

ಬೆಂಗಳೂರು
ಕರ್ನಾಟಕ ಪರೀಾ ಪ್ರಾಧಿಕಾರ(ಕೆಇಎ) ಸಿಇಟಿ ದಾಖಲಾತಿ ಪರಿಶೀಲನೆಯನ್ನು ಆನ್ಲೈನ್ ನಡೆಸಿ ಇದೀಗ ಪಿಜಿಸಿಇಟಿ ದಾಖಲಾತಿ ಪರಿಶೀಲನೆಯನ್ನು ಆ್ಲೈನ್ ಮೂಲಕ ನಡೆಸಲು ನಿರ್ಧರಿಸಿದೆ.
ಸಿಇಟಿ ಅಭ್ಯರ್ಥಿಗಳಿಗಿಂತ ಪಿಜಿಸಿಇಟಿ ಅಭ್ಯರ್ಥಿಗಳ ಪ್ರಮಾಣ ಪತ್ರ, ಅಂಕಪಟ್ಟಿಗಳು ಹೆಚ್ಚಿಗೆ ಇರುವುದರಿಂದ ಆನ್ಲೈನ್ನಲ್ಲಿ ಇವೆಲ್ಲಾ ಅಂಕಪಟ್ಟಿಗಳನ್ನು ಅಪ್ಲೋಡ್ ಮಾಡುವುದು ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ ಎಂದು ಆ್ಲೈನ್ನಲ್ಲೇ ನಡೆಸಲು ಕೆಇಎ ನಿರ್ಧರಿಸಿ ವೇಳಾಪಟ್ಟಿ ಬಿಡುಗಡೆ ಮಾಡಿದೆ.
ಆ ಪ್ರಕಾರವಾಗಿ ಡಿ.13ರಿಂದ 17ರವರೆಗೆ 10 ಸಹಾಯವಾಣಿ ಕೇಂದ್ರಗಳಲ್ಲಿ ದಾಖಲಾತಿ ಪರಿಶೀಲನೆ ನಡೆಯಲಿದೆ. ಡಿ.16ರಂದು ಅಂಗವಿಕಲ ವಿದ್ಯಾರ್ಥಿಗಳಿಗೆ ಬೆ.11.30ಕ್ಕೆ ಮಲ್ಲೇಶ್ವರದಲ್ಲಿರುವ ಕೆಇಎ ಕಚೇರಿಯಲ್ಲಿ ವೈದ್ಯಕಿಯ ಮತ್ತು ಪ್ರಮಾಣ ಪತ್ರಗಳ ಪರಿಶೀಲನೆ ನಡೆಯಲಿದೆ.
2020ನೇ ಸಾಲಿನ ಎಂ.ಇ, ಎಂ.ಟೆಕ್, ಎಂ.ಆರ್ಕ್, ಎಂ.ಸಿ.ಎ ಕೋರ್ಸ್ಗಳ ಪ್ರವೇಶಾತಿಗೆ ಅರ್ಹತೆಯನ್ನು ಪಡೆಯುವುದಕ್ಕಾಗಿ ದಾಖಲಾತಿ ಪರಿಶೀಲನೆಯನ್ನು ನಡೆಸಲಾಗುತ್ತಿದೆ. ಸಾಮಾನ್ಯವಾಗಿ ಸಿಇಟಿ ಅಭ್ಯರ್ಥಿಗಳ ಪ್ರಮಾಣ ಪತ್ರಗಳು ಕಡಿಮೆ ಇರಲಿದ್ದು, ಪಿಜಿಸಿಇಟಿ ಅಭ್ಯರ್ಥಿಗಳ ಪ್ರಮಾಣ ಪತ್ರಗಳು 30ಕ್ಕೂ ಹೆಚ್ಚು ಇರುವುದರಿಂದ ಪ್ರತಿಯೊಂದನ್ನು ಸ್ಕಾ$ನ್ ಮಾಡಿ ಅಪ್ಲೋಡ್ ಮಾಡುವುದು ಅಭ್ಯರ್ಥಿಗಳಿಗೆ ಕಿರಿ&ಕಿರಿ ಉಂಟುಮಾಡುವುದರಿಂದ ಆ್ಲೈನ್ಗೆ ಮುಂದಾಗಿದ್ದೇವೆ ಎಂದು ಕೆಇಎ ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು, ಮೈಸೂರು, ಬಳ್ಳಾರಿ, ಬೆಳಗಾವಿ, ಕಲಬುರಗಿ, ಶಿವಮೊಗ್ಗ, ಮಂಗಳೂರು, ವಿಜಯಪುರ, ಧಾರವಾಡ, ದಾವಣಗೆರೆ ಕೇಂದ್ರಗಳಲ್ಲಿ ರ್ಯಾಂಕ್ ಆಧಾರದ ಮೇಲೆ ದಾಖಲಾತಿ ಪರಿಶೀಲನೆ ನಡೆಯಲಿದೆ. ಎಲ್ಲ ಮೂಲ ದಾಖಲೆಗಳನ್ನು ಮತ್ತು ಗೆಜೆಟೆಡ್ ಅಧಿಕಾರಿಯಿಂದ ದೃಢೀಕರಿಸಿರುವ ಪ್ರತಿಯನ್ನು ತರುವುದು ಕಡ್ಡಾಯವಾಗಿದೆ. ದಾಖಲಾತಿ ಪರಿಶೀಲನೆಗೆ ವಿದ್ಯಾರ್ಥಿಗಳೇ ನೇರವಾಗಿ ಹಾಜರಾಗಬೇಕು. ಅವರ ಪರವಾಗಿ ಬೇರೆ ಅವರು ಹಾಜರಾಗಲು ಅವಕಾಶ ನೀಡುವುದಿಲ್ಲವೆಂದು ಸ್ಪಷ್ಟವಾಗಿ ತಿಳಿಸಿದೆ. ಹೆಚ್ಚಿನ ಮಾಹಿತಿಗೆ ಅಭ್ಯರ್ಥಿಗಳು ಕೆಇಎ ವೆಬ್ಸೈಟ್ ಜಠಿಠಿಟ://ಛಿಚ.ಚ್ಟ.್ಞಜ್ಚಿ.ಜ್ಞಿ/ನೋಡಬಹುದು.