಲ್ಲಿ ಲಾಭ. ಶುಭಸಂಖ್ಯೆ: 7

ಕುಂಭ: ಸಂಗಾತಿಗೆ ನೆರೆಹೊರೆಯವರಿಂದ ಗೌರವ. ನವೀನ ವ್ಯವಹಾರದಲ್ಲಿ ಹೂಡಿಕೆ. ಹೊಸ ಉದ್ಯಮ ಶ್ರೇಯಸ್ಸನ್ನುಂಟು ಮಾಡಲಿದೆ. ಶುಭಸಂಖ್ಯೆ: 4

ಮೀನ: ಅಧಿಕಾರಿಗಳ ಅಸಹಕಾರ. ಸರ್ಕಾರದಿಂದ ಆಗಬೇಕಾದ ಕೆಲಸಗಳು ವಿಳಂಬವಾಗುವ ಸಾಧ್ಯತೆ. ಮಹಿಳೆಯರಿಗೆ ಆಭರಣ ಲಾಭ. ಶುಭಸಂಖ್ಯೆ: 2

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net