ಇಂಜಿನಿಯರಿoಗ್ ಸ್ನಾತಕೋತ್ತರ ಪದವಿಯಲ್ಲಿ ಕೋಲಾರದ ಶ್ವೇತ ಟಾಫರ್ / ಪುಣೆ ವಿವಿ ಚಿನ್ನದ ಪದಕ ಪ್ರದಾನ

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ನಗರದ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಡಯಟ್ ಉಪಪ್ರಾಂಶುಪಾಲ ವೈ.ಎನ್.ರಾಮಕೃಷ್ಣಯ್ಯ ಅವರ ಪುತ್ರಿ ವೈ.ಆರ್.ಶ್ವೇತಾ ಇಂಜಿನಿಯರಿAಗ್ ಸ್ನಾತಕೋತ್ತರ ಪದವಿಯಲ್ಲಿ ರಾಷ್ಟçಮಟ್ಟದ ಟಾಫರ್ ಆಗಿ ಹೊರಹೊಮ್ಮುವ ಮೂಲಕ ಚಿನ್ನದ ಪದಕ ಗಳಿಸಿ ಸಾಧನೆ ಮಾಡಿದ್ದಾರೆ.

ಪುಣೆಯ ನ್ಯಾಷನಲ್ ಇನ್ಸಿಟ್ಯೂಟ್ ಆಫ್ ಕನ್ಸಟ್ರಕ್ಷನ್ ಮ್ಯಾನೇಜ್‌ಮೆಂಟ್ ಅಂಡ್ ರೀಸರ್ಚ್(ಎನ್‌ಐಸಿಎಂಆರ್ ಯೂನಿವರ್ಸಿಟಿ) ಕ್ಯಾಂಪಾಸ್‌ನಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟಮಟ್ಟದ ಟಾಫರ್ ಆಗಿ ಹೊರಹೊಮ್ಮಿರುವ ಶ್ವೇತಾ ಅವರಿಗೆ ಎನ್‌ಐಸಿಎಂಎಆರ್ ವಿವಿ ಹಾಗೂ ಬೋರ್ಡ್ ಆಫ್ ಹಿಂದುಸ್ತಾನ್ ಕನ್ಸಟ್ರಕ್ಷನ್ ಕಂಪನಿ ಲಿಮಿಟೆಡ್‌ನ ಛೇರ್‌ಮನ್ ಅಜಿತ್ ಗುಲಾಬ್‌ಚಂದ್ ಚಿನ್ನದ ಪದಕ ಪ್ರಧಾನ ಮಾಡಿದರು.

ಡಯಟ್ ಉಪಪ್ರಾಂಶುಪಾಲ ವೈ.ಎನ್.ರಾಮಕೃಷ್ಣಯ್ಯ ಹಾಗೂ ನಿರ್ಮಲ ದಂಪತಿಗಳ ಪುತ್ರಿಯಾಗಿರುವ ವೈ.ಆರ್.ಶ್ವೇತಾ ಇಂಜಿನಿಯರಿAಗ್ ಪದವಿಯಲ್ಲೂ ಸಾಧನೆ ಮಾಡಿದ್ದು, ಇದೀಗ ಪುಣೆಯ ಎನ್‌ಐಸಿಎಂಎಆರ್ ಯೂನಿವರ್ಸಿಟಿಯಲ್ಲಿ ಸ್ನಾತಕೋತ್ತರ ಇಂಜಿನಿಯರಿAಗ್ ಪದವಿಯಲ್ಲೂ ಅಖಿಲ ಭಾರತ ಮಟ್ಟದಲ್ಲಿ ಮೊದಲಿಗರಾಗಿ ಹೊರಹೊಮ್ಮುವ ಮೂಲಕ ಕರ್ನಾಟಕ ರಾಜ್ಯಕ್ಕೆ ಕೀರ್ತಿ ತಂದಿದ್ದು, ಅವರನ್ನು ಕೋಲಾರದ ಡಯಟ್‌ನ ಪ್ರಾಂಶುಪಾಲ ಕೆ.ಎನ್.ಜಯಣ್ಣ, ಉಪನ್ಯಾಸಕರಾದ ರಾಘವೇಂದ್ರ, ಬಾಲಾಜಿ, ಅಶೋಕ್, ವೀಣಾ, ಜಮೀಲ್, ಗಂಗಪ್ಪ, ಬಿ.ಜಿ.ನಾರಾಯಣಸ್ವಾಮಿ, ಸಮೀವುಲ್ಲಾ, ಶಕುಂತಲಾ, ಲಲಿತಮ್ಮ, ತಾಂತ್ರಿಕ ಸಹಾಯಕ ಡಾ.ನಾರಾಯಣಸ್ವಾಮಿ ಹಾಗೂ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.

ಚಿತ್ರ ೦೯ ಕೆ.ಎಲ್.ಆರ್. ೦೨ : ಕೋಲಾರದ ಡಯಟ್ ಉಪಪ್ರಾಂಶುಪಾಲ ವೈ.ಎನ್.ರಾಮಕೃಷ್ಣಯ್ಯ ಅವರ ಪುತ್ರಿ ವೈ.ಆರ್.ಶ್ವೇತಾ ಇಂಜಿನಿಯರಿAಗ್ ಸ್ನಾತಕೋತ್ತರ ಪದವಿಯಲ್ಲಿ ರಾಷ್ಟçಮಟ್ಟದ ಟಾಫರ್ ಆಗಿ ಹೊರಹೊಮ್ಮುವ ಮೂಲಕ ಚಿನ್ನದ ಪದಕ ಗಳಿಸಿ ಸಾಧನೆ ಮಾಡಿದ್ದು ಪುಣೆಯ ಎನ್‌ಐಸಿಎಂಎಆರ್ ವಿವಿ ಹಾಗೂ ಬೋರ್ಡ್ ಆಫ್ ಹಿಂದುಸ್ತಾನ್ ಕನ್ಸಟ್ರಕ್ಷನ್ ಕಂಪನಿ ಲಿಮಿಟೆಡ್‌ನ ಛೇರ್‌ಮನ್ ಅಜಿತ್ ಗುಲಾಬ್‌ಚಂದ್ ಚಿನ್ನದ ಪದಕ ಪ್ರಧಾನ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net