ಆರ್‌ಕೆವಿವೈಯಡಿ ಮಣ್ಣು ಆರೋಗ್ಯ ಪರೀಕ್ಷೆ ಗುರಿ ಹೆಚ್ಚಳ

CTD SAIL TEST CENTER--------
filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;HdrStatus: auto;albedo: ;confidence: ;motionLevel: -1;weatherinfo: null;temperature: 40;
Published on

ಡಿಪಿಎನ್ ಶ್ರೇಷ್ಠಿ,ಚಿತ್ರದುರ್ಗ

ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಈ ಬಾರಿ ಮಣ್ಣು ಪರೀಕ್ಷೆ ಗುರಿ ಹೆಚ್ಚಾಗಿದೆ. ಕಳೆದ ಸಾಲಿನಲ್ಲಿದ್ದ 2,68,000 ಗುರಿಯನ್ನು ಪ್ರಸಕ್ತ ಸಾಲಿನಲ್ಲಿ 3 ಲಕ್ಷಕ್ಕೆ ಹೆಚ್ಚಿಸಲಾಗಿದೆ. ನಾವು ಸತ್ತರೆ ಮಣ್ಣಿಗೆ,ಮಣ್ಣು ಸತ್ತರೆ ಎಲ್ಲಿಗೆ ಎಂಬ ಘೋಷವಾಕ್ಯದೊಂದಿಗೆ ಮಣ್ಣಿನ ಫಲವತ್ತತೆ ಕಾಪಾಡುವ ನಿಟ್ಟಿನಲ್ಲಿ ಕೇಂದ್ರ ಯೋಜನೆಗೆ ಪೂರಕವಾಗಿ ರಾಜ್ಯಸರ್ಕಾರ 2014-15ನೇ ಸಾಲಿನಿಂದ ಕೃಷಿ ಇಲಾಖೆ ಮೂಲಕ ರಾಜ್ಯದ ವಿ ವಿಧೆಡೆ ಮಣ್ಣು ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಿದೆ.

ಇಲ್ಲಿ ಮಣ್ಣು ಪರೀಕ್ಷೆ ನಡೆಸಿ ರೈತರಿಗೆ ಮಣ್ಣು ಆರೋಗ್ಯ ಕಾರ್ಡ್‌ಗಳನ್ನು ವಿತರಿಸಿಕೊಂಡು ಬರಲಾಗಿದೆ. ಜಮೀನುಗಳಿಗೆ ಇಲಾಖೆ ಸಿ ಬ್ಬಂದಿ ತೆರಳಿ ಮಣ್ಣಿನ ಸ್ಯಾಂಪಲ್ ಸಂಗ್ರಹಿಸಿ ಪರೀಕ್ಷೆ ಮಾಡಿ ಸೂಕ್ತ ಸಲಹೆ ಕೊಡುವ ಗುರಿ ನಿಗದಿಯಾಗುತ್ತದೆ. ಈ ಗುರಿಯೊಂದಿಗೆ ರಾ ಷ್ಟ್ರೀಯ ಆಹಾರ ಭದ್ರತೆಯಡಿ ಸದ್ಯದಲ್ಲೇ ಪ್ರತ್ಯೇಕ ಗುರಿ ನಿಗದಿಯಾಗಲಿದೆ ಎನ್ನಲಾಗಿದೆ.

ಮಣ್ಣಿನ ಪರೀಕ್ಷೆಯೊಂದಿಗೆ,ನೀರಿನ ಗುಣಮಟ್ಟದ ಪರೀಕ್ಷೆಯನ್ನೂ ಮಾಡಲಾಗುತ್ತಿದೆ. ಮಣ್ಣಿನ ಪರೀಕ್ಷೆ 200 ರೂ.ನೀರಿನ ಪರೀಕ್ಷೆಗೆ 100 ರೂ.ಶುಲ್ಕವಿದೆ. ರೈತರು ಖುದ್ದು ಮಣ್ಣು ಮತ್ತು ನೀರನ್ನು ಈ ಘಟಕಗಳಿಗೆ ತೆಗೆದುಕೊಂಡು ಬಂದು ಪರೀಕ್ಷೆ ಮಾಡಿಸಿ ಸಲಹೆ ಪಡೆ ಯಬಹುದಾಗಿದೆ.

ಇಸಿ(ವಿದ್ಯುತ್‌ವಾಹಕತೆ)ಪಿಎಚ್(ರಸಸಾರ),ಸಾರಜನಕ,ರಂಜಕ,ಗಂಧಕ,ಪೋಟ್ಯಾಷ್,ಸತು,ಬೋರಾನ್, ಕಬ್ಬಿಣ,ಮ್ಯಾಂಗನೀಸ್, ತಾಮ್ರ ಇತ್ಯಾದಿಗಳ ಪ್ರಮಾಣ ಪರೀಕ್ಷಿಸಿ,ಜಮೀನು ಫಲವತ್ತತೆ ಹೆಚ್ಚಿಸಲು ರಾಸಾಯನಿಕ ಗೊಬ್ಬರ,ಸಾವಯವ ಗೊಬ್ಬರ ಇತ್ಯಾದಿ ಪೂರಕ ಪೋಷಷಕಾಂಶಗಳನ್ನು ಒದಗಿಸಲು ರೈತರಿಗೆ ಸಲಹೆ ಕೊಡಲಾಗುತ್ತಿದೆ. ಇಸಿ ಮತ್ತು ಪಿಎಸ್ ಪರೀಕ್ಷೆ ನಡೆಸಿ ನೀರಿನ ಗುಣಮಟ್ಟವನ್ನೂ ತಿಳಿ ಸಲಾಗುತ್ತದೆ.

