ಇ-ಹುಂಡಿ ಸ್ಕ್ಯಾನಿಂಗ್ ಕೋಡ್ ಅಳವಡಿಕೆ

13 KRN-2
ಕೆ.ಆರ್.ನಗರ ಹಳೆಎಡತೊರೆ ಅರ್ಕೇಶ್ವರ ಸ್ವಾಮಿ ದೇವಸ್ಥಾನಕ್ಕೆ ಇ-ಹುಂಡಿ ದೇಣಿಗೆ ಸ್ಕ್ಯಾನಿಂಗ್ ಕೋಡ್‌ನ್ನು ತಹಸೀಲ್ದಾರ್ ಎಸ್.ಸಂತೋಷ್, ಎಸ್‌ಬಿಐನ ಪ್ರಾದೇಶಿಕ ವ್ಯವಸ್ಥಾಪಕ ರಾಘವೇಂದ್ರ ನೇತೃತ್ವದಲ್ಲಿ ಅಳವಡಿಸಲಾಯಿತು. ಪ್ರತಾಪ್‌ಸಿಂಗ್, ಸಿ.ಚೇತನಾ, ಅಶೋಕ್ ಬಿಸ್ಟ್, ಶಿವಣ್ಣ ಇದ್ದರು.
Published on

ಕೆ.ಆರ್.ನಗರ: ದೇವಾಲಯಗಳಲ್ಲಿ ಹುಂಡಿಗೆ ಹಣ ವ್ಯತ್ಯಾಸವಾಗುವುದನ್ನು ತಪ್ಪಿಸಲು ಹಾಗೂ ಭಕ್ತರು ನೇರವಾಗಿ ದೇವಾಲಯದ ಖಾತೆಗೆ ಜಮೆಯಾಗುವಂತೆ ಮಾಡಲು ಇ-ಹುಂಡಿ ದೇಣಿಗೆ ಸ್ಕ್ಯಾನಿಂಗ್ ಕೋಡ್ ಅಳವಡಿಸಲಾಗಿದೆ ಎಂದು ತಹಸೀಲ್ದಾರ್ ಎಸ್.ಸಂತೋಷ್ ಹೇಳಿದರು.

ಪಟ್ಟಣದ ಹಳೆಎಡತೊರೆ ಶ್ರೀ ಅರ್ಕೇಶ್ವರಸ್ವಾಮಿ ದೇವಾಲಯಕ್ಕೆ ಭಾರತೀಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತಂಡದೊಂದಿಗೆ ದೇವಾಲಯದ ಮುಂಭಾಗ ಇ-ಹುಂಡಿ ದೇಣಿಗೆ ಸ್ಕ್ಯಾನಿಂಗ್ ಕೋಡ್ ಅಳವಡಿಸಿ ಮಾತನಾಡಿದರು.

ಭಕ್ತರು ತಮ್ಮ ಹರಕೆಯ ಹಣವನ್ನು ದೇವರ ಹುಂಡಿ ಬದಲು ನೇರವಾಗಿ ತಮ್ಮ ಮೊಬೈಲ್ ಮೂಲಕ ದೇವಾಲಯದ ಖಾತೆಗೆ ವರ್ಗಾಯಿಸುವ ಮೂಲಕ ತಮ್ಮ ಹರಕೆಯನ್ನು ತೀರಿಸಿದಂತಾಗುತ್ತದೆ. ಜೇಬಿನಲ್ಲಿ ಹಣ ಇಲ್ಲದಿದ್ದರೂ ಸುಲಭವಾಗಿ ಖಾತೆಯಿಂದ ಖಾತೆಗೆ ವರ್ಗಾಯಿಸಬಹುದು ಎಂದು ಹೇಳಿದರು.

ಎಸ್‌ಬಿಐ ಪ್ರಾದೇಶಿಕ ವ್ಯವಸ್ಥಾಪಕ ರಾಘವೇಂದ್ರ ಮಾತನಾಡಿ, ಇಂದು ಅರ್ಕೇಶ್ವರ ಸ್ವಾಮಿ ಮತ್ತು ಚುಂಚನಕಟ್ಟೆಯ ಶ್ರೀರಾಮ ದೇವರ ದೇವಸ್ಥಾನದಲ್ಲಿ ಅಳವಡಿಸಲಾಗಿದೆ. ಮುಂದಿನ ದಿನಗಳಲ್ಲಿ ಕೆ.ಆರ್.ನಗರ ಮತ್ತು ಸಾಲಿಗ್ರಾಮ ತಾಲೂಕಿನ 128 ದೇವಾಲಯಗಳಲ್ಲಿ ಇ-ಹುಂಡಿ ದೇಣಿಗೆ ಸ್ಕ್ಯಾನಿಂಗ್ ಅಳವಡಿಸಲಾಗುತ್ತದೆ ಎಂದರು.

ಪ್ರಾದೇಶಿಕ ವ್ಯವಸ್ಥಾಪಕ ಪ್ರತಾಪ್‌ಸಿಂಗ್, ಕೆ.ಆರ್.ನಗರ ಶಾಖೆ ವ್ಯವಸ್ಥಾಪಕಿ ಸಿ.ಚೇತನ, ಸಿಬ್ಬಂದಿ ಅಶೋಕ್ ಬಿಸ್ಟ್, ಶಿವಣ್ಣ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net