ಆವರ್ತಿ ಗ್ರಾಪಂಗೆ ಅವಿರೋಧ ಆಯ್ಕೆ

bylkuppe 1
ಆವರ್ತಿ ಗ್ರಾಮ ಪಂಚಾಯಿತಿಗೆ ಆಯ್ಕೆಯಾದ ಅಧ್ಯಕ್ಷೆ ಶಶಿಕಲಾ ಮತ್ತು ಉಪಾಧ್ಯಕ್ಷೆ ಸುಶೀಲಮ್ಮ ಅವರನ್ನು ಸದಸ್ಯರು ಅಭಿನಂದಿಸಿದರು. ಎಂ.ಬಿ ಶಿವಕುಮಾರ್, ಎಂ.ಕೆ ಶಿವ, ವಿಂದ್ಯಾಶ್ರೀ, ಪುಷ್ಪಲತಾ, ಎ.ಎಸ್.ಮಂಜು, ಎಂ.ಬಿ ಶಿವಕುಮಾರ್, ಎಂ.ಟಿ.ನಾಗಪ್ಪ, ಡಿ.ಎಂ.ಮೋಹನ್‌ಕುಮಾರ್, ಬಸಮಣಿ ಇದ್ದರು.
Published on

ಬೈಲಕುಪ್ಪೆ: ಸಮೀಪದ ಆವರ್ತಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಶಶಿಕಲಾ ವೆಂಕಟೇಶ್ ಹಾಗೂ ಉಪಾಧ್ಯಕ್ಷರಾಗಿ ಸುಶೀಲಮ್ಮ ಮಂಗಳವಾರ ಅವಿರೋಧ ಆಯ್ಕೆಯಾದರು.

ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಶಶಿಕಲಾ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸುಶೀಲಮ್ಮ ಹೊರತುಪಡಿಸಿ ಬೇರ‌್ಯಾರೂ ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ವೆಂಕಟೇಶ್ ಅವಿರೋಧ ಆಯ್ಕೆ ಘೋಷಿಸಿದರು.

ಸದಸ್ಯರಾದ ಎಂ.ಬಿ ಶಿವಕುಮಾರ್, ಎಂ.ಕೆ ಶಿವ, ವಿಂದ್ಯಾಶ್ರೀ, ಪುಷ್ಪಲತಾ, ಎ.ಎಸ್.ಮಂಜು, ಎಂ.ಬಿ ಶಿವಕುಮಾರ್, ಎಂ.ಟಿ.ನಾಗಪ್ಪ, ಡಿ.ಎಂ.ಮೋಹನ್‌ಕುಮಾರ್, ಬಸಮಣಿ, ಪಿಡಿಒ ಅಭಿ ಮಹಮದ್, ಕಾರ್ಯದರ್ಶಿ ಮಾದೇಶ್, ಬಿಲ್ ಕಲೆಕ್ಟರ್ ಯೋಗನಾಯಕ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net