ಆರ್‌ಟಿಇ ಅಡಿ ಖಾಸಗಿ ಶಾಲೆಗಳ ದಾಖಲಾತಿಗೆ ಅರ್ಜಿ ಸಲ್ಲಿಕೆಗೆ ಮೇ.೧೨ ಕೊನೆ ದಿನಾಂಕ / ಬಿಇಒ ಮಧುಮಾಲತಿ ಪಡುವಣೆ

Published on

ವಿಜಯವಾಣಿ ಸುದ್ದಿಜಾಲ ಕೋಲಾರ

ಆರ್‌ಟಿಇ ಅಡಿ ಖಾಸಗಿ ಶಾಲೆಗಳ ದಾಖಲಾತಿಗೆ ಪೋಷಕರು ಅರ್ಜಿ ಸಲ್ಲಿಸಲು ಏ.೧೫ ರಿಂದ ಮೇ.೧೨ ರವರೆಗೂ ಅವಕಾಶ ಕಲ್ಪಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಧುಮಾಲತಿ ಪಡುವಣೆ ತಿಳಿಸಿದರು.

ಈ ಕುರಿತು ಮಾಹಿತಿ ನೀಡಿರುವ ಅವರು, ಪೋಷಕರು ಆನ್‌ಲೈನ್‌ನಲ್ಲಿ ಸಲ್ಲಿಸಿದ ಅರ್ಜಿಗಳ ದತ್ತಾಂಶದ ನೈಜತೆ ಪರಿಶೀಲನಾ ಕಾರ್ಯ ಏ.೧೬ ರಿಂದ ಮೇ.೧೪ ರವರೆಗೂ ನಡೆಯಲಿದೆ.

ಲಾಟರಿ ಪ್ರಕ್ರಿಯೆಗೆ ಅರ್ಹ ಅಭ್ಯರ್ಥಿಗಳ ಅಂತಿಮ ಪಟ್ಟಿ ಪ್ರಕಟಣೆ ಮೇ.೧೭ ಆಗಿದ್ದು, ಆನ್‌ಲೈನ್ ತಂತ್ರಾAಶದ ಮೂಲಕ ಮೊದಲ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ಶಾಲಾ ಶಿಕ್ಷಣ ಇಲಾಖೆ ಆಯುಕ್ತರ ಕಚೇರಿಯಲ್ಲಿ ಮೇ.೨೧ ರಂದು ನಡೆಯಲಿದೆ ಎಂದು ತಿಳಿಸಿದರು.

ಶಾಲೆಗಳಲ್ಲಿ ಮೇ.೨೨ ರಿಂದ ಮೇ.೩೧ ರವರೆಗೂ ದಾಖಲಾತಿ ಆರಂಭಗೊಳ್ಳುತ್ತಿದ್ದು, ಶಾಲಾ ಮುಖ್ಯಸ್ಥರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೇಲುಸ್ತುವಾರಿಯಲ್ಲಿ ನಡೆಯಲಿದೆ. ಇದಾದ ನಂತರ ಶಾಲಾ ಮುಖ್ಯಸ್ಥರು ಶಾಲೆಗೆ ದಾಖಲಾತಿ ಮೊದಲ ಸುತ್ತಿನ ಮಕ್ಕಳ ವಿವರಗಳನ್ನು ಅಪ್‌ಲೋಡ್ ಮಾಡಲು ಮೇ.೨೨ ರಿಂದ ಜೂ.೪ ರವರೆಗೂ ಅವಕಾಶ ನೀಡಲಾಗಿದೆ.

ಆನ್‌ಲೈನ್ ತಂತ್ರಾAಶದ ಮೂಲಕ ಎರಡನೇ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ಜೂ.೯ ರಂದು ಆಯುಕ್ತರ ಕಚೇರಿಯ ಎನ್‌ಐಸಿ ಇ-ಆಡಳಿತ ಹಾಗೂ ಸಾಫ್ಟ್ವೇರ್ ಡೆವಲಪ್‌ಮೆಂಟ್ ಕೇಂದ್ರದಲ್ಲಿ ನಡೆಯಲಿದೆ.

೨ನೇ ಸುತ್ತಿನ ಸೀಟು ಹಂಚಿಕೆಯಾದ ಸೀಟುಗಳಿಗೆ ಶಾಲೆಗಳಲ್ಲಿ ದಾಖಲಾತಿಗೆ ಜೂ.೧೦ ರಿಂದ ಜೂ.೨೦ರವರೆಗೂ ನೀಡಲಾಗಿದ್ದು, ಶಾಲೆಗಳವರು ದಾಖಲಾದ ಎರಡನೇ ಸುತ್ತಿನ ಮಕ್ಕಳ ವಿವರಗಳ್ನು ಜೂ.೧೧ ರಿಂದ ಜೂ.೨೫ ರೊಳಗೆ ಆನ್‌ಲೈನ್ ತಂತ್ರಾAಶಗಳಲ್ಲಿ ಅಳವಡಿಸಬೇಕು ಎಂದು ಮಾಹಿತಿ ನೀಡಿದ್ದಾರೆ.

ಆರ್‌ಟಿಇ ದಾಖಲಿಗೆ ಅವಕಾಶದ ಶಾಲೆಗಳು :

ಕೋಲಾರ ತಾಲ್ಲೂಕಿನ ದಿಂಬ ಗ್ರಾಮದ ರಾಧಾಕೃಷ್ಣ ಪ್ರಾಥಮಿಕ ಶಾಲೆ, ಕೆಂಬೋಡಿ ಜನತಾ ಪ್ರಾಥಮಿಕ ಶಾಲೆ, ಸುಗಟೂರಿನ ಸಬರಮತಿ ಪ್ರೌಢಶಾಲೆ, ತಲಗುಂದದ ಜ್ಞಾನಮಂದಿರ ಶಾಲೆ, ನಗರದ ಗಾಂಧಿನಗರದ ಆನಂದಮೂರ್ತಿ ಶಾಲೆ, ಕೋಲಾರದ ಮಹಿಳಾ ಸಮಾಜ ಕನ್ನಡ ಮಾಧ್ಯಮ ಶಾಲೆ, ಹಾರೋಹಳ್ಳಿಯ ರಮಣಮಹರ್ಷಿ ವಿದ್ಯಾಲಯ, ಕೋಲಾರದ ಕಾರಂಜಿಕಟ್ಟೆಯ ಸುಭಾಷ್‌ಶಾಲೆ, ಕ್ಯಾಲನೂರು ಕ್ರಾಸ್ ವಿಶ್ವನಗರದ ಅರುಣೋದಯ ಶಾಲೆ, ಮಿಟ್ಟಕಲ್ಲಹಳ್ಳಿಯ ಆರ್.ಎಲ್.ಜಾಲಪ್ಪ ಕೇಂದ್ರೀಯ ಶಾಲೆಗಳಿಗೆ ಆರ್‌ಟಿಇ ಅಡಿ ದಾಖಲಾತಿಗೆ ಅವಕಾಶ ನೀಡಲಾಗಿದೆ.

ಚಿತ್ರ ೦೯ ಕೆ.ಎಲ್.ಆರ್. ೦೮ : ಕೋಲಾರ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಮಧುಮಾಲತಿ ಪಡುವಣೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net