ಆರ್‌ಕೆವಿವೈಯಡಿ ಈ ಬಾರಿಯ ಗುರಿ

ಬಾಗಲಕೋಟೆ 13250.ಬಳ್ಳಾರಿ 7750.ಬೆಂಗಳೂರು ನಗರ 2375. ಬೆಂಗಳೂರು ಗ್ರಾಮಾಂತರ 5125. ಬೆಳಗಾವಿ 13875.ಬೀದ ರ್ 11750.ಚಾಮರಾಜನಗರ 7625. ಚಿಕ್ಕಮಗಳೂರು-10000. ಚಿಕ್ಕಬಳ್ಳಾಪುರ 8250.ಚಿತ್ರದುರ್ಗ 11875. ದಕ್ಷಿಣಕನ್ನಡ 6625.ದಾವಣಗೆರೆ 11000.

ಧಾರವಾಡ 10100. ಗದಗ 7625.ಹಾಸನ 10000. ಹಾವೇರಿ 10125. ಕಲಬುರುಗಿ 12000. ಕೊಡಗು 8125. ಕೋಲಾರ 82 50. ಕೊಪ್ಪಳ 10250. ಮಂಡ್ಯ 8750. ಮೈಸೂರು 10500. ರಾಯಚೂರು 13000. ರಾಮನಗರ 7250. ಶಿವಮೊಗ್ಗ 10400.ತು ಮಕೂರು 13750. ಉಡುಪಿ 6875. ಉತ್ತರಕನ್ನಡ 11875. ವಿಜಯನಗರ 10625. ವಿಜಯಪುರ 12750.ಯಾದಗಿರಿ 8250.

ಚಿತ್ರದುರ್ಗ ಪ್ರಥಮ

ಕಳೆದ ಮಣ್ಣು ಪರೀಕ್ಷೆಯಲ್ಲಿ ಚಿತ್ರದುರ್ಗ ಪ್ರಥಮ,ಕಲಬುರಗಿ ದ್ವಿತೀಯ ಹಾಗೂ ಬಾಗಲಕೋಟೆ ತೃತೀಯ ಸ್ಥಾನವನ್ನು ಪಡೆದಿದ್ದರೆ,ಬೆಂಗಳೂರು ನಗರ ರಾಜ್ಯದಲ್ಲೇ ಕೊನೆಯ ಸ್ಥಾನದಲ್ಲಿದೆ. ಚಿತ್ರದುರ್ಗದಲ್ಲಿ ಕೃಷಿ ತಂತಜ್ಞರ ಸಂಸ್ಥೆ ಹಾಗೂ ಹಿರಿಯೂರು ತಾಲೂಕು ಬಬ್ಬೂ ರು ಕೃಷಿ ವಿಜ್ಞಾನ ಕೇಂದ್ರದಲ್ಲೂ ಸಾಯಿಲ್ ಟೆಸ್ಟ್ ಮಾಡಲಾಗುತ್ತದೆ.

---

ಕೋಟ್

ಮುಂಗಾರು ಬಿತ್ತನೆ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಮಣ್ಣಿನ ಫಲವತ್ತೆ ಅರಿತು ರೈತರು ಸೂಕ್ತ ಗೊಬ್ಬರ ಮತ್ತಿತರ ಪೋಷಕಾಂಶ ಗಳನ್ನು ಜಮೀನಿಗೆ ಕೊಡಬೇಕಾಗುತ್ತದೆ. ಈಗಾಗಲೇ 8246 ಸ್ಯಾಂಪಲ್‌ಗಳನ್ನು ಸಂಗ್ರಹಿಸಲಾಗಿದ್ದು,ವಿಶ್ಲೇಷಣೆ ಕಾರ‌್ಯ ಆರಂಭವಾಗ ಬೇಕಿ ದೆ.ಹಸಿರೆಲೆ,ಎರೆಹುಳ,ಕೊಟ್ಟಿಗೆ ಗೊಬ್ಬರ ಇತ್ಯಾದಿಗಳೊಂದಿಗೆ ಮಣ್ಣಿನ ಫಲವತ್ತೆಯನ್ನು ಕಾಪಾಡಿಕೊಳ್ಳಲು ಆದ್ಯತೆ ಕೊಡಬೇಕಿದೆ.

ಟಿ.ಪಿ.ರಂಜಿತಾ,ಸಹಾಯಕ ಕೃಷಿ ನಿರ್ದೇಶಕರು,ಮಣ್ಣು ಆರೋಗ್ಯ ಕೇಂದ್ರ,ಚಿತ್ರದುರ್ಗ

---

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net