ಇಂದು ಈ ರಾಶಿಯವರ ಆರ್ಥಿಕ ಪರಿಸ್ಥಿತಿ ಉತ್ತಮಗೊಳ್ಳಲಿದೆ: ನಿತ್ಯಭವಿಷ್ಯ

Nithya Bhavishya
Published on

ಮೇಷ: ಯಶಸ್ವಿಯಾಗಿ ಜವಾಬ್ದಾರಿ ನಿರ್ವಹಿಸಿದ ಸಂತೃಪ್ತಿ. ಹೊಸ ಕೆಲಸಕ್ಕೆ ಚಾಲನೆ. ಮಕ್ಕಳ ಭವಿಷ್ಯಕ್ಕಾಗಿ ಕೂಡಿಟ್ಟ ಹಣ ಖರ್ಚು. ಶುಭಸಂಖ್ಯೆ: 9

ವೃಷಭ: ಮಾತಿನಲ್ಲಿ ನಿಗಾ ಇರಲಿ. ಭೂ ವಿವಾದಗಳನ್ನು ಎಚ್ಚರಿಕೆಯಿಂದ ನಿರ್ವಹಿಸಿ. ಹಳೆಯ ಕಾಯಿಲೆ ಪುನರಾವರ್ತನೆ ಆಗಬಹುದು. ಶುಭಸಂಖ್ಯೆ: 1

ಮಿಥುನ: ಕಚೇರಿಯಲ್ಲಿ ಬಿಗುವಿನವಾತಾವರಣ. ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ಇರಲಿ. ಆರ್ಥಿಕ ಪರಿಸ್ಥಿತಿ ಉತ್ತಮಗೊಳ್ಳಲಿದೆ. ಶುಭಸಂಖ್ಯೆ: 8

ಕಟಕ: ಜೀವನದಲ್ಲಿ ಪೂರ್ಣ ವಿಶ್ವಾಸದಿಂದ ಮುನ್ನಡೆಯಿರಿ. ಕುಟುಂಬದಲ್ಲಿ ಪ್ರಮುಖ ವಿಷಯಕ್ಕೆ ಮನಸ್ತಾಪ. ಸ್ನೇಹಿತರ ಸಮ್ಮಿಲನ. ಶುಭಸಂಖ್ಯೆ: 3

ಸಿಂಹ: ನಂಬಿದವರಿಂದಲೇ ಮೋಸ ಸಾಧ್ಯತೆ. ಸೌಂದರ್ಯವರ್ಧಕಗಳ ವ್ಯಾಪಾರಿಗಳಿಗೆ ಧನಲಾಭ. ಸಾಲ ಮಾಡುವಾಗ ಯೋಚಿಸಿ. ಶುಭಸಂಖ್ಯೆ: 2

ಕನ್ಯಾ: ವೈವಾಹಿಕ ಜೀವನದಲ್ಲಿ ತಿರುವು. ವಿದ್ಯಾರ್ಥಿಗಳಿಗೆ ಶುಭದಿನ. ವಿದೇಶ ಪ್ರಯಾಣಕ್ಕೆ ಸಿದ್ಧತೆ. ಅನಿರೀಕ್ಷಿತ ಧನಲಾಭ ಸಾಧ್ಯತೆ. ಶುಭಸಂಖ್ಯೆ: 7

ತುಲಾ: ಕನಸಿನ ಕಾರ್ಯಯೋಜನೆ ಸಫಲ. ಹೃದಯ ರೋಗಿಗಳಿಗೆ ಆರೋಗ್ಯದಲ್ಲಿ ಏರುಪೇರು. ಅಧಿಕಾರ ಕಳೆದುಕೊಳ್ಳುವ ಭೀತಿ. ಶುಭಸಂಖ್ಯೆ: 4

ವೃಶ್ಚಿಕ: ರಫ್ತು ವ್ಯಾಪಾರಿಗಳಿಗೆ ತೊಂದರೆ. ವೈಯಕ್ತಿಕವಾಗಿ ಪ್ರಗತಿ. ನಿಮ್ಮ ಪ್ರತಿಭೆಗೆ ಪುರಸ್ಕಾರದ ಗರಿಮೆ. ನಟರಿಗೆ ಅವಕಾಶ ಪ್ರಾಪ್ತಿ. ಶುಭಸಂಖ್ಯೆ: 6

ಧನುಸ್ಸು: ದುಬಾರಿ ವಸ್ತು ಕೊಳ್ಳುವ ಸಾಧ್ಯತೆ. ಹಳೆಯ ಸ್ನೇಹಿತನ ಭೇಟಿ. ಸಂತೋಷ. ವೃತ್ತಿಜೀವನದಲ್ಲಿ ಅಸಹನೆ. ಹಣಕಾಸಿನ ಯಶಸ್ಸು. ಶುಭಸಂಖ್ಯೆ: 4

ಮಕರ: ಅಧಿಕಾರದಲ್ಲಿರುವವರಿಗೆ ಕಿರಿಕಿರಿ. ಕುಟುಂಬ ದೊಂದಿಗೆ ಧಾರ್ವಿುಕ ಕ್ಷೇತ್ರಕ್ಕೆ ಭೇಟಿ. ಚಿಕ್ಕ ಪುಟ್ಟ ವಿಷಯಗಳಿಗೆ ಪ್ರತಿಕ್ರಿಯಿಸಬೇಡಿ. ಶುಭಸಂಖ್ಯೆ: 6

ಕುಂಭ: ನಿರೀಕ್ಷಿತ ಲಾಭ ಸಾಧ್ಯತೆ. ಉದ್ದಿಮೆದಾರರಿಗೆ ಹೂಡಿಕೆಗೆ ಅಡಚಣೆ. ಹಿರಿಯರ ಸಲಹೆ. ಪ್ರಮುಖ ವಿಷಯದಲ್ಲಿ ನಿಮ್ಮ ಮೇಲುಗೈ. ಶುಭಸಂಖ್ಯೆ: 3

ಮೀನ: ಸಾರ್ವಜನಿಕ ಸೇವೆಯಲ್ಲಿರುವವರಿಗೆ ಅಧಿಕ ಒತ್ತಡ. ಸಾಹಿತಿಗಳಿಗೆ, ಪತ್ರಕರ್ತರಿಗೆ ಶುಭದಿನ. ಸಾಲಗಾರರಿಂದ ಮಾನಸಿಕ ಹಿಂಸೆ. ಶುಭಸಂಖ್ಯೆ: 5

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net